ಆ್ಯಪ್ನಗರ

ಚುನಾವಣೆಗೆ ಕೈ ಜೋಡಿಸಿ ಅಚ್ಚರಿ ಮೂಡಿಸಿದ 'ಸರಿಗಮಪ' ಹನುಮಂತ

ಗಾಯಕ ಹನುಮಂತ ಅವರನ್ನು ಕೆಲ ರಾಜಕೀಯ ಪಕ್ಷಗಳ ನಾಯಕರುಗಳು ತಮ್ಮ ಪಕ್ಷದ ಪರ ಪ್ರಚಾರ ನಡೆಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ ಹನುಮಂತ ಯಾರಿಗೂ ಕೂಡ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ.

Vijaya Karnataka Web 31 Mar 2019, 7:50 pm
ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಗಾಯಕ ಹಾವೇರಿಯ ಹನುಮಂತಪ್ಪ, ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರಲ್ಲಿ ಜಾಗೃತಿ ಮಾಡಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಚುನಾವಣಾ ಆಯೋಗ ಎಲ್ಲರೂ ಮತದಾನ ಮಾಡಿ ಅಂತಾ ಎಷ್ಟೇ ಹೇಳಿದರೂ ನೂರಕ್ಕೆ ನೂರರಷ್ಟು ಮತದಾನವಾಗುವುದು ಸದ್ಯದ ಪರಿಸ್ಥಿತಯಲ್ಲಿ ಕಷ್ಟವೇ. ಈ ಹಿನ್ನೆಲೆಯಲ್ಲಿ ಜನಪ್ರಿಯವಾದ ವ್ಯಕ್ತಿಗಳನ್ನು ಮತದಾನದ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಬಳಸಿಕೊಳ್ಳಲು ನಿರ್ಧರಿಸಿದೆ.
Vijaya Karnataka Web hanumantha3103


ಈ ದಿಸೆಯಲ್ಲಿ, ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದ ಗಾಯಕ ಹನುಮಂತ ಲಮಾಣಿ, ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾ ಚುನಾವಣಾ ಆಯೋಗ ಸದ್ಯ ಹನುಮಂತ ಅವರನ್ನು ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಿದೆ. ಗಾಯಕ ಹನುಮಂತನ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಚಿತ್ರೀಕರಣ ಮಾಡಲು ಸಕಲ ಸಿದ್ಧತೆಗಳನ್ನು ನಡೆಸಿದೆ. ಈ ಮೂಲಕ ಚುನಾವಣೆಯಲ್ಲಿ ಮತದಾನದ ಜಾಗೃತಿ ಪ್ರಚಾರದಲ್ಲಿ ಹನುಮಂತ ಭಾಗಿಯಾಗಲಿದ್ದಾರೆ.

ಇನ್ನುಇದೇ ಮೊದಲ ಬಾರಿಗೆ ಹನುಮಂತ ಅವರು ಸಹ ಮತದಾನ ಮಾಡಲಿದ್ದಾರೆ. ಗಾಯಕ ಹನುಮಂತ ಅವರನ್ನು ಕೆಲ ರಾಜಕೀಯ ಪಕ್ಷಗಳ ನಾಯಕರುಗಳು ತಮ್ಮ ಪಕ್ಷದ ಪರ ಪ್ರಚಾರ ನಡೆಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ ಹನುಮಂತ ಯಾರಿಗೂ ಕೂಡ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಇನ್ನು ಸಹಜವಾಗಿ ತಮ್ಮ ಗಾಯನದ ಮೂಲಕ ಬಹಳಷ್ಟು ಜನರ ಗಮನ ಸೆಳೆದಿರುವ ಹನುಮಂತ, ಮತದಾನದ ಜಾಗೃತಿ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕು.

ಒಟ್ಟಿನಲ್ಲಿ, ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಗ್ರಾಮೀಣ ಪ್ರತಿಭೆ ಹನುಮಂತ, ಸದ್ಯ ಜನಜಾಗೃತಿ ಕಾರ್ಯಕ್ಕೆ ಸಜ್ಜಾಗಿರುವುದನ್ನು ಬಹಳಷ್ಟು ಜನರು ಸ್ವಾಗತಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಕೆಲವು ಸಿನಿಮಾ ಗೀತೆಗಳಿಗೂ ಧ್ವನಿಯಾಗಲಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌