ಆ್ಯಪ್ನಗರ

ಟ್ರೆಂಡ್‌ ಆಯ್ತು ರಾಜರಥ ಟ್ರೇಲರ್‌

ರಾಜರಥದಲ್ಲಿ ಚಿತ್ರದ ತಾರಾಬಣವನ್ನು ವಿಭಿನ್ನ ಶೈಲಿಯಲ್ಲಿ ಪರಿಚಯಿಸುವ ರೀತಿ ವೀಕ್ಷಕರ ಗಮನ ಸೆಳೆದಿದೆ.

Vijaya Karnataka Web 28 Dec 2017, 10:08 am
ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿಯರವರ ಎರಡನೇ ಚಿತ್ರ 'ರಾಜರಥ'ದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.
Vijaya Karnataka Web rajaratha trailer released
ಟ್ರೆಂಡ್‌ ಆಯ್ತು ರಾಜರಥ ಟ್ರೇಲರ್‌


ಪುನೀತ್‌ ರಾಜ್‌ಕುಮಾರ್‌ ಹಿನ್ನೆಲೆ ಧ್ವನಿಯಲ್ಲಿ ಈ ಟ್ರೇಲರ್‌ ಮೂಡಿ ಬಂದಿದೆ. ಚಿತ್ರದ ತಾರಾಬಣವನ್ನು ವಿಭಿನ್ನ ಶೈಲಿಯಲ್ಲಿ ಪರಿಚಯಿಸುವ ರೀತಿ ವೀಕ್ಷಕರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ರವಿಶಂಕರ್ ಅವರ ಲುಕ್‌ ನೋಡಿದರೆ ಅವರು ಹಾಸ್ಯನಟರಾಗಿದ್ದಾರಾ? ಖಳ ನಟರಾಗಿದ್ದಾರಾ ಎಂಬ ಸಂಶಯ ಬರುವಂತಿದೆ.

ಟ್ರೇಲರ್‌ನಲ್ಲಿ ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರವಿಶಂಕರ್, ಆರ್ಯ ಈ ನಟರ ಪಾತ್ರಗಳನ್ನು ವಿಶೇಷವಾಗಿ ತೋರಿಸುವ ಮೂಲಕ ಚಿತ್ರದ ಕುರಿತ ಕುತೂಹಲ ಮತ್ತಷ್ಟು ಗರಿಗೆದರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಅನೂಪ್‌ ಭಂಡಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌