ಆ್ಯಪ್ನಗರ

ಪ್ರೀತಂ ಗುಬ್ಬಿ ಜತೆ ದುನಿಯಾ ವಿಜಯ್‌ ಸಿನಿಮಾ

ಎಸ್‌ ಪಪ್ಪ ಎಂದ ಪ್ರೀತಂ ಮತ್ತು ವಿಜಿ ಆರು ವರ್ಷಗಳ ಹಿಂದೆ ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌ ಸಿನಿಮಾ ಮಾಡಿದ್ದ ಪ್ರೀತಂ ಗುಬ್ಬಿ ಮತ್ತು ದುನಿಯಾ ವಿಜಯ್‌ ಮತ್ತೆ .

Vijaya Karnataka Web 15 Apr 2017, 6:30 am

ಆರು ವರ್ಷಗಳ ಹಿಂದೆ ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌ ಸಿನಿಮಾ ಮಾಡಿದ್ದ ಪ್ರೀತಂ ಗುಬ್ಬಿ ಮತ್ತು ದುನಿಯಾ ವಿಜಯ್‌ ಮತ್ತೆ ಒಂದಾಗಿದ್ದಾರೆ. ಈ ಚಿತ್ರಕ್ಕೆ 'ಜಾನಿ ಜಾನಿ ಎಸ್‌ ಪಪ್ಪ' ಎಂದು ಹೆಸರಿಡಲಾಗಿದೆ.

ಜಾನಿ ಮೇರಾ ನಾಮ್‌ ಸಿನಿಮಾದಲ್ಲಿ ರಂಗಾಯಣ ರಘು ಮತ್ತು ದುನಿಯಾ ವಿಜಯ್‌ ಜೋಡಿ ಮಿಂಚಿತ್ತು, ಅದು ಈ ಸಿನಿಮಾದಲ್ಲಿಯೂ ಮುಂದವರಿಯುತ್ತದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಹಿಂದಿನ ಸಿನಿಮಾದಲ್ಲಿದ್ದ ದತ್ತಣ್ಣ, ಸಾಧುಕೋಕಿಲಾ ಸೇರಿದಂತೆ ಎಲ್ಲ ಪಾತ್ರಗಳು ಈ ಸಿನಿಮಾದಲ್ಲಿಯೂ ಮುಂದುವರಿಯುತ್ತವೆ ಎಂದಿದ್ದಾರೆ.

ಆ ಜಾನಿಯಲ್ಲಿ ನಟಿಸಿದ್ದ ರಮ್ಯಾ ಸದ್ಯ ರಾಜಕೀಯದಲ್ಲಿ ಬಿಝಿಯಾಗಿದ್ದು, ಅವರ ಜಾಗಕ್ಕೆ ಹೊಸ ಮುಖವೊಂದನ್ನು ನಿರ್ದೇಶಕರು ನೋಡುತ್ತಿದ್ದಾರೆ. ವಿಷಯವೆಂದರೆ ಸಿನಿಮಾದ ಎಲ್ಲ ಪೋಸ್ಟರ್‌ಗಳು ಕ್ಯಾರಿಕೇಚರ್‌ ರೂಪದಲ್ಲಿಯೇ ಇರುತ್ತವೆ ಎಂದು ಪ್ರೀತಂ ಹೇಳಿದ್ದಾರೆ. ಈಗಾಗಲೇ ರಂಗಾಯಣ ರಘು ಮತ್ತು ದುನಿಯಾ ವಿಜಯ್‌ ಇರುವ ಫಸ್ಟ್‌ ಲುಕ್‌ ಅನ್ನು ಅವರು ಬಿಡುಗಡೆಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌