ಆ್ಯಪ್ನಗರ

25ನೇ ಚಿತ್ರಕ್ಕೆ ಸಹಿ ಮಾಡಿದ ರಾಘವೇಂದ್ರ ರಾಜ್‌ಕುಮಾರ್‌

ಈಗಾಗಲೇ ಈ ಸಿನಿಮಾದ ಫೋಟೋ ಶೂಟ್‌ ಆಗಿದೆ. ರಾಘಣ್ಣ ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಈ ಚಿತ್ರದ ಮಹೂರ್ತ ಬೆಂಗಳೂರಿನಲ್ಲಿ ನಡೆಯುತ್ತಿದೆ.

Vijaya Karnataka 25 Mar 2019, 8:33 pm
ಹದಿಮೂರು ವರ್ಷಗಳ ನಂತರ ರಾಘವೇಂದ್ರ ರಾಜ್‌ಕುಮಾರ್‌ ಬಣ್ಣ ಹಚ್ಚುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಬಿಡುವುವಿಲ್ಲದೇ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಸದ್ದಿಲ್ಲದೇ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
Vijaya Karnataka Web raghavendra-rajkumar


ಮೊನ್ನೆಯಷ್ಟೇ ಇವರ ನಟನೆಯ ಅಮ್ಮನ ಮನೆ ಸಿನಿಮಾ ರಿಲೀಸ್‌ ಆಗಿದೆ. ಇದೇ ತಿಂಗಳು ಕೊನೆಯಲ್ಲಿ ಮತ್ತೊಂದು ಚಿತ್ರ ರಿಲೀಸ್‌ಗೆ ರೆಡಿಯಿದೆ. ಅಲ್ಲದೇ, ಧ್ರುವ ಸರ್ಜಾ ಮುಖ್ಯ ಭೂಮಿಕೆಯ ಪೊಗರು ಚಿತ್ರದಲ್ಲೂ ಇವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಮಧ್ಯೆ 'ಆಡಿಸಿದಾತ' ಚಿತ್ರಕ್ಕೆ ಸಹಿ ಮಾಡಿದ್ದಾರೆ. ಇದು ರಾಘವೇಂದ್ರ ರಾಜ್‌ಕುಮಾರ್‌ ಅವರ 25ನೇ ಸಿನಿಮಾ ಎನ್ನುವುದು ವಿಶೇಷ.

ಆಡಿಸಿದಾತ ಎಂದಾಕ್ಷಣ ಡಾ.ರಾಜ್‌ ಕುಮಾರ್‌ ಅವರ ಕಸ್ತೂರಿ ನಿವಾಸ ಸಿನಿಮಾ ನೆನಪಾಗುತ್ತದೆ. ಈ ಸಿನಿಮಾದ ಪಾಪ್ಯುಲರ್‌ ಹಾಡಿನಲ್ಲಿ ಆಡಿಸಿದಾತ ಎಂಬ ಪದ ಬರುತ್ತದೆ. ಅದನ್ನೇ ಸಿನಿಮಾವಾಗಿಸುತ್ತಿದ್ದಾರೆ ನಿರ್ದೇಶಕ ಫಣೀಶ್‌ ಭಾರಧ್ವಜ್‌.

ಈಗಾಗಲೇ ಈ ಸಿನಿಮಾದ ಫೋಟೋ ಶೂಟ್‌ ಆಗಿದೆ. ರಾಘಣ್ಣ ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಈ ಚಿತ್ರದ ಮಹೂರ್ತ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌