ಆ್ಯಪ್ನಗರ

ಕಾಲಿವುಡ್‌ನಲ್ಲಿ ಬಾಕ್ಸರ್‌ ಆದ ಸಂಜನಾ

ಟಾಲಿವುಡ್‌ನಲ್ಲಿ ಹೆಸರು ಮಾಡುತ್ತಿರುವ ಕನ್ನಡ ನಟಿ ಸಂಜನಾ ಗಲ್ರಾನಿ ಈಗ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಬಾಕ್ಸರ್‌ ಆಗಿ ಎಂಟ್ರಿಕೊಟ್ಟಿರುವ ಅವರ ಹೊಸ ಚಿತ್ರ ಸೆಟ್ಟೇರುತ್ತಿದೆ. ವಿವೇಕ್‌ ಕಣ್ಣನ್‌ ನಿರ್ದೇಶನದ ಚಿತ್ರ ಇದಾಗಿದ್ದು, ಬಾಕ್ಸರ್‌ ಎಂದು ಹೆಸರಿಡಲಾಗಿದೆ.

Vijaya Karnataka 21 Jun 2019, 5:00 am
ಟಾಲಿವುಡ್‌ನಲ್ಲಿ ಹೆಸರು ಮಾಡುತ್ತಿರುವ ಕನ್ನಡ ನಟಿ ಸಂಜನಾ ಗಲ್ರಾನಿ ಈಗ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಬಾಕ್ಸರ್‌ ಆಗಿ ಎಂಟ್ರಿಕೊಟ್ಟಿರುವ ಅವರ ಹೊಸ ಚಿತ್ರ ಸೆಟ್ಟೇರುತ್ತಿದೆ. ವಿವೇಕ್‌ ಕಣ್ಣನ್‌ ನಿರ್ದೇಶನದ ಚಿತ್ರ ಇದಾಗಿದ್ದು, ಬಾಕ್ಸರ್‌ ಎಂದು ಹೆಸರಿಡಲಾಗಿದೆ.
Vijaya Karnataka Web _F3A4215


ತಮಿಳಿನಲ್ಲಿ ಮೊದಲ ಬಾರಿಗೆ ನಟಿಸಲಿರುವ ಸಂಜನಾ ಚಿತ್ರದಲ್ಲಿ ಬಾಕ್ಸರ್‌ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರ ಇದು ಎಂದಿದ್ದಾರೆ ಅವರು. 'ತುಂಬಾ ಖುಷಿಯಾಗ್ತಿದೆ. ತಮಿಳಿನಲ್ಲಿ ನನ್ನ ಮೊದಲ ಚಿತ್ರದಲ್ಲೇ ಇಂಥದ್ದೊಂದು ಪಾತ್ರ ಸಿಕ್ಕಿದ್ದು ಅದೃಷ್ಟ. ದೊಡ್ಡ ಪ್ರೊಡಕ್ಷನ್‌ ಹೌಸ್‌ನಿಂದ ಚಿತ್ರ ತೆರೆಗೆ ಬರಲಿದೆ. ಮಹಿಳಾ ಪ್ರಧಾನ ಚಿತ್ರ ಇದು. ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ನಾನು ಈ ರೀತಿ ಕಾಣಿಸಿಕೊಂಡಿಲ್ಲ. ಪ್ರೇಕ್ಷಕರಿಗೆ ಸರ್‌ಪ್ರೈಸ್‌ ನೀಡಲಿದ್ದೇವೆ' ಎಂದಿದ್ದಾರೆ.

ತೆಲುಗಿನಲ್ಲಿ ಕಿರುತೆರೆಯಲ್ಲಿ ಮಿಂಚಿದ ಸಂಜನಾ, ಈ ಸಂದರ್ಭದಲ್ಲಿ ತಾವು ಹಾಕಿದ ಶ್ರಮ ತಮಿಳು ಚಿತ್ರ ಸಿಗಲು ಕಾರಣ ಎಂದಿದ್ದಾರೆ. 'ಈ ಸೀರಿಯಲ್‌ಗಾಗಿ ನಾನು ಕತ್ತಿ ವರಸೆ, ಕುದುರೆ ಸವಾರಿ, ಬಾಕ್ಸಿಂಗ್‌ ಎಲ್ಲವನ್ನೂ ಕಲಿತೆ. ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ನೀಡಿದೆ. ಇದು ನನಗೆ ಬಾಕ್ಸರ್‌ ಪಾತ್ರಕ್ಕೆ ಆಯ್ಕೆಯಾಗಲು ಸಹಾಯಕವಾಯಿತು. ಬಾಕ್ಸರ್‌ ಚಿತ್ರದ ಕತೆಯನ್ನು ನಿರ್ದೇಶಕರು ನರೇಟ್‌ ಮಾಡಿದಾಗ ನನಗೆ ಬಹಳ ಇಷ್ಟವಾಯ್ತು' ಎಂದಿದ್ದಾರೆ ಅವರು. ಕನ್ನಡದಲ್ಲಿ ಮತ್ತೆ ಮತ್ತೆ ಚಿತ್ರದಲ್ಲಿ ಅವರು ನಟಿಸಿದ್ದು, ರಿಲೀಸ್‌ಗೆ ಕಾದಿದ್ದಾರೆ. ಇದಲ್ಲದೆ, ವೆಬ್‌ ಸೀರಿಸ್‌ 'ಐವಾರ್‌ ಸೀಸನ್‌ 1' ನಲ್ಲೂ ನಟಿಸಿದ್ದಾರೆ.

ಕೋಟ್ಸ್‌

ಚಿತ್ರದಲ್ಲಿ ಹೊಸ ರೀತಿಯ ಲುಕ್‌, ಪಾತ್ರ ನನ್ನದು. ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ತಮಿಳಿನಲ್ಲಿ ಮೊದಲ ಚಿತ್ರ ಬಾಕ್ಸರ್‌ ಆಗಿದ್ದು ಖುಷಿ ತಂದಿದೆ.

-ಸಂಜನಾ ಗಲ್ರಾನಿ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌