ಆ್ಯಪ್ನಗರ

ನಿರ್ದೇಶಕಿ ಪೂರ್ಣಿಮಾ ಮೋಹನ್ ನಿಧನಕ್ಕೆ ಚಿತ್ರರಂಗ ದಿಗ್ಭ್ರಮೆ

ಕನ್ನಡ ಚಿತ್ರರಂಗದ ನಿರ್ದೇಶಕಿ ಪೂರ್ಣಿಮಾ ಮೋಹನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇನ್ನು 48 ವರ್ಷದ ಪೂರ್ಣಿಮಾ ಅವರ ಅಕಾಲಿಕ ಸಾವಿನಿಂದ ಕನ್ನಡ ಚಿತ್ರರಂಗ ದಿಗ್ಭ್ರಮೆಗೆ ಒಳಗಾಗಿದೆ.

Vijaya Karnataka Web 14 Oct 2017, 3:30 pm
ಕನ್ನಡ ಚಿತ್ರರಂಗದ ನಿರ್ದೇಶಕಿ ಪೂರ್ಣಿಮಾ ಮೋಹನ್ ಅವರು ಹೃದಯಾಘಾತದಿಂದ ಶುಕ್ರವಾರ (ಅ.13) ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನು 48 ವರ್ಷದ ಪೂರ್ಣಿಮಾ ಅವರ ಅಕಾಲಿಕ ಸಾವಿನಿಂದ ಕನ್ನಡ ಚಿತ್ರರಂಗ ದಿಗ್ಭ್ರಮೆಗೆ ಒಳಗಾಗಿದೆ.
Vijaya Karnataka Web producer poornima mohan passes away
ನಿರ್ದೇಶಕಿ ಪೂರ್ಣಿಮಾ ಮೋಹನ್ ನಿಧನಕ್ಕೆ ಚಿತ್ರರಂಗ ದಿಗ್ಭ್ರಮೆ


ಈ ಬಗ್ಗೆ ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ಸಂದೀಪ್ ಮಲಾನಿ ಅವರು ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದು, 'ಪೂರ್ಣಿಮಾ ಅವರ ಸಾವಿನ ಸುದ್ದಿ ತಿಳಿದು ಶಾಕ್ ಆಯಿತು. ಅವರಿಗೆ ಸಾಯುವಂತಹ ವಯಸ್ಸಾಗಿರಲಿಲ್ಲ. ಹೃದಯಾಘಾತದಿಂದ ಅವರು ಕಣ್ಮುಚ್ಚಿದ್ದಾರೆ. ಹಿಂದಿಯ ಜೂಲಿ ಚಿತ್ರದನ್ನು ಕನ್ನಡದಲ್ಲಿ ನಿರ್ದೇಶಿಸಿದ್ದಾರೆ. ರಮ್ಯಾ, ದಿನುಮೋರಿಯಾ ಹಾಗೂ ನಾನು ಚಿತ್ರದಲ್ಲಿ ಅಭಿನಯಿಸಿದ್ದೆವು. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಸಂಗೀತ ನಿರ್ದೇಶಕ ಎಮಿಲ್ ಅವರು ತಮ್ಮ ಅತೀವ ಸಂತಾಪವನ್ನು ಫೇಸ್‍ಬುಕ್‌ನಲ್ಲಿ ವ್ಯಕ್ತಪಡಿಸಿದ್ದಾರೆ. ಅವರ ನಿಧನದಿಂದ ನಮ್ಮ ಜೀವನ ಖಾಲಿ ಎನ್ನಿಸುತ್ತಿದೆ. ಕನ್ನಡ ಚಿತ್ರೋದ್ಯಮದ ಅತಿದೊಡ್ಡ ನಿರ್ಮಾಪಕರಲ್ಲಿ ಒಬ್ಬರಾಗಿರುವ ಕೆ ಸಿ ಎನ್ ಗೌಡ ಅವರ ಪುತ್ರ ಕೆ ಸಿ ಎನ್ ಮೋಹನ್ ಅವರ ಪತ್ನಿ ಪೂರ್ಣಿಮಾ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌