ಆ್ಯಪ್ನಗರ

ವಿಕ ಓದುಗರ ಪ್ರೀತಿಗೆ ಶರಣೆಂದ ರ‍್ಯಾಂಬೋ

ಶರಣ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ರ‍್ಯಾಂಬೋ -2 ಚಿತ್ರದ ವಿಶೇಷ ಪ್ರದರ್ಶನವನ್ನು ವಿಜಯ ಕರ್ನಾಟಕ-ಲವಲವಿಕೆ ಓದುಗರಿಗಾಗಿ ಏರ್ಪಡಿಸಲಾಗಿತ್ತು. ರ‍್ಯಾಂಬೋ -2ಗೆ ಪತ್ರಿಕೆಯ ಓದುಗರು ಫಿದಾ ಆದರು.

Vijaya Karnataka 1 Jun 2018, 11:52 am
*ಹರೀಶ್‌ ಬಸವರಾಜ್‌
Vijaya Karnataka Web rambo


ಕಲಾವಿದರಿಗೆ ಪ್ರೇಕ್ಷಕರೇ ದೇವರು. ಅವರು ಇಲ್ಲದಿದ್ದರೆ ನಾವೆಷ್ಟು ಕೆಲಸ ಮಾಡಿದರೂ ಪ್ರಯೋಜನವಿಲ್ಲ. ಮುಖ್ಯವಾಗಿ ವಿಜಯ ಕರ್ನಾಟಕದಂಥ ಪ್ರಮುಖ ಪತ್ರಿಕೆಯೇ ನಮ್ಮ ಚಿತ್ರವನ್ನು ಓದುಗರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದು ಅತ್ಯಂತ ಸಂತೋಷದ ಸಂಗತಿ ಎಂದು ರ‍್ಯಾಂಬೋ-2 ಚಿತ್ರದ ನಾಯಕ ನಟ ಶರಣ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ವಿಜಯಕರ್ನಾಟಕ-ಲವಲವಿಕೆ ತನ್ನ ಓದುಗರಿಗಾಗಿ ರ‍್ಯಾಂಬೋ-2 ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸುಮಾರು 300 ಮಂದಿ ಓದುಗರು ಚಿತ್ರವನ್ನು ನೋಡಿ ಆನಂದಿಸಿದರು.

ಶರಣ್‌ ಜತೆಗೆ ಚಿತ್ರದ ನಾಯಕಿ ನಟಿ ಆಶಿಕಾ ರಂಗನಾಥ್‌, ನಿರ್ದೇಶಕ ಅನಿಲ್‌ ಕುಮಾರ್‌ ಕೂಡ ಪಾಲ್ಗೊಂಡಿದ್ದರು. ಸಂಜೆ 6 ಗಂಟೆ ಶುರುವಾಗಲಿದ್ದ ಪ್ರದರ್ಶನಕ್ಕೆ ಮುನ್ನವೇ ಅಂದರೆ, ಸಂಜೆ 4 ಗಂಟೆ ಹೊತ್ತಿಗೆ ಕಲಾವಿದರ ಸಂಘ ಹಾಗೂ ವಿಕ ಆವರಣದಲ್ಲಿ ಓದುಗರ ಜಾತ್ರೆ ನೆರೆದಿತ್ತು.

'ಈ ಸಿನಿಮಾ ಇಷ್ಟು ಚೆಂದವಾಗಿ ಬಂದು, ನಿಮ್ಮೆಲ್ಲರ ಮೆಚ್ಚುಗೆ ಪಡೆಯಲು ಮುಖ್ಯಕಾರಣ ನನ್ನ ತಂಡ. ನಿರ್ದೇಶಕ ಅನಿಲ್‌ಕುಮಾರ್‌, ತರುಣ್‌ ಸುಧೀರ್‌ ಸೇರಿ ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಈ ರೀತಿಯ ಪ್ರದರ್ಶನ ಏರ್ಪಡಿಸಿದ್ದು ನನಗೆ ಖುಷಿ ತಂದಿದೆ. ನಾನು ಒಂದು ರೀತಿಯಲ್ಲಿ ವಿಜಯ ಕರ್ನಾಟಕದ ಬಳಗಕ್ಕೆ ಸೇರಿದಷ್ಟು ಸಂತಸವಾಗಿದೆ' ಎಂದು ಹೇಳಿದ್ದಾರೆ.

ನಾಯಕಿ ಆಶಿಕಾ ರಂಗನಾಥ್‌ ಮಾತನಾಡಿ 'ಈ ಸಿನಿಮಾದಲ್ಲಿ ನಾನು ಏನು ನಟಿಸಿದ್ದೇನೆ? ಅದರ ಎಲ್ಲ ಕ್ರೆಡಿಟ್‌ ನಿರ್ದೇಶಕ ಅನಿಲ್‌, ನಾಯಕ ಶರಣ್‌, ತರುಣ್‌ ಸುಧೀರ್‌ ಮತ್ತು ಸಿನಿಮಾಟೋಗ್ರಫರ್‌ ಸುಧಾಕರ್‌ ಅವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮ ನಿಜಕ್ಕೂ ಚೆನ್ನಾಗಿದೆ. ಈ ಹಿಂದೆ ಯುಗಾದಿ ವಿಶೇಷಾಂಕದ ಮುಖಪುಟಕ್ಕೆ ರೂಪದರ್ಶಿಯಾಗಿ ನನ್ನನ್ನು ಆಯ್ಕೆ ಮಾಡಿದ್ದರು' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

'ಒಂದು ಪತ್ರಿಕೆ ಸಿನಿಮಾವನ್ನು ತನ್ನ ಓದುಗರಿಗೆ ವಿಶೇಷವಾಗಿ ತೋರಿಸುವ ಪ್ರಕ್ರಿಯೆಯನ್ನು ನಾನು ಇದೇ ಮೊದಲು ನೋಡುತ್ತಿದ್ದೇನೆ. ಇಂತಹ ಒಂದು ಹೊಸ ಅನುಭವ ನೀಡಿದ ವಿಜಯ ಕರ್ನಾಟಕ- ಲವಲವಿಕೆಗೆ ನಾನು ಅಭಾರಿ ಎಂದ ನಿರ್ದೇಶಕ ಅನಿಲ್‌, ಜನ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಮುಂದೆಯೂ ಒಳ್ಳೊಳ್ಳೆ ಸ್ಕ್ರಿಪ್ಟ್‌ಗಳನ್ನು ತೆರೆಗೆ ಅಳವಡಿಸುತ್ತೇನೆ. ರ‍್ಯಾಂಬೋ-2 ಮೆಚ್ಚಿಕೊಂಡ ಎಲ್ಲ ವಿಕ ಓದುಗರಿಗೆ ಧನ್ಯವಾದಗಳು'ಎಂದು ಹೇಳಿದರು. ವೇದಿಕೇ ಕಾರ್ಯಕ್ರಮ ಮುಗಿಯುತ್ತದ್ದಂತೆ ಓದುಗರು ಶರಣ್‌, ಆಶಿಕಾ, ಅನಿಲ್‌ ಜತೆ ಸೆಲ್ಫಿಗಾಗಿ ಮುಗಿಬಿದ್ದರು.

ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಶರಣ್‌

ಓದುಗ ವೀಕ್ಷಕರೊಬ್ಬರು ಚುಟು ಚುಟು ಹಾಡನ್ನು ಬಳಸಿಕೊಂಡಿದ್ದರ ಕಾರಣ ಕೇಳಿದ್ರು, ಅದಕ್ಕೆ ಶರಣ್‌ 'ನಾನು ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿ, ಆ ಹಾಡು ಬಹಳ ಚೆನ್ನಾಗಿದೆ, ಅದನ್ನು ಇನ್ನಷ್ಟು ಫೇಮಸ್‌ ಮಾಡುವ ಉದ್ದೇಶದಿಂದ ಈ ಸಿನಿಮಾದಲ್ಲಿ ಬಳಸಿಕೊಂಡೆವು. ಚುಟು ಚುಟು ಜತೆಗೆ, ಮೂರು ಹಾಡುಗಳು ಉತ್ತರ ಕರ್ನಾಟಕದ ಶೈಲಿಯಲ್ಲಿವೆ ಎಂದು ಉತ್ತರಿಸಿದರು.

ಚುಟು ಚುಟು ಹಾಡಿದ ತಂಡ

ಚಿತ್ರಮಂದಿರದಲ್ಲಿ ಸೇರಿದ್ದ ವಿಕ ಓದುಗರು ಶರಣ್‌ ಅವರಿಗೆ ಚುಟು ಚುಟು ಹಾಡನ್ನು ಹಾಡಲು ಒತ್ತಾಯಿಸಿದರು.ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಶರಣ್‌ ಮತ್ತು ಆಶಿಕಾರಂಗನಾಥ್‌ ಹಾಡನ್ನು ಹಾಡಿದರು. ಇವರಿಗೆ ನಿರ್ದೇಶಕ ಅನಿಲ್‌ ಸಹ ಧ್ವನಿ ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌