ಆ್ಯಪ್ನಗರ

Prashanth Neel: ಪ್ರಭಾಸ್‌ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶನ

ಈಗ ದೇಶದಾದ್ಯಂತ ಸುದ್ದಿಯಾಗಿರುವ ನಿರ್ದೇಶಕ ಪ್ರಶಾಂತ್‌ ನೀಲ್‌ ತೆಲುಗಿನ ಜನಪ್ರಿಯ ನಟ ಪ್ರಭಾಸ್‌ಗೆ ಸಿನಿಮಾ ಮಾಡಲಿದ್ದಾರೆಂದು ಗೊತ್ತಾಗಿದೆ.

Vijaya Karnataka 31 Dec 2018, 8:13 am
ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟನೆಯ ಮುಂದಿನ ಚಿತ್ರಕ್ಕೆ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬ ಸುದ್ದಿ ಹೈದರಾಬಾದ್‌ನಿಂದ ಬಂದಿದೆ.
Vijaya Karnataka Web prashanth neel


ಈಗ ದೇಶದಾದ್ಯಂತ ಸುದ್ದಿಯಾಗಿರುವ ನಿರ್ದೇಶಕ ಪ್ರಶಾಂತ್‌ ನೀಲ್‌ ತೆಲುಗಿನ ಜನಪ್ರಿಯ ನಟ ಪ್ರಭಾಸ್‌ಗೆ ಸಿನಿಮಾ ಮಾಡಲಿದ್ದಾರೆಂದು ಗೊತ್ತಾಗಿದೆ. ಈ ಕುರಿತು ಈಗಾಗಲೇ ಪ್ರಭಾಸ್‌ ಮತ್ತು ನಿರ್ಮಾಪಕರು ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಚಿತ್ರವನ್ನು ಪ್ರಭಾಸ್‌ ಮಾಲಿಕತ್ವದ್ದನ್ನಲಾದ ಯೂವಿ ಕ್ರಿಯೇಷನ್ಸ್‌ ನಿರ್ಮಾಣ ಮಾಡಲಿದೆ ಎಂದೂ ತೆಲುಗು ಚಿತ್ರರಂಗದ ಮೂಲಗಳು ತಿಳಿಸಿವೆ.

ಈ ಸಂಬಂಧ ಪ್ರಶಾಂತ್‌ ನೀಲ್‌ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ತಮ್ಮ ಎರಡನೇ ಸಿನಿಮಾದಿಂದಲೇ ಸೌತ್‌ ಇಂಡಸ್ಟ್ರಿಯ ಜನಪ್ರಿಯ ನಿರ್ದೇಶಕರೆನ್ನಿಸಿಕೊಂಡ ಪ್ರಶಾಂತ್‌ ನೀಲ್‌ ಶ್ರೀಮುರಳಿ ನಟನೆಯ ಉಗ್ರಂ ವೀರಂ ಚಿತ್ರ ನಿರ್ದೇಶನ ಮಾಡಲಿರುವ ಸುದ್ದಿ ಈಗಾಗಲೇ ಪ್ರಕಟಗೊಂಡಿದೆ. ಅಲ್ಲದೆ, ಕೆಜಿಎಫ್‌ ಚಿತ್ರದ ಭಾಗ 2 ನಿರ್ದೇಶನ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌