ಆ್ಯಪ್ನಗರ

ಮಗಳ ಮದುವೆಗೆ ಪೊಲೀಸ್ ಭದ್ರತೆ ಕೇಳಿದ ರಜನಿಕಾಂತ್ ಪತ್ನಿ

ಮಗಳ ಮದುವೆಗೆ ಪೊಲೀಸ್ ಪ್ರೊಟೆಕ್ಷನ್ ಕೊಡಿ ಎಂದು ರಜನಿಕಾಂತ್ ಪತ್ನಿ ಸೌಂದರ್ಯ ರಜನಿಕಾಂತ್ ಪೊಲೀಸರನ್ನು ಕೇಳಿದ್ದಾರೆ. ಇದಕ್ಕೆ ಪೊಲೀಸರು ಒಪ್ಪಿದ್ದಾರೆ. ಇದೇ ಫೆಬ್ರವರಿ 10 ಹಾಗೂ 12ರಂದು ಸೌಂದರ್ಯ ಮದುವೆ ನೆರವೇರುತ್ತಿದೆ.

TIMESOFINDIA.COM 2 Feb 2019, 1:22 pm
ತಮಿಳು ನಟ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಮದುವೆ ಇದೇ ಫೆಬ್ರವರಿ 10 ಮತ್ತು 12ರಂದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ಪತ್ನಿ ಲತಾ ಪೊಲೀಸ್ ಭದ್ರತೆಗೆ ಮನವಿ ಸಲ್ಲಿಸಿದ್ದಾರೆ. ಚೆನ್ನೈನ ಪೊಯಸ್ ಗಾರ್ಡನ್‌ನಲ್ಲಿ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಮದುವೆ ನಡೆಯಲಿದೆ.
Vijaya Karnataka Web soundarya-rajinikanth


ನಟ ಬ್ಯುಸಿನೆಸ್‍ಮ್ಯಾನ್ ವಿಶಾಗನ್ ವನಂಗಮುಡಿ ಜತೆಗೆ ಮುಂದಿನ ವಾರ ಸಪ್ತಪದಿ ತುಳಿಯುತ್ತಿದ್ದಾರೆ ಸೌಂದರ್ಯ. ಮದುವೆ ಸಿದ್ಧತೆಗಳು ಹಾಗೂ ಮದುವೆ ಕಾರ್ಯಕ್ರಮ ರಜನಿಕಾಂತ್ ಅವರ ನಿವಾಸ ಪೊಯಸ್ ಗಾರ್ಡನ್‌ನಲ್ಲಿ ನೆರವೇರಲಿವೆ.

ಈ ಮದುವೆಗೆ ಹಲವಾರು ಗಣ್ಯರು, ವಿವಿಐಪಿಗಳು ಆಗಮಿಸುತ್ತಿರುವ ಕಾರಣ ಟ್ರಾಫಿಕ್ ಸಮಸ್ಯೆ ಆಗದಂತೆ ಹಾಗೂ ರಕ್ಷಣೆ ದೃಷ್ಟಿಯಿಂದ ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ತೈನಂಪೇಟ್ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಆಗದಂತೆ ವಾಹನಗಳ ಸಂಚಾರಕ್ಕೆ ಅಡೆತಡೆಯಾಗದಂತೆ ಗಣ್ಯರಿಗೆ ಭದ್ರತೆ ಕಲ್ಪಿಸುವುದಾಗಿ ಪೊಲೀಸರು ರಜನಿಕಾಂತ್ ಕುಟುಂಬಕ್ಕೆ ತಿಳಿಸಿದ್ದಾರೆ ಎಂದಿವೆ ಮೂಲಗಳು.

ಇದೇ ಫೆಬ್ರವರಿ 11ರಂದು ಸೌಂದರ್ಯಾ ಎರಡನೇ ಮದುವೆ ಆಗುತ್ತಿದ್ದಾರೆ. ನಟ, ಉದ್ಯಮಿ ವಿಶಾಗನ್ ವನಂಗಮುಡಿ ಕೈ ಹಿಡಿಯುತ್ತಿದ್ದಾರೆ ಸೌಂದರ್ಯಾ. ಮದುವೆ ಸಿದ್ಧತೆಗಳು ಭರದಿಂದ ಸಾಗಿವೆ. ಸೌಂದರ್ಯಾ ಮೊದಲ ಮದುವೆ ಉದ್ಯಮಿ ಅಶ್ವಿನ್ ರಾಮ್‍ಕುಮಾರ್ ಜತೆಗೆ ನಡೆದಿತ್ತು. ಅವರ ದಾಂಪತ್ಯದ ಫಲವಾಗಿ ಒಂದು ಮಗ ಇದೆ. 2016ರಲ್ಲಿ ದಾಂಪತ್ಯದಲ್ಲಿ ಉಂಟಾದ ಬಿರುಕು ವಿವಾಹ ವಿಚ್ಛೇದನಕ್ಕೆ ದಾರಿಯಾಯಿತು. 2017ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಿತು ಈ ಜೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌