ಆ್ಯಪ್ನಗರ

ದತ್ತು ಪಡೆದ ಸರಕಾರಿ ಶಾಲೆ ಮಕ್ಕಳೊಂದಿಗೆ ಪ್ರಣೀತಾ ಹೋಳಿ

ಕೆಲ ತಿಂಗಳ ಹಿಂದೆ ಹಾಸನದಲ್ಲಿ ಸರಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದ ನಟಿ ಪ್ರಣೀತಾ ಸುಭಾಷ್‌, ಹೋಳಿ ಹಬ್ಬದ ದಿನ ಆ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂಭ್ರಮಿಸಿದ್ದಾರೆ.

Vijaya Karnataka 22 Mar 2019, 3:00 pm
ಕೆಲ ತಿಂಗಳ ಹಿಂದೆ ಹಾಸನದಲ್ಲಿ ಸರಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದ ನಟಿ ಪ್ರಣೀತಾ ಸುಭಾಷ್‌, ಹೋಳಿ ಹಬ್ಬದ ದಿನ ಆ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂಭ್ರಮಿಸಿದ್ದಾರೆ.
Vijaya Karnataka Web pranitha-subhash


ನಟನೆಯ ಜತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಅವರು, ಶಾಲೆಯ ಆಗುಹೋಗುಗಳು ಹಾಗೂ ಮಕ್ಕಳಿಗೆ ಸ್ಪಂದಿಸುತ್ತಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ. ಶಾಲೆಯನ್ನು ದತ್ತು ಪಡೆದ ಸಂದರ್ಭದಲ್ಲಿ ಹೋಳಿ ಹಬ್ಬಕ್ಕೆ ಬರುವುದಾಗಿ ಮಕ್ಕಳಿಗೆ ಭರವಸೆ ನೀಡಿದ್ದರು. ಅದರಂತೆ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಹೋಳಿ ಆಚರಿಸಿದ್ದಾರೆ.

'ಬಣ್ಣಗಳ ಜತೆ ಕೆಲಸ ಮಾಡಿದ್ದೇವೆ. ಹಾಗಾಗಿ ಇದನ್ನು ಹೋಳಿ ಇವೆಂಟ್‌ ಎಂದು ಕರೆದೆವು' ಎಂದಿದ್ದಾರೆ ಪ್ರಣೀತಾ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳು ನೀಡಿದ್ದಾರೆ. 'ಗ್ಲಾಮರ್‌ ಜಗತ್ತಿನಿಂದ ಹೊರಬಂದು ಇಂಥ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಒಂದು ರೀತಿಯ ತೃಪ್ತಿ ನೀಡುತ್ತದೆ. ಈ ಶಾಲೆಯಲ್ಲಿ ನೀರಿನ ಸಮಸ್ಯೆ ಬಹಳ ಇತ್ತು. ಈಗ ಅದನ್ನು ಪರಿಹರಿಸಿದ್ದೇವೆ' ಎಂದಿದ್ದಾರೆ ಅವರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌