ಆ್ಯಪ್ನಗರ

ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ಗೆ ಹುಟ್ಟು ಹಬ್ಬದ ಸಂಭ್ರಮ

ಡೈನಾಮಿಕ್‌ ಪ್ರಿನ್ಸ್ ಪ್ರಜ್ವಲ್‌ ದೇವರಾಜ್‌ಗೆ 31ನೇ ಹುಟ್ಟುಹಬ್ಬದ ಸಂಭ್ರಮ. ಪ್ರಜ್ವಲ್‌ ದೇವರಾಜ್‌ ಸ್ಯಾಂಡಲ್‌ವುಡ್‌ಗೆ 2007ರಲ್ಲಿ ಸಿಕ್ಸರ್‌ ಚಿತ್ರದ ಮೂಲಕ ಪರಿಚಯವಾದರು.

Vijaya Karnataka Web 4 Jul 2018, 12:04 pm
ಡೈನಾಮಿಕ್‌ ಪ್ರಿನ್ಸ್ ಪ್ರಜ್ವಲ್‌ ದೇವರಾಜ್‌ಗೆ 31ನೇ ಹುಟ್ಟುಹಬ್ಬದ ಸಂಭ್ರಮ. ಪ್ರಜ್ವಲ್‌ ದೇವರಾಜ್‌ ಸ್ಯಾಂಡಲ್‌ವುಡ್‌ಗೆ 2007ರಲ್ಲಿ ಸಿಕ್ಸರ್‌ ಚಿತ್ರದ ಮೂಲಕ ಪರಿಚಯವಾದರು.
Vijaya Karnataka Web prajwal devraj 3


ಇವರ ಅಭಿನಯದ 'ಗೆಳೆಯ' ಬಾಕ್ಸ್ ಆಫೀಸ್‌ ಹಿಟ್‌ ಪಡೆದ ಬಳಿಕ ಅರಮನೆ, ಗುಲಾಬಿ, ಮೃಗಶಿರ, ನೀನಾದೆನಾ, ಸೂಪರ್‌ ಶಾಸ್ತ್ರಿ, ಭುಜಂಗ, ಚೌಕ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರಿಯರ ಮನದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಇವರು ಮುಖ್ಯ ಭೂಮಿಕೆಯಲ್ಲಿರುವ 'Life ಜೊತೆ ಒಂದ್‌ Selfie' ಚಿತ್ರ ತೆರೆಕಾಣಲು ಸಿದ್ಧವಾಗಿದೆ. ಪ್ರಜ್ವಲ್‌ ಜತೆ ಪ್ರೇಮ್, ಹರಿಪ್ರಿಯ, ಸಾಧುಕೋಕಿಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಜುಲೈ 13ಕ್ಕೆ ಪ್ರದರ್ಶನವಾಗಲಿದೆ.
ಮತ್ತೊಂದು ಹೊಸ ಚಿತ್ರ 'ಇನ್ಸ್‌ಪೆಕ್ಟರ್‌ ವಿಕ್ರಂ' ಟೀಸರ್‌ ಕೂಡ ಬಿಡುಗಡೆಯಾಗಿದ್ದು ಈ ಚಿತ್ರದಲ್ಲಿ ಪ್ರಜ್ವಲ್‌ಗೆ ಜೋಡಿಯಾಗಿ ಭಾವನಾ ಮೆನನ್ ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌