ಆ್ಯಪ್ನಗರ

ಕಲಾವಿದರ ಸಂಘದ ಕಟ್ಟಡಕ್ಕೆ ಡಾ.ರಾಜ್‌ ಹೆಸರು

ಕಲಾವಿದರ ಸಂಘದ ಕಟ್ಟಡ ಡಾ.ರಾಜ್‌ ಕುಮಾರ್‌ ಅವರ ಕನಸಾಗಿತ್ತು.

Vijaya Karnataka 13 Nov 2018, 10:31 am
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ 'ಡಾ.ರಾಜ್‌ಕುಮಾರ್‌ ಭವನ' ಎಂಬ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಕಲಾವಿದರ ಸಂಘದ ಖಜಾಂಚಿ ಹಾಗೂ ನಟ ದೊಡ್ಡಣ್ಣ.
Vijaya Karnataka Web Dr Raj


'ಕನ್ನಡ ಸಿನಿಮಾ ರಂಗ ಚಿಕ್ಕದಾಗಿದ್ದರೂ ಉತ್ತಮ ಸಿನಿಮಾಗಳನ್ನು ಮಾಡುತ್ತಾ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಚಿಕ್ಕ ಉದ್ಯಮ ಅಂದುಕೊಂಡು ಸುಮ್ಮನೆ ಕೂತಿಲ್ಲ. ಉತ್ತಮ ಕೆಲಸಗಳನ್ನು ಮಾಡುತ್ತಲೇ ಬಂದಿದ್ದೇವೆ. ಅಂಥದ್ದೇ ಒಂದು ಕೆಲಸ ಕಲಾವಿದರ ಸಂಘದ ಕಟ್ಟಡ. ಕಲಾವಿದರೇ ಸೇರಿಕೊಂಡು ನಿರ್ಮಾಣ ಮಾಡಿರುವ ಕಟ್ಟಡ ಬಹುಶಃ ಭಾರತೀಯ ಸಿನಿಮಾ ರಂಗದಲ್ಲಿ ಇದೇ ಮೊದಲಿರಬೇಕು' ಎಂದಿದ್ದಾರೆ ದೊಡ್ಡಣ್ಣ.

ಕಲಾವಿದರ ಸಂಘದ ಕಟ್ಟಡ ಡಾ.ರಾಜ್‌ ಕುಮಾರ್‌ ಅವರ ಕನಸಾಗಿತ್ತು. 1986ರಲ್ಲಿ ಸ್ಥಾಪನೆಯಾದ ಸಂಘವು ಇಂದು ಸ್ವಂತ ಕಟ್ಟಡದಲ್ಲಿ ತನ್ನ ಕಾರ್ಯಾರಂಭ ಮಾಡಿದೆ. ಕಟ್ಟಡ ನಿರ್ಮಾಣದಲ್ಲಿ ಅಂಬರೀಷ್‌, ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಅನೇಕರ ಕೊಡುಗೆ ಮತ್ತು ಪರಿಶ್ರಮವಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌