ಆ್ಯಪ್ನಗರ

ಸೋಷಿಯಲ್‌ ಮೀಡಿಯಾದಿಂದ ಹೊರ ನಡೆದ ರಕ್ಷಿತ್‌ ಶೆಟ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟಿವ್‌ ಆಗಿದ್ದ ನಟ ರಕ್ಷಿತ್‌ ಶೆಟ್ಟಿ, ದಿಢೀರ್‌ ಅಂತ ಅಲ್ಲಿಂದ ಮಾಯವಾಗಿದ್ದಾರೆ. ಅವರ ಈ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

Vijaya Karnataka 4 Sep 2018, 11:11 am
ಅಚ್ಚರಿ ಎನ್ನುವಂತೆ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ ನಟ ರಕ್ಷಿತ್‌ ಶೆಟ್ಟಿ. ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಮೂಲಕ ಅಭಿಮಾನಿಗಳ ಜತೆ ಸಂವಾದ ಮಾಡುತ್ತಿದ್ದವರು, ಇದ್ದಕ್ಕಿದ್ದಂತೆ ಸೋಷಿಯಲ್‌ ಮೀಡಿಯಾದಿಂದ ದೂರ ಉಳಿದಿದ್ದಾರೆ. ಈ ನಡೆ ರಕ್ಷಿತ್‌ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
Vijaya Karnataka Web rakshit-shetty


ಅವರು ಇಂಥದ್ದೊಂದು ನಿರ್ಧಾರ ಯಾಕೆ ತಗೆದುಕೊಂಡರು ಎಂದು ಈವರೆಗೂ ಹೇಳಿಲ್ಲಕೊಂಡಿಲ್ಲ. ಆದರೆ, ರವಿವಾರದಿಂದ ಟ್ವಿಟರ್‌ ಖಾತೆ ಡಿಲಿಟ್‌ ಆಗಿದೆ. ಇತ್ತೀಚಿನ ದಿನಗಳಲ್ಲಿ ರಕ್ಷಿತ್‌ ಮತ್ತು ಇವರ ಭಾವಿ ಪತ್ನಿ ರಶ್ಮಿಕಾ ಕುರಿತಾದ ಟ್ರೋಲ್‌ಗಳು ಚರ್ಚೆಗೆ ಕಾರಣವಾಗಿದ್ದವು. ಹಲವರು ವೈಯಕ್ತಿಕ ವಿಷಯಗಳ ಕುರಿತಾಗಿ ಟ್ರೋಲ್‌ ಮಾಡುತ್ತಿದ್ದರು. ಇದೇ ಸೋಷಿಯಲ್‌ ಮೀಡಿಯಾಗಳಿಂದ ದೂರ ಹೋಗಲು ಕಾರಣ ಎನ್ನಲಾಗುತ್ತಿದೆ. ಆದರೆ, ರಕ್ಷಿತ್‌ ಮಾತ್ರ ಈ ಕುರಿತು ಏನೂ ಹೇಳುತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌