ಆ್ಯಪ್ನಗರ

ಅನಂತ್‌ ಸಂದರ್ಶನ ಮಾಡಿದ ಪುನೀತ್‌

ಎಲ್ಲ ಮಾಧ್ಯಮಗಳು ಪುನೀತ್‌ರಾಜ್‌ಕುಮಾರ್‌ ಅವರನ್ನು ಸಂದರ್ಶನ ಮಾಡಲು ತುದಿಗಾಲಲ್ಲಿ ನಿಂತಿದ್ದರೆ, ಪುನೀತ್‌ ಮಾತ್ರ ಸ್ಯಾಂಡಲ್‌ವುಡ್‌ನ ಹಿರಿಯ ನಟರ ಸಂದರ್ಶನ ಮಾಡಿದ್ದಾರೆ.

Vijaya Karnataka 6 Apr 2019, 5:00 am
ಹರೀಶ್‌ ಬಸವರಾಜ್‌
Vijaya Karnataka Web ananth1


ನಟರಾದಾಗಿನಿಂದ ಸಾಕಷ್ಟು ಮಾಧ್ಯಮಗಳಿಂದ ಹಲವು ಬಾರಿ ಸಂದರ್ಶನಕ್ಕೆ ಒಳಗಾಗಿರುವ ಪುನೀತ್‌ ರಾಜ್‌ಕುಮಾರ್‌ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್‌ ನಟ ಅನಂತ್‌ನಾಗ್‌ ಅವರ ಸಂದರ್ಶನ ಮಾಡಿದ್ದಾರೆ.

ಹೌದು, ಪುನೀತ್‌ ಗುರುವಾರವಷ್ಟೇ ಅನಂತ್‌ನಾಗ್‌ ಅವರ ಸಂದರ್ಶನ ಮಾಡಿದ್ದಾರೆ. ಪುನೀತ್‌ರಾಜ್‌ಕುಮಾರ್‌ ನಿರ್ಮಾಣದ 'ಕವಲುದಾರಿ' ಸಿನಿಮಾದಲ್ಲಿ ಅನಂತ್‌ನಾಗ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಪÜಟ್ಟಂತೆ ಮತ್ತು ಅವರ ಹಿಂದಿನ ಸಿನಿಮಾ ಜರ್ನಿಯ ಬಗ್ಗೆ ಸಾಕಷ್ಟು ಹೊತ್ತು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪುನೀತ್‌ ಅನಂತ್‌ ಅವರ ಜತೆ ಸೆಲಿಧಿಧಿ ತೆಗೆದುಕೊಂಡಿದ್ದು , ಆ ಫೋಟೋ ಲವಲವಿಕೆಗೆ ಸಿಕ್ಕಿದೆ.

ಈ ಬಗ್ಗೆ ಲವಲವಿಕೆ ಜತೆ ಮಾತನಾಡಿದ ಅನಂತ್‌ನಾಗ್‌, 'ಪುನೀತ್‌ ಅವರ ಜತೆ ಗುರುವಾರ ಬಹಳ ಹೊತ್ತು ಮಾತನಾಡಿದೆ. ನಾನು ವಜ್ರೇಶ್ವರಿ ಕಂಬೈನ್ಸ್‌ನಲ್ಲಿಯೂ ನಟಿಸಿದ್ದೇನೆ. ಈಗ ಪಿಆರ್‌ಕೆ ಪ್ರೊಡಕ್ಷನ್‌ ಹೌಸ್‌ನಲ್ಲಿಯೂ ನಟಿಸಿದ್ದೇನೆ. ಇದು ನನಗೆ ಬಹಳ ಖುಷಿಯ ವಿಚಾರ. ಪುನೀತ್‌ ಆಗ ಚಿಕ್ಕ ಹುಡುಗ. ಈಗ ದೊಡ್ಡವರಾಗಿ ದೊಡ್ಡ ಸ್ಟಾರ್‌ ಆಗಿ, ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೆನ್ನೆಲ್ಲ ಮಾತುಕತೆಯಲ್ಲಿ ಮೆಲುಕು ಹಾಕಿದ್ದೇವೆ' ಎಂದು ಅವರು ಹೇಳಿದರು. ಈ ಸಂದರ್ಶನದ ಪೂರ್ಣ ವಿಡಿಯೋ ಸದ್ಯದಲ್ಲೇ ಪುನೀತ್‌ ಅವರ ಪಿಆರ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌