ಆ್ಯಪ್ನಗರ

​ಮೇಘನಾ ರಾಜ್‌ ಡೈಲಾಗ್‌ಗೆ ಗಂಡುಮಕ್ಳು ಕೆಂಡ!

ಜಿಂದಾ ಚಿತ್ರದ ಟ್ರೈಲರ್‌ನಲ್ಲಿ ಯುವಕರಿಗೆ ಅವಹೇಳನ ಮಾಡಲಾಗಿದೆ ಎಂದು ವಿವಿಧ ಸಂಘಟನೆಗಳು ನಟಿ ಮೇಘನಾ ರಾಜ್‌ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ವಿಕ ಸುದ್ದಿಲೋಕ 5 Jun 2017, 3:08 pm
'ಈ ಗಂಡು ಅನ್ನೋ ಒಬ್ಬ ಕಚಡ ನನ್‌ ಮಗಾನೂ ಪ್ರೀತಿ ಮಾಡೋವಾಗ ಸತ್ಯ ಹೇಳಲ್ವಲ್ಲ' ಇದು ನಟಿ ಮೇಘನಾ ರಾಜ್‌ ಅಭಿನಯದ ಜಿಂದಾ ಚಿತ್ರದ ಡೈಲಾಗ್.
Vijaya Karnataka Web protest infront of meghana raj house
​ಮೇಘನಾ ರಾಜ್‌ ಡೈಲಾಗ್‌ಗೆ ಗಂಡುಮಕ್ಳು ಕೆಂಡ!


ಮುಸ್ಸಂಜೆ ಮಹೇಶ್‌ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್‌ನಲ್ಲಿ ಯುವಕರಿಗೆ ಅವಹೇಳನ ಮಾಡಲಾಗಿದೆ ಎಂದು ವಿವಿಧ ಸಂಘಟನೆಗಳು ನಟಿ ಮೇಘನಾ ರಾಜ್‌ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.



ಸದ್ಯ ಪ್ರತಿಭಟನಾಕಾರರನ್ನು ನಟಿ ಮೇಘನಾ ರಾಜ್ ಸಮಾಧಾನಪಡಿಸುತ್ತಿದ್ದಾರೆ. ಭಾನುವಾರದಿಂದಲೇ ಮೇಘನಾ ಮನೆ ಮುಂದೆ ಪ್ರತಿಭಟನೆ ನಡೆಯುತ್ತಿದೆ. 'ಜಿಂದಾ' ಚಿತ್ರ ಇದೇ ಜೂನ್ 9ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಮೇಘನಾ ರಾಜ್ ಜತೆ ಯುವರಾಜ್, ದೇವರಾಜ್, ಅರುಣ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಯಿಸರುವ ನಟಿ ಮೇಘನಾ ರಾಜ್‌, ಸಿನಿಮಾ ನೋಡಿ ಆಮೇಲೆ ಮಾತಾಡಿ, ನಾನು ಎಲ್ಲಾ ಯುವಕರನ್ನು ಕುರಿತು ಆ ರೀತಿ ಸಂಭಾಷಣೆ ಹೇಳಿಲ್ಲ, ಮೊದಲು ಸಿನಿಮಾ ನೋಡಿ. ಈ ಚಿತ್ರ ಒಂದು ನೈಜ ಘಟನೆಯನ್ನು ಆಧರಿಸಿದೆ. ಪಾತ್ರಧಾರಿಯಾಗಿ ನಾನು ಆ ಡೈಲಾಗ್‌ ಹೇಳಿದ್ದೇನೇಯೇ ಹೊರತು ಮೇಘನಾ ರಾಜ್‌ ಆಗಿ ಅಲ್ಲ' ಎಂದು ಸಮಜಾಯಿಷಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌