ಆ್ಯಪ್ನಗರ

ಮೆಂಟ್ಲು ಮಳೆಯಲ್ಲಿ ಐಶ್ವರ್ಯ

ಹಾಫ್ ಮೆಂಟ್ಲು ಸಿನಿಮಾದ ‘ಜೀವ ಹಾನಿಯಾಗುವ ಮುನ್ನ’ ಹಾಡು ಸದ್ಯ ವೈರಲ್ ಆಗಿದೆ. ಭರತ್ ಬಿಜೆ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಡೀ ಹಾಡನ್ನು ಮಳೆಯಲ್ಲೇ ಶೂಟಿಂಗ್ ಮಾಡಿರುವುದು ಹಾಡಿನ ವಿಶೇಷ.

Vijaya Karnataka Web 23 Mar 2016, 4:49 am
ಹಾಫ್ ಮೆಂಟ್ಲು ಸಿನಿಮಾದ ‘ಜೀವ ಹಾನಿಯಾಗುವ ಮುನ್ನ’ ಹಾಡು ಸದ್ಯ ವೈರಲ್ ಆಗಿದೆ. ಭರತ್ ಬಿಜೆ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಡೀ ಹಾಡನ್ನು ಮಳೆಯಲ್ಲೇ ಶೂಟಿಂಗ್ ಮಾಡಿರುವುದು ಹಾಡಿನ ವಿಶೇಷ.
Vijaya Karnataka Web entertainment/gossip/rain
ಮೆಂಟ್ಲು ಮಳೆಯಲ್ಲಿ ಐಶ್ವರ್ಯ


ಮತ್ತೊಂದು ವಿಶೇಷತೆ ಅಂದರೆ, ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಐಶ್ವರ‌್ಯ ಸಿಂಧೋಗಿ, ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ಇದೇ ಹಾಡಿನ ಮೂಲಕ. ಇಡೀ ಹಾಡನ್ನು ನಿರ್ದೇಶಕ ಲಕ್ಷ್ಮೀ ದಿನೇಶ್ ಕಲರ್‌ಫುಲ್ ಆಗಿ ಕಟ್ಟಿಕೊಟ್ಟಿದ್ದಾರೆ. ಬಿ.ಜೆ ಭರತ್ ಅವರ ಸಂಗೀತ ನಿರ್ದೇಶನದಲ್ಲಿ ಗೀತೆ ಮೂಡಿ ಬಂದಿದೆ.

‘ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ, ಅನೇಕರೂ ಕೂಡ ಈ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಫ್ ಮೆಂಟ್ಲು ಒಳ್ಳೆಯ ಸಿನಿಮಾ. ಏಪ್ರಿಲ್ ಒಂದಕ್ಕೆ ರಿಲೀಸ್ ಆಗುತ್ತಿದೆ. ಇಂತಹ ಚಿತ್ರಗಳು ಗೆಲ್ಲಬೇಕು’ ಅಂತಾರೆ ಐಶ್ವರ‌್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌