ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಮತ್ತು ಯಂಗ್ ಟೈಗರ್ ಜೂ.ಎನ್.ಟಿ.ಆರ್ ಅಭಿನಯದ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್ಆರ್ಆರ್'. ಬರೋಬ್ಬರಿ 400 ಕೋಟಿ ಬಜೆಟ್ನಲ್ಲಿ ತಯಾರಾಗುತ್ತಿರುವ 'ಆರ್ಆರ್ಆರ್' ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿದೆ. ಕೊರೊನಾ ಎರಡನೇ ಅಲೆಯ ಅಬ್ಬರ ಇರ್ಲಿಲ್ಲ ಅಂದಿದ್ರೆ, ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ ಈ ವರ್ಷದ ದಸರಾ ಹಬ್ಬದ ಸಂದರ್ಭದಲ್ಲಿ 'ಆರ್ಆರ್ಆರ್' ಚಿತ್ರ ತೆರೆಗೆ ಬರಬೇಕಿತ್ತು. ಆದ್ರೆ, ಕೋವಿಡ್ ಭೀತಿಯಿಂದ ಹಾಗೂ ಲಾಕ್ಡೌನ್ನಿಂದಾಗಿ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. 'ಆರ್ಆರ್ಆರ್' ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ.
'ಆರ್ಆರ್ಆರ್' ಚಿತ್ರದ ಬಹುಪಾಲು ಚಿತ್ರೀಕರಣ ಇನ್ನೂ ಬಾಕಿಯಿದೆ. ರಾಮ್ ಚರಣ್ ಮತ್ತು ಜೂ.ಎನ್.ಟಿ.ಆರ್ ಭಾಗಗಳ ಶೂಟಿಂಗ್ ಪೆಂಡಿಂಗ್ ಇದೆ. ಹೀಗಾಗಿ, ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. 'ಆರ್ಆರ್ಆರ್' ಚಿತ್ರವನ್ನು ಮುಂದಿನ ವರ್ಷದ ಬೇಸಿಗೆ ವೇಳೆಗೆ ರಿಲೀಸ್ ಮಾಡಲು ರಾಜಮೌಳಿ ಮುಂದಾಗಿದ್ದಾರೆ. ಆದರೆ, ಈ ಐಡಿಯಾ ರಾಮ್ ಚರಣ್ ಹಾಗೂ ಜೂ.ಎನ್.ಟಿ.ಆರ್ಗೆ ಸುತರಾಂ ಇಷ್ಟವಿಲ್ಲ.
ಮುಂದಿನ ವರ್ಷದ ಬೇಸಿಗೆ ಬದಲು ಸಂಕ್ರಾಂತಿ ಹಬ್ಬಕ್ಕೆ 'ಆರ್ಆರ್ಆರ್' ಚಿತ್ರವನ್ನು ತೆರೆಗೆ ತರಬೇಕು ಎಂದು ರಾಮ್ ಚರಣ್ ಹಾಗೂ ಜೂ.ಎನ್.ಟಿ.ಆರ್ ಪಟ್ಟು ಹಿಡಿದಿದ್ದಾರಂತೆ. ಈ ಬಗ್ಗೆ ರಾಜಮೌಳಿ ಇನ್ನೂ ಒಪ್ಪಿಗೆ ಸೂಚಿಸಿಲ್ಲ.
ರಿಲೀಸ್ ಡೇಟ್ ವಿಚಾರವಾಗಿ ಸದ್ಯ ರಾಜಮೌಳಿ ಹಾಗೂ ರಾಮ್ ಚರಣ್, ಜೂ.ಎನ್.ಟಿ.ಆರ್ ಮಧ್ಯೆ ಬೇರೆ ಬೇರೆ ಅಭಿಪ್ರಾಯಗಳಿವೆ. ಅದೆಲ್ಲವೂ ಜೂ.ಎನ್.ಟಿ.ಆರ್ ಹುಟ್ಟುಹಬ್ಬದಂದು ಬಗೆಹರಿಯುವ ಸಾಧ್ಯತೆ ಇದೆ. ಅದ್ಹೇಗೆ ಅಂದ್ರೆ, ಮೇ 20 ರಂದು ಜೂ.ಎನ್.ಟಿ.ಆರ್ ಹುಟ್ಟುಹಬ್ಬ. ಅವತ್ತೇ 'ಆರ್ಆರ್ಆರ್' ಚಿತ್ರದ ಜೂ.ಎನ್.ಟಿ.ಆರ್ ಪೋಸ್ಟರ್ ಮತ್ತು ಹೊಸ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡುವ ಪ್ಲಾನ್ನಲ್ಲಿದ್ದಾರೆ ರಾಜಮೌಳಿ.
ರಾಮ್ ಚರಣ್ ಹಾಗೂ ಜೂ.ಎನ್.ಟಿ.ಆರ್ ಒತ್ತಾಯಕ್ಕೆ ಮಣಿದು ಸಂಕ್ರಾಂತಿ ಹಬ್ಬದಂದು 'ಆರ್ಆರ್ಆರ್' ಚಿತ್ರವನ್ನು ರಿಲೀಸ್ ಮಾಡಲು ರಾಜಮೌಳಿ ಒಪ್ಪಿಕೊಳ್ತಾರಾ? ಈ ಪ್ರಶ್ನೆಗೆ ಮೇ 20 ರಂದು ಸ್ಪಷ್ಟ ಉತ್ತರ ಸಿಗಲಿದೆ.
ಅಂದ್ಹಾಗೆ, ರಾಮ್ ಚರಣ್, ಜೂ.ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವ್ಗನ್ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಚಿತ್ರ 'ಆರ್ಆರ್ಆರ್'. ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಹಾಗೂ ಕೋಮರಾಮ್ ಭೀಮ್ ಸುತ್ತ ಹೆಣೆದಿರುವ 1920ರ ಕಾಲಘಟ್ಟದ ಕಥೆ 'ಆರ್ಆರ್ಆರ್' ಚಿತ್ರ ಹೊಂದಿದೆ.