ಆ್ಯಪ್ನಗರ

ಚುನಾವಣೆ ಜಾಗೃತಿಯಲ್ಲಿ ಸ್ಯಾಂಡಲ್‌ವುಡ್‌ ನಟಿಯರು

ಕನ್ನಡದ ಹಿರಿಯ ನಟಿಯರ ಮಕ್ಕಳು ಒಟ್ಟಾಗಿ ನಟಿಸುತ್ತಿರುವ ಎಂಎಂಸಿಹೆಚ್‌ ಸಿನಿಮಾದ ನಾಯಕಿಯರು ಒಟ್ಟಾಗಿ ಚುನಾವಣಾ ಜಾಗೃತಿಗೆ ಮುಂದಾಗಿದ್ದಾರೆ.

Vijaya Karnataka 7 May 2018, 12:07 pm
ಕನ್ನಡದ ಹಿರಿಯ ನಟಿಯರ ಮಕ್ಕಳು ಒಟ್ಟಾಗಿ ನಟಿಸುತ್ತಿರುವ ಎಂಎಂಸಿಹೆಚ್‌ ಸಿನಿಮಾದ ನಾಯಕಿಯರು ಒಟ್ಟಾಗಿ ಚುನಾವಣಾ ಜಾಗೃತಿಗೆ ಮುಂದಾಗಿದ್ದಾರೆ. ಮೇಘನಾ ರಾಜ್‌, ಸಂಯುಕ್ತ ಹೊರನಾಡು, ಪ್ರಥಮಾ, ನಕ್ಷತ್ರ ಮತ್ತು ರಾಗಿಣಿ ಒಟ್ಟಾಗಿ ಟೀಸರ್‌ವೊಂದನ್ನು ರೆಡಿ ಮಾಡಿದ್ದು, ಇನ್ನೆರಡು ದಿನದಲ್ಲಿ ಆ ಟೀಸರ್‌ ಬಿಡುಗಡೆ ಮಾಡಲಿದೆಯಂತೆ ಚಿತ್ರತಂಡ.
Vijaya Karnataka Web ragini-dwivedi


ಈ ಸಿನಿಮಾದಲ್ಲಿ ಬಹುತೇಕವಾಗಿ ಮಹಿಳಾಮಣಿಗಳೇ ಇದ್ದಾರೆ. ಅಲ್ಲದೇ ರಾಗಿಣಿ ಈಗಾಗಲೇ ಚುನಾವಣೆಯ ಅಂಬಾಸಿಡರ್‌ ಕೂಡ. ಎಲ್ಲವನ್ನೂ ಬಳಸಿಕೊಂಡು ನಿರ್ದೇಶಕ ಮುಸ್ಸಂಜೆ ಮಹೇಶ್‌ ಟೀಸರ್‌ ರೆಡಿ ಮಾಡಿದ್ದಾರೆ. ಕಡ್ಡಾಯವಾಗಿ ಮತದಾನ ಮಾಡಿ ಎಂಬ ಸಂದೇಶ ಹೊತ್ತು ಈ ಟೀಸರ್‌ ಬರಲಿದೆ.

'ನಮ್ಮ ಸಿನಿಮಾದ ನಿರ್ಮಾಪಕರಾದ ಎಸ್‌.ಪುರುಷೋತ್ತಮ್‌, ಜಾನಕಿರಾಮ್‌ ಹಾಗೂ ಅರವಿಂದ್‌ ಇಂಥದ್ದೊಂದು ಐಡಿಯಾ ಕೊಟ್ಟರು. ನನಗೂ ಅದು ಸರಿ ಅನಿಸಿತು. ಇರುವ ಕಡಿಮೆ ಸಮಯದಲ್ಲಿಯೇ ಉತ್ತಮವಾಗಿರುವ ಟೀಸರ್‌ ರೆಡಿ ಮಾಡಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಹೇಳಿದ್ದೇವೆ. ಇಂಥದ್ದೊಂದು ಕಾರ‍್ಯಕ್ರಮದಲ್ಲಿ ನಾವು ಭಾಗಿಯಾಗಿದ್ದಕ್ಕೆ ನಮಗೊಂದು ಹೆಮ್ಮೆಯಿದೆ' ಎನ್ನುವುದು ಚಿತ್ರತಂಡದ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌