ಆ್ಯಪ್ನಗರ

ವಿಲನ್‌ ಆಗೋಗೆ ಜಿದ್ದಿಗೆ ಬಿದ್ದ ಬ್ರದರ್ಸ್‌

ಸರ್ಜಾ ಸಹೋದರರು ಕೂಡಾ ಒಟ್ಟಿಗೆ ನಟಿಸಲು ಕಾತುರದಿಂದ ಕಾದಿದ್ದಾರೆ. ಆದರೆ ಇಬ್ಬರಿಗೂ ವಿಲನ್‌ ಆಗುವ ಆಸೆ. ಇದಕ್ಕೆ ಪೈಪೋಟಿಗೆ ಬಿದ್ದಿದ್ದಾರೆ.

Vijaya Karnataka 23 Mar 2019, 5:00 am
ವಿಲನ್‌ ಆಗೋಗೆ ಜಿದ್ದಿಗೆ ಬಿದ್ದ ಬ್ರದರ್ಸ್‌
Vijaya Karnataka Web chiranjeevi-sarja-dhru-sarja.png


ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಈಗ ಚಿತ್ರರಂಗದಲ್ಲಿ ಬಿಝಿಯಾಗಿದ್ದಾರೆ. ಇವರಿಬ್ಬರೂ ಒಟ್ಟಿಗೆ ಸಿನಿಮಾ ಯಾವಾಗ ಮಾಡಬಹದು ಎಂಬ ಕುತೂಹಲ ಎಲ್ಲರಲ್ಲಿದೆ. ಸರ್ಜಾ ಸಹೋದರರು ಕೂಡಾ ಒಟ್ಟಿಗೆ ನಟಿಸಲು ಕಾತುರದಿಂದ ಕಾದಿದ್ದಾರೆ. ಆದರೆ ಇಬ್ಬರಿಗೂ ವಿಲನ್‌ ಆಗುವ ಆಸೆ. ಇದಕ್ಕೆ ಪೈಪೋಟಿಗೆ ಬಿದ್ದಿದ್ದಾರೆ. ಇಂಥದ್ದೊಂದು ಪ್ರಸಂಗ ಮಾಧ್ಯಮದೆದುರು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ನಡೆದಿದೆ.

'ಚೆನ್ನಾಗಿರುವ ಸ್ಕ್ರಿಪ್ಟ್‌ ಬಂದರೆ ಒಟ್ಟಿಗೆ ನಟಿಸುತ್ತೇವೆ. ಮೊದಲು ಇಬ್ಬರಿಗೂ ಸ್ಕ್ರಿಪ್ಟ್‌ ಇಷ್ಟವಾಗಬೇಕು' ಎಂದಿದ್ದಾರೆ ಚಿರಂಜೀವಿ. ಹಾಗಾದ್ರೆ ಈ ಚಿತ್ರದಲ್ಲಿ ಯಾರು ವಿಲನ್‌ ಆಗ್ತಾರೆ ಎನ್ನುವ ಮಾಧ್ಯಮದ ಪ್ರಶ್ನೆಗೆ ನಾನು.. ನಾನು ಎಂದು ಇಬ್ಬರೂ ಪೈಪೋಟಿಗೆ ಬಿದ್ದರು. ಕೊನೆಗೆ ಚಿರಂಜೀವಿ ಸರ್ಜಾ ನಾನೇ ವಿಲನ್‌ ಧ್ರುವ ಹೀರೊ ಆಗ್ತಾನೆ ಎಂದು ಮಾತಿಗೆ ಕೊನೆ ಹಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌