ಆ್ಯಪ್ನಗರ

'ಪುಷ್ಪಕ ವಿಮಾನ' ನಿರ್ಮಾಪಕರ ವಿರುದ್ಧ ಎಫ್‌ಐಆರ್

ಕನ್ನಡ ಸಿನಿಮಾ ನಿರ್ದೇಶಕ ಪವರ್ ಒಡೆಯರ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಬೆಂಗಳೂರು ಸಿಟಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. 'ಪುಷ್ಪಕ ವಿಮಾನ' ಸಿನಿಮಾಗೆ ಸಂಬಂಧಿಸಿದಂತೆ ಕೊರಿಯಾ ಸಿನಿಮಾ 'ಮಿರಾಕಲ್ ಇನ್ ಸೆಲ್ ನಂ.7' ಎಂಬ ಚಿತ್ರದ ರೀಮೇಕ್ ರೈಟ್ಸನ್ನು ತಿದ್ದಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 8 Jun 2017, 4:32 pm
ಕನ್ನಡ ಸಿನಿಮಾ ನಿರ್ದೇಶಕ ಪವರ್ ಒಡೆಯರ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಬೆಂಗಳೂರು ಸಿಟಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. 'ಪುಷ್ಪಕ ವಿಮಾನ' ಸಿನಿಮಾಗೆ ಸಂಬಂಧಿಸಿದಂತೆ ಕೊರಿಯಾ ಸಿನಿಮಾ 'ಮಿರಾಕಲ್ ಇನ್ ಸೆಲ್ ನಂ.7' ಎಂಬ ಚಿತ್ರದ ರೀಮೇಕ್ ರೈಟ್ಸನ್ನು ತಿದ್ದಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.
Vijaya Karnataka Web pushpaka vimana in legal trouble
'ಪುಷ್ಪಕ ವಿಮಾನ' ನಿರ್ಮಾಪಕರ ವಿರುದ್ಧ ಎಫ್‌ಐಆರ್

ಕೊರಿಯಾ ಮೂಲದ ಸಿನಿಮಾ ರೀಮೇಕ್ ಆದ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿರುವ ಪುಷ್ಪಕ ವಿಮಾನ ಸಿನಿಮಾ ಇದೇ ವರ್ಷ ಜನವರಿಯಲ್ಲಿ ತೆರೆಕಂಡಿತ್ತು. ಮೂಲ ಸಿನಿಮಾದ ರೀಮೇಕ್ ರೈಟ್ಸ್ ಖರೀದಿಸಿದ್ದೀವಿ ಎಂದು ನಿರ್ಮಾಪಕರು ಹೇಳಿಕೊಂಡಿದ್ದರು. ಆದರೆ ಹಿಂದಿ ಮತ್ತು ಬೇರೆ ಭಾರತೀಯ ಭಾಷೆಗಳ ರೀಮೇಕ್ ರೈಟ್ಸ್ ನಮ್ಮ ಬಳಿ ಇದೆ ಎಂದು ಕನ್ನಡ ನಿರ್ಮಾಪಕರ ವಿರುದ್ಧ 'ಕ್ರಾಸ್ ಪಿಕ್ಚರ್ಸ್ ಇಂಕ್' ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮುಂಬೈ ಕೋರ್ಟ್ ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಾಗಿದೆ. ಇದೀಗ ಇನ್ನೊಂದು ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದ್ದು, ಚಿತ್ರದ ನಿರ್ಮಾಪಕರು ರೀಮೇಕ್ ರೈಟ್ಸನ್ನು ತಿದ್ದಿದ್ದಾರೆ ಎಂದು ಅದೇ ಸಂಸ್ಥೆ ಆರೋಪಿಸಿದೆ.

ಪುಷ್ಪಕ ವಿಮಾನ ಚಿತ್ರದ ನಿರ್ಮಾಪಕರಾದ ವಿಖ್ಯಾತ್, ಪವರ್ ಒಡೆಯರ್ ಹಾಗೂ ಇನ್ನಿಬ್ಬರಾದ ಗುರು ಪ್ರಸಾದ್ ಮತ್ತು ವಿಜಯ್ ಸವಣೂರು ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ ರವೀಂದ್ರನಾಥ್ ನಿರ್ದೇಶನದ ಈ ಸಿನಿಮಾವನ್ನು ವಿಖ್ಯಾತ್ ಜತೆಗೆ ಹಲವರು ನಿರ್ಮಿಸಿದ್ದಾರೆ. ಆದರೆ ಪವನ್ ಒಡೆಯರ್ ಅವರ ಪಾತ್ರ ಏನೇನು ಇರದಿದ್ದರೂ, ನಿರ್ಮಾಪಕರಲ್ಲಿ ಅವರೂ ಒಬ್ಬರು ಎಂಬಂತೆ ತಪ್ಪಾಗಿ ಬಿಂಬಿಸಲಾಗಿತ್ತು ಎನ್ನುತ್ತಿವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌