ಆ್ಯಪ್ನಗರ

ಐದು ವರ್ಷದ ನಂತರ ನಿರ್ದೇಶನಕ್ಕೆ ರಕ್ಷಿತ್‌ ಶೆಟ್ಟಿ, ಹೊಸ ಟೈಟಲ್ ಔಟ್

'ಇದೊಂದು ಭಾರೀ ಬಜೆಟ್‌ ಸಿನಿಮಾ. ಎರಡ್ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಶ್ರೀಮನ್ನಾರಾಯಣ ಚಿತ್ರ ರಿಲೀಸ್‌ ಆಗುತ್ತಿದ್ದಂತೆಯೇ ಈ ಸಿನಿಮಾಗೆ ಚಾಲನೆ ಸಿಗಲಿದೆ. ಬಹುಕೋಟಿಯ ಚಿತ್ರ ಇದಾಗಿದ್ದು, ಇಂಥದ್ದೊಂದು ಚಿತ್ರವನ್ನು ಮಾಡಲು ಶ್ರೀಮನ್ನಾರಾಯಣ ಚಿತ್ರವು ಧೈರ್ಯ ತುಂಬಿದೆ' ಎಂದು ರಕ್ಷಿತ್‌ ಶೆಟ್ಟಿತಿಳಿಸಿದ್ದಾರೆ.

Vijaya Karnataka 20 Jun 2019, 7:58 am
* ಶರಣು ಹುಲ್ಲೂರು
Vijaya Karnataka Web rakshit-shetty


ರಕ್ಷಿತ್‌ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರ ಬಿಡುಗಡೆಗಾಗಿ ಕಾಯುತ್ತಿರುವ ಬೆನ್ನಲ್ಲೇ, ಮತ್ತೆ ಅವರು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಈ ಬಾರಿ ಅವರು ಭಾರೀ ಬಜೆಟ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಈ ಚಿತ್ರಕ್ಕೆ 'ಪುಣ್ಯಕೋಟಿ' ಎಂದು ಹೆಸರಿಟ್ಟಿದ್ದಾರೆ.

'ಇದೊಂದು ಭಾರೀ ಬಜೆಟ್‌ ಸಿನಿಮಾ. ಎರಡ್ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಶ್ರೀಮನ್ನಾರಾಯಣ ಚಿತ್ರ ರಿಲೀಸ್‌ ಆಗುತ್ತಿದ್ದಂತೆಯೇ ಈ ಸಿನಿಮಾಗೆ ಚಾಲನೆ ಸಿಗಲಿದೆ. ಬಹುಕೋಟಿಯ ಚಿತ್ರ ಇದಾಗಿದ್ದು, ಇಂಥದ್ದೊಂದು ಚಿತ್ರವನ್ನು ಮಾಡಲು ಶ್ರೀಮನ್ನಾರಾಯಣ ಚಿತ್ರವು ಧೈರ್ಯ ತುಂಬಿದೆ' ಎಂದು ರಕ್ಷಿತ್‌ ಶೆಟ್ಟಿತಿಳಿಸಿದ್ದಾರೆ.

'ಉಳಿದವರು ಕಂಡಂತೆ' ಚಿತ್ರದ ಮೂಲಕ ನಿರ್ದೇಶಕರಾದ ರಕ್ಷಿತ್‌, ಆ ನಂತರ ನಟನೆಯಲ್ಲಿ ಬಿಝಿ ಆದರು. ಐದು ವರ್ಷದ ನಂತರ ಮತ್ತೆ ಅವರು ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದಾರೆ.

'ಇದೊಂದು ವಿಶೇಷ ಬಗೆಯ ಚಿತ್ರ. ಪುಣ್ಯಕೋಟಿಯ ಕಥೆಯನ್ನು ಈಗಾಗಲೇ ನಾವು ಕೇಳಿದ್ದೇವೆ. ಅದನ್ನು ನೆನಪಿಸುವಂತಹ ಟೈಟಲ್‌ ಅನ್ನು ನಮ್ಮ ಚಿತ್ರಕ್ಕೆ ಇಡಲು ಕಾರಣವಿದೆ. ಕಥೆಗೂ ಮತ್ತು ಟೈಟಲ್‌ಗೂ ಹೋಲಿಕೆ ಆಗುತ್ತದೆ. ಅದು ಹೇಗೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಿ' ಎಂದಿದ್ದಾರೆ ರಕ್ಷಿತ್‌.

ಈ ಚಿತ್ರಕ್ಕಾಗಿ ಭಾರೀ ಗಾತ್ರದ ಸೆಟ್‌ ಹಾಕಲು ಪ್ಲ್ಯಾನ್‌ ಆಗಿದೆ. ಹಲವು ಭಾಷೆಗಳಲ್ಲೂ ಈ ಚಿತ್ರ ತಯಾರು ಮಾಡಲು ಯೋಜನೆ ಕೂಡ ರೂಪಿಸಲಾಗಿದೆ ಎಂದಿದ್ದಾರೆ ಅವರು.

ಉಳಿದವರು ಕಂಡಂತೆ ಸಿನಿಮಾ ನಂತರ ನಾನು ನಟನೆಯಲ್ಲಿ ಬಿಝಿಯಾದೆ. ಹಾಗಾಗಿ ನಿರ್ದೇಶನ ಮಾಡಲು ಆಗಲಿಲ್ಲ. ಹಾಗಂತ ಸುಮ್ಮನೆಯೂ ಕೂತಿಲ್ಲ. ನಾನು ನಟಿಸುವ ಬಹುತೇಕ ಚಿತ್ರಗಳಲ್ಲಿ ಕಥೆಯಿಂದ ಸಿನಿಮಾ ಮುಗಿಯುವ ತನಕ ಜತೆಯಲ್ಲಿದ್ದೇನೆ.

- ರಕ್ಷಿತ್‌ ಶೆಟ್ಟಿ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌