ಆ್ಯಪ್ನಗರ

ಅರಣ್ಯಕ್ಕೆ ಬೆಂಕಿ ಹಚ್ಚುವ ದುಸ್ಸಾಹಸ ಬೇಡ: ನಟ ದರ್ಶನ್

ಬೆಂಗಳೂರಿನ ಕಬ್ಬನ್ ಪಾರ್ಕನಲ್ಲಿ ಆಯೋಜಿಸಿದ್ದ ಮ್ಯಾರೆಥನ್ ಉದ್ದೇಶಿಸಿ ಮಾತನಾಡಿರುವ ನಟ ದರ್ಶನ್, ಕಾಡಿಗೆ ಬೆಂಕಿ ಹಾಕೋ ದುಷ್ಟರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. "ಅರಣ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ದಯವಿಟ್ಟು ಯಾರೇ ಆಗಲಿ ಅರಣ್ಯಕ್ಕೆ ಬೆಂಕಿ ಹಚ್ಚುವ ದುಸ್ಸಾಹಸ ಮಾಡಬೇಡಿ" ಎಂದಿದ್ದಾರೆ.

Vijaya Karnataka Web 18 Mar 2019, 10:43 am
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಯಾರೂ ಅರಣ್ಯಕ್ಕೆ ಬೆಂಕಿ ಹಚ್ಚುವ ದುಸ್ಸಾಹಸ ಕೈ ಹಾಕಬೇಡಿ ' ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ವನ್ಯ ಜೀವಿಗಳ ಮೇಲಿನ ತಮ್ಮ ಕಳಕಳಿಯನ್ನು ಈ ಮೂಲಕ ಅವರು ಪ್ರದರ್ಶಿಸಿ ಜನರಿಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
Vijaya Karnataka Web darshan1803


ನಟ ದರ್ಶನ್ ಅವರಿಗೆ ಸಿನಿಮಾ ನಟನೆಯಲ್ಲಿ ಎಷ್ಟು ಆಸಕ್ತಿ, ಕಮಿಟ್‌ಮೆಂಟ್ ಇದೆಯೋ ಅಷ್ಟೆ ಆಸಕ್ತಿ ಪ್ರಕೃತಿ ಮತ್ತು ವನ್ಯ ಜೀವಿಗಳ ಮೇಲೆಯೂ ಇದೆ. ಇಂಥ ದರ್ಶನ್, ಸದ್ಯಕ್ಕೆ ಕರ್ನಾಟಕ ಅರಣ್ಯ ವನ್ಯ ಜೀವಿ ಇಲಾಖೆಯ ಗೌರವ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾವು ಬಿಡುವಿದ್ದಾಗ ಅರಣ್ಯಗಳಿಗೆ ಭೇಟಿ ಕೊಟ್ಟು ಸುಂದರ ಕಾಡು ಮೇಡಗಳ ಸೊಬಗನ್ನು ಸವಿದು ಅನಿಭವಿಸುವುದಲ್ಲದೇ, ಪ್ರಾಣಿ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಬೇಕಾದಗ ಫೋಟೋ ನೋಡಿ ಸಂತೋಷ ಪಡುತ್ತಿರುತ್ತಾರೆ ನಟ ದರ್ಶನ್.

ಮೈಸೂರಿನ ತಮ್ಮ ಫಾರ್ಮ್ ಹೌಸ್ನಲ್ಲಿ ಬಹಳಷ್ಟು ಗಿಡ-ಮರಗಳನ್ನು, ಪ್ರಾಣಿ ಪಕ್ಷಿಗಳನ್ನು ಸಾಕಿ ಸಲುಹುತ್ತಿದ್ದಾರೆ . ಎಷ್ಟೋ ಪ್ರಾಣಿಗಳನ್ನು ದತ್ತು ತೆಗದುಕೊಂಡು ದರ್ಶನ್ ಅವರು ಸಾಕುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಂಡಿಪುರ ಅಭಯಾರಣ್ಯದಲ್ಲಿ ಕೆಲವು ಪ್ರದೇಶವು ಕಾಡ್ಗಿಚ್ಚಿಗೆ ಬಲಿಯಾಗಿದೆ. ಸಾವಿರಾರು ಎಕರೆ ಕಾಡು ಹಾಗೂ ಮೃಗ-ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ. ಈ ಬಗ್ಗೆ ದರ್ಶನ್ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ 'ಕಾಡಿನ ಸಮಸ್ಯೆಯ ಪರಿಹಾರಕ್ಕೆ ಕೈ ಜೋಡಿಸಿ' ಎಂದು ಮನವಿ ಮಾಡಿಕೊಂಡಿದ್ದರು.

ಇತ್ತೀಚಿಗೆ, ಬೆಂಗಳೂರಿನ ಕಬ್ಬನ್ ಪಾರ್ಕನಲ್ಲಿ ಆಯೋಜಿಸಿದ್ದ ಮ್ಯಾರೆಥನ್ ಉದ್ದೇಶಿಸಿ ಮಾತನಾಡಿರುವ ನಟ ದರ್ಶನ್, ಕಾಡಿಗೆ ಬೆಂಕಿ ಹಾಕೋ ದುಷ್ಟರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. 'ಅರಣ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ದಯವಿಟ್ಟು ಯಾರೇ ಆಗಲಿ ಅರಣ್ಯಕ್ಕೆ ಬೆಂಕಿ ಹಚ್ಚುವ ದುಸ್ಸಾಹಸ ಮಾಡಬೇಡಿ. ಜನರಿಗೆ ಯಾಕೋ ನಯವಾಗಿ ಹೇಳಿದರೆ ಅರ್ಥವಾಗುತ್ತಿಲ್ಲ' ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಂಟರ್ನ್ಯಾಷನಲ್ ಫಾರೆಸ್ಟ್ ದಿನಾಚರಣೆ ಅಂಗವಾಗಿ ಅರಣ್ಯದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಕ್ಕೆ 'ರನ್ ಫಾರ್ ಗ್ರೀನ್ ಕರ್ನಾಟಕ ವಾಕ್‌ಥಾನ್ ಏರ್ಪಡಿಸಲಾಗಿತ್ತು. ಈ ಅರಣ್ಯ ಜಾಗೃತಿ ಕಾರ್ಯಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ ಮತ್ತು ನಟ ದರ್ಶನ್ ಭಾಗವಹಿಸಿದ್ದರು. ನಟ ದರ್ಶನ ಸ್ವತಃ ತಾವೇ ಫೋಟೋಗ್ರಫಿ ಮಾಡಿ, ಅದ್ರಿಂದ ಬಂದಿರುವ ಮೊತ್ತವನ್ನು ಅರಣ್ಯದ ರಕ್ಷಣೆಗೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌