ಆ್ಯಪ್ನಗರ

ಸಲಗ ತಂಡದಿಂದ ಒಂದು ಟ್ರಕ್‌ ಅಗತ್ಯ ವಸ್ತು ಪೂರೈಕೆ

ದುನಿಯಾ ವಿಜಯ್‌ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ತಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಒಂದು ಟ್ರಕ್‌ ಅಗತ್ಯ ವಸ್ತುಗಳನ್ನು ಬೆಂಗಳೂರಿನಿಂದ ಬುಧವಾರ ಕಳಿಸಿಕೊಟ್ಟಿದೆ.

Vijaya Karnataka 15 Aug 2019, 5:00 am
ದುನಿಯಾ ವಿಜಯ್‌ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ತಂಡ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಒಂದು ಟ್ರಕ್‌ ಅಗತ್ಯ ವಸ್ತುಗಳನ್ನು ಬೆಂಗಳೂರಿನಿಂದ ಬುಧವಾರ ಕಳಿಸಿಕೊಟ್ಟಿದೆ.
Vijaya Karnataka Web salaga


'ನಮ್ಮ ಸಿನಿಮಾ ತಂಡದಿಂದ ಉತ್ತರ ಕರ್ನಾಟಕದಲ್ಲಿಆದ ಅನಾಹುತಗಳಿಗೆ ಏನಾದರೂ ಪರಿಹಾರ ಮಾಡಬೇಕೆಂದು ನಿರ್ಧರಿಸಿದೆವು. ಆದರೆ ಬರೀ ಒಂದೆರೆಡು ವಸ್ತುಗಳನ್ನು ಕೊಡುವದಕ್ಕಿಂತಲೂ ಒಂದು ಟ್ರಕ್‌ನಲ್ಲಿಅಗತ್ಯ ವಸ್ತುಗಳನ್ನು ತುಂಬಿಸಿ ಕಳಿಸಿದರೆ ಉತ್ತಮ ಎಂದು ಯೋಚಿಸಿದೆವು. ಗಾಡಿಯಲ್ಲಿಒಂದಷ್ಟು ಬ್ಯಾಗ್‌ಗಳನ್ನು ಮಾಡಿದ್ದೇವೆ. ಅದರಲ್ಲಿಸೋಪು, ಶ್ಯಾಂಪು, ಪೇಸ್ಟ್‌, ಬ್ರಶ್‌ ಸೇರಿದಂತೆ ದಿನದ ಅಗತ್ಯ ವಸ್ತುಗಳಿವೆ. ಅದರ ಜತೆ 10 ಮೂಟೆ ತೊಗರಿ ಬೇಳೆ, ಅಕ್ಕಿ ಮೂಟೆ, ನೂರು ಮೂಟೆ ಬೂಸಾ, ಬೆಡ್‌ ಶಿಟ್‌, ಟವೆಲ್‌ಗಳು ಬಿಸ್ಕೆಟ್‌ನಂತಹ ತಿಂಡಿ ಇರುವ 500 ಬಾಕ್ಸ್‌ಗಳು, 1000ಕ್ಕೂ ಹೆಚ್ಚಿನ ನೀರಿನ ಬಾಟಲ್‌ಗಳು ಸೇರಿದಂತೆ ಸಾಕಷ್ಟು ವಸ್ತುಗಳು ಬುಧವಾರ ಬೆಂಗಳೂರಿನಿಂದ ಹೊರಟಿದೆ'ಎನ್ನುತ್ತಾರೆ ಸಲಗ ಸಿನಿಮಾದ ನಿರ್ಮಾಪಕ ಶ್ರೀಕಾಂತ್‌.

ಕ್ರಿಕೆಟಿಗರಾದ ವೆಂಕಟೇಶ್‌ಪ್ರಸಾದ್‌, ವಿಜಯ್‌ ಭಾರಾಧ್ವಜ್‌, ನಿವೃತ್ತ ಪೊಲೀಸ್‌ ಅಧಿಕಾರಿ ಓಂ ಪ್ರಕಾಶ್‌ ರಾವ್‌, ದುನಿಯಾ ವಿಜಯ್‌, ಮತ್ತು ಸಲಗ ತಂಡ ಈ ಸಂದರ್ಭದಲ್ಲಿಹಾಜರಿತ್ತು.

ಇದನ್ನು ನಮ್ಮ ಕ್ಯಾಂಟರ್‌ನಲ್ಲಿರುವ ಸ್ವಯಂ ಸಹಾಯಕರು ಒಂದೊಂದು ಮನೆಗೆ ವೈಯಕ್ತಿಕವಾಗಿ ಹೋಗಿ ಇದನ್ನು ನೀಡುತ್ತಾರೆ. ರಸ್ತೆಯಲ್ಲಿನಿಂತು ಹಂಚುವುದಿಲ್ಲಎನ್ನುತ್ತಾರೆ ದುನಿಯಾ ವಿಜಯ್‌.

---

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌