ಆ್ಯಪ್ನಗರ

ತನ್ನ ಗಂಡನ ಪರ್ಫಾಮೆನ್ಸ್ ಬಗ್ಗೆ ಸಮಂತಾ ಅಕ್ಕಿನೇನಿ ಹೇಳಿದ್ದೇನು?

ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದೆ. ವಿಶೇಷ ಎಂದರೆ ಈ ಸಿನಿಮಾ ಅಮೆರಿಕದಲ್ಲಿ ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ವಿಶ್ವದಾದ್ಯಂತ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಸಿನಿಮಾ ಬಗ್ಗೆ ಸಮಂತಾ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Vijaya Karnataka Web 17 Apr 2019, 2:30 pm
ತನ್ನ ಗಂಡ ನಾಗ ಚೈತನ್ಯ ನಟಿಸುತ್ತಿದ್ದಾಗ ಮಾನಿಟರ್ ಮುಂದೆ ಕುಳಿತು ನೋಡುತ್ತಿರುತ್ತೇನೆಂದು ಟಾಲಿವುಡ್ ಹೀರೋಯಿನ್ ಸಮಂತಾ ಅಕ್ಕಿನೇನಿ ಹೇಳಿದ್ದಾರೆ. ಚೈ-ಸಾಮ್ ಜತೆಯಾಗಿ ಅಭಿನಯಿಸಿರುವ ಸಿನಿಮಾ 'ಮಜಿಲಿ' ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
Vijaya Karnataka Web samantha-akkineni


ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದೆ. ವಿಶೇಷ ಎಂದರೆ ಈ ಸಿನಿಮಾ ಅಮೆರಿಕದಲ್ಲಿ ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ವಿಶ್ವದಾದ್ಯಂತ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಸಿನಿಮಾ ಬಗ್ಗೆ ಸಮಂತಾ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

"ಚೈತನ್ಯ ಸನ್ನಿವೇಶಗಳಲ್ಲಿ ಅಭಿನಯಿಸುವಾಗ ನಾನು ಮಾನಿಟರ್ ಮುಂದೆ ಕೂರುತ್ತೇನೆ. ಅವರು ಸರಿಯಾಗಿ ನಟಿಸದಿದ್ದರೆ ಕೋಪದಿಂದ ಕೂಗಾಡುತ್ತೇನೆ. ಆದರೆ ಅವರು ಅದ್ಭುತವಾಗಿ ಅಭಿನಯಿಸಿದರೆ ಅತ್ಯುತ್ಸಾಹದಿಂದ ಅಭಿನಂದಿಸುವ ಮೊದಲ ವ್ಯಕ್ತಿ ನಾನೇ. ಒತ್ತಡವನ್ನು ಸ್ವೀಕರಿಸಿದೆ" ಎಂದು ಸಾಮ್ ಹೇಳಿದ್ದಾರೆ.

ಸಾಮ್ ನಟಿಸಿರುವ 'ಓ ಬೇಬಿ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಂದಿನಿ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೊರಿಯನ್ ಸಿನಿಮಾ ಮಿಸ್ ಗ್ರಾನಿಯ ರೀಮೇಕ್ ಇದು. ಸದ್ಯಕ್ಕೆ ಸ್ಯಾಮ್ ತಮಿಳು ಸಿನಿಮಾ 96 ತೆಲುಗು ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಶರ್ವಾನಂದ್ ಹೀರೋ ಆಗಿರುವ ಸಿನಿಮಾ ಇದು. ದಿಲ್‌ರಾಜು ನಿರ್ಮಾಪಕ. ಈ ಚಿತ್ರಕ್ಕೆ ಜಾನಕಿ ದೇವಿ ಎಂದು ಹೆಸರಿಡಲು ಯೋಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌