ಆ್ಯಪ್ನಗರ

ರಕ್ಷಿತಾ ಸಹೋದರನ ಚಿತ್ರದ ಪೋಸ್ಟರ್‌ ರಿಲೀಸ್‌

ನಿರ್ದೇಶಕ ಪ್ರೇಮ್‌ ಮತ್ತೆ ಬಂದಿದ್ದಾರೆ. ಹೊಸ ಚಿತ್ರದಲ್ಲಿ ತಮ್ಮ ಬಾಮೈದನನ್ನು ಹೀರೊ ಮಾಡುತ್ತಿದ್ದು, ಚಿತ್ರದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ.

Vijaya Karnataka 2 Apr 2019, 5:00 am
ಸುದೀಪ್‌ ಮತ್ತು ಶಿವರಾಜ್‌ ಕುಮಾರ್‌ ನಟನೆಯ ದಿ ವಿಲನ್‌ ಚಿತ್ರದ ನಂತರ ಪ್ರೇಮ್‌ ಹೊಸ ಜೋಡಿಯನ್ನು ತೆರೆಗೆ ಪರಿಚಯಿಸುತ್ತಿದ್ದಾರೆ. ಹೊಸ ಸಿನಿಮಾದಲ್ಲಿ ಪಕ್ಕಾ ಲವ್‌ ಅಂಡ್‌ ಆ್ಯಕ್ಷನ್‌ ಸ್ಟೋರಿ ಹೇಳಲಿದ್ದಾರಂತೆ. ಈ ಚಿತ್ರಕ್ಕೆ ನಟಿ ರಕ್ಷಿತಾ ಸಹೋದರ ಸಹೋದರ ರಾಣಾ ನಾಯಕನಾಗಿ ಮತ್ತು ಸುಧಾರಾಣಿ ಮಗಳು ನಿಧಿ ನಾಯಕಿಯಾಗಿ ನಟಿಸಲಿದ್ದಾರೆ. ರಾಣಾ ಫಸ್ಟ್‌ ಲುಕ್‌ ಮೋಷನ್‌ ಪೊಸ್ಟರ್‌ ರಿಲೀಸ್‌ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಚಿತ್ರಕ್ಕೆ ವಿಭಿನ್ನವಾಗಿ ಏಕ್‌ ಲವ್‌ ಯಾ.. ಎಂದು ಹೆಸರಿಡಲಾಗಿದೆ.
Vijaya Karnataka Web raana14


ನಿಧಿಗೆ ನಾಯಕಿಯಾಗಿ ಇದು ಮೊದಲ ಚಿತ್ರ. ಟೀನೇಜ್‌ ಹುಡುಗಿಯ ಸ್ಯಾಂಡಲ್‌ವುಡ್‌ ಎಂಟ್ರಿ ಬಗ್ಗೆ ಎಲ್ಲರಿಗೆ ಕುತೂಹಲವಿದೆ. ವಿಲನ್‌ ಚಿತ್ರದಲ್ಲಿ ಪ್ರೇಮ್‌ ಮತ್ತು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಕಾಂಬಿನೇಷನ್‌ ಕಮಾಲ್‌ ಮಾಡಿದ್ದಂತೂ ನಿಜ. ಈಗ ಮತ್ತೆ ಈ ಜೋಡಿ ಹೊಸ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದೆ. ಮೋಷನ್‌ ಪೋಸ್ಟರ್‌ನಲ್ಲಿ ಮ್ಯೂಸಿಕ್‌ ಕೂಡ ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌