ಆ್ಯಪ್ನಗರ

ಕಂಡವರ ಕಾಲೆಳೆವ ವರ್ಮಾ: ಅಲ್ಲು ಫ್ಯಾಮಿಲಿ ಬಗ್ಗೆ ಗೇಲಿ!

ರಾಮ್ ಗೋಪಲಾ ವರ್ಮಾ ಟ್ವೀಟ್ ನೋಡಿದ್ಧೇ ತಡ, ಮೆಗಾ ಮತ್ತು ಅಲ್ಲು ಫ್ಯಾಮಿಲಿ ಅಭಿಮಾನಿಗಳು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಂಡವರ ಬಗ್ಗೆ ಕಾಲೆಳೆದು ಮಾತನಾಡುವ ವರ್ಮಾ ಅವರ ಚಟದ ಬಗ್ಗೆ ಅಲ್ಲು ಫ್ಯಾಮಿಲಿ ಅಭಿಮಾನಿಗಳು ಸಿಕ್ಕಾಪಟ್ಟೆ 'ಗರಂ' ಆಗಿದ್ದಾರೆ.

Vijaya Karnataka Web 6 May 2019, 2:52 pm
ವಿವಾದಾತ್ಮಕ ಹೇಳಿಕೆಗಳ ನಿರ್ದೇಶಕ ಎಂದೇ ಖ್ಯಾತರಾಗಿರುವ ಸೌತ್ ಇಂಡಿಯನ್ ಮೂಲದ ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಟ್ರೋಲ್ ಮಾಡಿದ್ದಾರೆ. ಈ ಬಾರಿ ಅವರು ತೆಲುಗಿನ 'ಅಲ್ಲು' ಮತ್ತು 'ಮೆಗಾ ಸ್ಟಾರ್ ಫ್ಯಾಮಿಲಿ' ವಿರುದ್ಧ ಟ್ರೋಲ್ ಮಾಡಿ ಸಾಕಷ್ಟು ಜನರಿಂದ ಸಖತ್ ಉಗಿಸಿಕೊಂಡಿದ್ದಾರೆ. ಇತ್ತೀಚೆಗೆ, ಆರ್‌ಜಿವಿ ಅಂದರೆ ಸಾಕು, ಚಿತ್ರರಂಗದಲ್ಲಿ ಯಾರನ್ನಾದರೂ ಕಾಲೆಳೆಯುವುದರಲ್ಲಿ ಹೆಸರುವಾಸಿ ಅಂತಾನೇ ಫೇಮಸ್ಸು!
Vijaya Karnataka Web varma0605


ಅಂಥ ವರ್ಮಾ, ಈ ಬಾರಿ, ಅಲ್ಲು ಕುಟುಂಬದವರ ಬಗ್ಗೆ , ವಿಶೇಷವಾಗಿ ಅಲ್ಲು ಬಾಬಿ ಅಕಾ ವೆಂಕಟೇಶ್ಅವರನ್ನು, ಅಂದರೆ ಅಲ್ಲು ಅರ್ಜುನ್ ಹಿರಿಯ ಸಹೋದರ ಅವರನ್ನು ಟೀಕಿಸಿದ್ದಾರೆ. ಇತ್ತೀಚೆಗೆ 'ಲಕ್ಷ್ಮಿ ಎನ್‌ಟಿಆರ್' ನಿರ್ದೇಶಕ ರಮ್ ಗೋಪಾಲ್ ವರ್ಮಾ ವರು 'ಅಲ್ಲು ಬಾಬಿ' ಅವರನ್ನು ಭೇಟಿಯಾಗಿದ್ದಾರೆ. ವರ್ಮಾ ಯಾರನ್ನೇ ಭೇಟಿಯಾದರೂ ಅವರ ಬಗ್ಗೆ ಅಥವಾ ಅವರನ್ನು ಇಟ್ಟುಕೊಂಡು ಬೇರೆ ಯಾರದೋ ಬಗ್ಗೆ ಕೊಂಕು ನುಡಿಯದೇ ಬಿಡುವವರಲ್ಲ.

ಅಲ್ಲು ಬಾಬಿ ಅವರ ಭೇಟಿಯ ಬಳಿಕ ವರ್ಮಾ, "ನಾನು ಅಲ್ಲು ಬಾಬಿ ಅವರನ್ನು ಭೇಟಿಯಾಗಿ 'ಅವರೇಕೆ ನಟಿಸುತ್ತಿಲ್ಲ' ಎಂದು ಶಾಕ್ ಆದೆ. ಆದರೆ, ಯೋಚಿಸಿದಾಗ 'ಮೆಗಾ ಸ್ಟೈಲಿಶ್ ಪವರ್ ಫ್ಯಾಮಿಲಿ'ನಲ್ಲಿ ಅವರೇ ಬೇರೆ ಎಲ್ಲರಿಗಿಂತ ಉತ್ತಮವಾಗಿ ಕಾಣಿಸುತ್ತಾರೆ ಎಂದು ತಳಿಯಿತು.. ಮೆಗಾ, ಅಲ್ಲು ಮತ್ತು ಪವರ್‌ ಸ್ಟಾರ್ ಕುಟುಂಬದ ಇತರ ನಟರಿಗಿಂತಲೂ ಬಾಬಿ ಹೀರೋ ಆಗಲು ಅತ್ಯುತ್ತಮವಾದ ವ್ಯಕ್ತಿ ಎಂಬಂತೆ ಕಂಡರು.." ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

ರಾಮ್ ಗೋಪಲಾ ವರ್ಮಾ ಟ್ವೀಟ್ ನೋಡಿದ್ಧೇ ತಡ, ಮೆಗಾ ಮತ್ತು ಅಲ್ಲು ಫ್ಯಾಮಿಲಿ ಅಭಿಮಾನಿಗಳು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಂಡವರ ಬಗ್ಗೆ ಕಾಲೆಳೆದು ಮಾತನಾಡುವ ವರ್ಮಾ ಅವರ ಚಟದ ಬಗ್ಗೆ ಅಲ್ಲು ಫ್ಯಾಮಿಲಿ ಅಭಿಮಾನಿಗಳು ಸಿಕ್ಕಾಪಟ್ಟೆ 'ಗರಂ' ಆಗಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮಾ ಅವರ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಅಲ್ಲು-ಮೆಗಾ ಫ್ಯಾಮಿಲಿ ಫ್ಯಾನ್ಸ್ ಕೆಂಡ ಕಾರುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌