ಆ್ಯಪ್ನಗರ

ಪರಮ್‍ವಾ ಸ್ಟುಡಿಯೊ ಮೂಲಕ ನೆರವಿಗೆ ಧಾವಿಸಿದ ರಕ್ಷಿತ್ ಶೆಟ್ಟಿ

ಪ್ರವಾಹದಿಂದಾಗಿ ತತ್ತರಿಸಿರುವ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ ನಟ ರಕ್ಷಿತ್ ಶೆಟ್ಟಿ. ತಮ್ಮ ಪರಮೌ ಸ್ಟುಡಿಯೊ ಮೂಲಕ ಪರಿಹಾರ ಸಾಮಗ್ರಿಯನ್ನು ಪ್ರವಾಹ ಪೀಡಿತ ಸ್ಥಳಗಳಿಗೆ ರವಾನಿಸಲು ಮುಂದಾಗಿದ್ದಾರೆ

Vijaya Karnataka Web 8 Aug 2019, 4:40 pm
ಕರ್ನಾಟಕದ ಪ್ರವಾಹ ಪೀಡಿತ ಸ್ಥಳಗಳಿಗೆ ಪರಿಹಾರ ಸಾಮಗ್ರಿಗಳ ಪೂರೈಕೆಸಲು ಮುಂದಾಗಿದ್ದಾರೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ. ಪರಮ್‌ವಾ ಸ್ಟುಡಿಯೊ ಮೂಲಕ ಔಷಧಿಗಳು, ಬಟ್ಟೆಗಳು, ಕುಡಿಯುವ ನೀರು, ಆಹಾರವನ್ನು ಪೂರೈಸಲು ರಕ್ಷಿತ್ ಶೆಟ್ಟಿ ಮುಂದಾಗಿದ್ದಾರೆ.
Vijaya Karnataka Web rakshit-shetty


ಅಗತ್ಯ ವಸ್ತುಗಳನ್ನು ಪೂರೈಸಲು ನೀವೂ ಕೈಜೋಡಿಸಿ ಎಂದು ವಿನಂತಿಸಿಕೊಂಡಿದ್ದಾರೆ. ನಮ್ಮ ಕಡೆಯಿಂದ ಅದಾಗಲೆ ಪರಿಹಾರ ಸಾಮಗ್ರಿ ರವಾನಿಸುತ್ತಿದ್ದೇವೆ. ನೀವೂ ಸಹ ನಿಮ ಕೈಲಾದ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ವಿನಂತಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮೇಘಸ್ಫೋಟದಿಂದ ಉಕ್ಕಿದ ನದಿಗಳು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಜಲಪ್ರಳಯ ತಂದಿವೆ. ರೈಲ್ವೆ ಮಾರ್ಗವೂ ಸೇರಿದಂತೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳೂ ಜಲಾವೃತಗೊಂಡಿರುವುದರಿಂದ ಸಂಚಾರ ಸಂಪರ್ಕವಿಲ್ಲದೆ ಇಡೀ ಜಿಲ್ಲೆ ನಡುಗಡ್ಡೆಯ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಕಳಸ, ಕುದುರೆಮುಖ, ಕೆರೆಕಟ್ಟೆ, ಬಾಳೆಹೊನ್ನೂರು ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಮಳೆಯಿಂದ ಮಲೆನಾಡಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತ ವಾಗಿದ್ದು ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಅನೇಕ ವರ್ಷಗಳ ನಂತರ ದತ್ತಪೀಠ ರಸ್ತೆಯಲ್ಲಿರೋ ಹೊನ್ನಮ್ಮನ ಹಳ್ಳ‌ ಉಕ್ಕಿ ಹರಿಯುತ್ತಿದ್ದು, ಫಾಲ್ಸ್‌ಗೆ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌