ಆ್ಯಪ್ನಗರ

'ರಾಜರಥ' ಅನೂಪ್ ಪರವಾಗಿ ರಕ್ಷಿತ್ ಶೆಟ್ಟಿ ಭರ್ಜರಿ ಬ್ಯಾಟಿಂಗ್

ಅನೂಪ್ ಭಂಡಾರಿ ನಿರ್ದೇಶನದ 'ರಾಜರಥ' ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈ ಚಿತ್ರಕ್ಕೆ ಬಹುತೇಕ ನೆಗಟೀವ್ ರಿವ್ಯೂ ಸಿಕ್ಕಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಟ್ವಿಟರ್‌ನಲ್ಲೂ ಬಹಳಷ್ಟು ಮಂದಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಇಲ್ಲ ಎಂದಿದ್ದರು.

Vijaya Karnataka Web 29 Mar 2018, 3:07 pm
ಅನೂಪ್ ಭಂಡಾರಿ ನಿರ್ದೇಶನದ 'ರಾಜರಥ' ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈ ಚಿತ್ರಕ್ಕೆ ಬಹುತೇಕ ನೆಗಟೀವ್ ರಿವ್ಯೂ ಸಿಕ್ಕಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಟ್ವಿಟರ್‌ನಲ್ಲೂ ಬಹಳಷ್ಟು ಮಂದಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಇಲ್ಲ ಎಂದಿದ್ದರು. ಕೆಲವರಂತೂ ಸಿನಿಮಾ ಲೈವ್ಲಿಯಾಗಿದೆ, ಕಾಮಿಡಿ ಸೂಪರ್ ಆದರೆ ಕೊನೆಗೆ ಆವರೇಜ್ ಅನ್ನಿಸಿಬಿಡುತ್ತದೆ ಎಂದಿದ್ದರು.
Vijaya Karnataka Web rakshit-shetty

ರಾಜರಥ ಸಿನಿಮಾ ವಿಮರ್ಶೆ
ಇದೆಲ್ಲದರ ಪರಿಣಾಮ ಪ್ರೇಕ್ಷಕರು ಚಿತ್ರಮಂದಿರದ ಕಡೆ ತಲೆ ಹಾಕಲಿಲ್ಲ. 'ರಾಜರಥ' ಓಟಕ್ಕೆ ಬ್ರೇಕ್ ಬಿತ್ತು. ಇದೀಗ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿದ್ದು ತಮ್ಮದೇ ಶೈಲಿಯಲ್ಲಿ ಚಿತ್ರದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಅನೂಪ್ ನನ್ನ ಗೆಳೆಯ ಇರಬಹುದು. ಹೆಚ್ಚು ಎಂದರೆ ನಾವು 5 ರಿಂದ 10 ಸಲ ಭೇಟಿಯಾಗಿರುತ್ತೇವೆ. ಇದಕ್ಕಾಗಿ ಅವರನ್ನು ಬೆನ್ನುತಟ್ಟುತ್ತಿದ್ದೇನೆ ಎಂದು ಭಾವಿಸುವುದು ಬೇಡ ಎಂದು ಸ್ಪಷ್ಟಪಡಿಸಿರುವ ರಕ್ಷಿತ್, ರಾಜರಥ ಚಿತ್ರವನ್ನು ಅತ್ಯಂತ ಉತ್ಸಾಹ, ಕಠಿಣ ಪರಿಶ್ರಮದಿಂದ ನಿ ರ್ಮಿಸಲಾಗಿದೆ. ಚಿತ್ರದ ಬಗ್ಗೆ ಕಾಮೆಂಟ್ ಮಾಡುವುದು ತಪ್ಪಲ್ಲ. ಇದೊಂದು ಕೆಟ್ಟ ಚಿತ್ರ ಎನ್ನುವುದಾದರೆ ಓಕೆ. ಆದರೆ ಅನೂಪ್ ಪ್ರತಿಭೆ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ನಮಗ್ಯಾರಿಗೂ ಇಲ್ಲ ಎಂದಿದ್ದಾರೆ.

ಅನೂಪ್ ಸ್ಯಾಂಡಲ್‍ವುಡ್‍ನ ಅಮೂಲ್ಯ ರತ್ನ ಇದ್ದಂತೆ. ಅವರೊಬ್ಬ ಆಸ್ತಿ. ಇಂತಹ ಪ್ರತಿಭೆಗಳನ್ನು ಹುರುದುಂಭಿಸಬೇಕಾಗಿದೆ. ಬಾಲಿವುಡ್ ಚಿತ್ರ ನಿರ್ದೇಶನಕ್ಕೂ ಅವರಿಗೆ ಅವಕಾಶ ಬಂದಿತ್ತು. ಆದರೆ ಅವರ ಒಲವು ಕನ್ನಡ ಚಿತ್ರಗಳ ಕಡೆಗಿತ್ತು. ಅಂದು ಅವರು ನಮ್ಮ ಪರವಾಗಿ ನಿಂತರು, ಇಂದು ನಾವು ಅವರ ಪರವಾಗಿ ನಿಲ್ಲೋಣ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌