ಆ್ಯಪ್ನಗರ

ಹಳ್ಳಿ ದತ್ತು ಪಡೆದ ನೀನಾಸಂ ಸತೀಶ್‌

ನೀನಾಸಂ ಸತೀಶ್‌ ಹಳ್ಳಿಯೊಂದನ್ನು ಮಾದರಿ ಗ್ರಾಮವನ್ನಾಗಿಸುವ ಉದ್ದೇಶದಿಂದ ಹಳ್ಳಿಯೊಂದನ್ನು ದತ್ತು ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಎಂಬ ಹಳ್ಳಿ ದತ್ತು ಪಡೆದು, ಅದರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.

Vijaya Karnataka 18 Jun 2018, 11:34 am
ನೀನಾಸಂ ಸತೀಶ್‌ ಹಳ್ಳಿಯೊಂದನ್ನು ಮಾದರಿ ಗ್ರಾಮವನ್ನಾಗಿಸುವ ಉದ್ದೇಶದಿಂದ ಹಳ್ಳಿಯೊಂದನ್ನು ದತ್ತು ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಎಂಬ ಹಳ್ಳಿ ದತ್ತು ಪಡೆದು, ಅದರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.
Vijaya Karnataka Web neenasam-satish


'ನಾನು ಹಳ್ಳಿಯಿಂದ ಬಂದವನು. ಅಲ್ಲಿಗೆ ನನ್ನ ಕೈಲಾದಷ್ಟು ಕೆಲಸ ಮಾಡಬೇಕು ಎಂಬ ಕನಸಿತ್ತು. ಹಾಗಾಗಿ ಹಲವಾರು ಹಳ್ಳಿಗಳನ್ನು ಸುತ್ತಿದೆ. ಹುಲ್ಲೆಗಾಲ ಗ್ರಾಮ ಅನೇಕ ಸಮಸ್ಯೆಗಳಿಂದ ಕೂಡಿತ್ತು. ದತ್ತು ಪಡೆದಿದ್ದೇನೆ. ನಮ್ಮ ಟೀಮ್‌ನ ನೂರಾರು ಸದಸ್ಯರು ಸೇರಿಕೊಂಡು ಈ ಹಳ್ಳಿಯನ್ನು ಮಾದರಿ ಗ್ರಾಮ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ' ಎನ್ನುತ್ತಾರೆ ಸತೀಶ್‌.

'ಆ ಗ್ರಾಮಸ್ಥರು ಸಂಪೂರ್ಣವಾಗಿ ಸಪೋರ್ಟ್‌ ಮಾಡುತ್ತಿದ್ದಾರೆ. ಶಿಕ್ಷಣ, ಆರ್ಥಿಕ ಸಮಸ್ಯೆ, ಆರೋಗ್ಯ, ಕುಡಿಯುವ ನೀರಿನಂತಹ ಮೂಲಭೂತ ಸೌಕರ‍್ಯಗಳನ್ನು ಮೊದಲ ಕೊಡಬೇಕು. ಸರ್ಕಾರಿ ಶಾಲೆಗೆ ಬೇಕಾದ ಸೌಲಭ್ಯ ಒದಗಿವುದು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶದಲ್ಲಿದೆ. ಹಳ್ಳಿ ಬಿಟ್ಟು ಪಟ್ಟಣ ಸೇರಿರುವ ಯುವಕರು ತಮ್ಮ ಪೋಷಕರನ್ನು ಒಬ್ಬಂಟಿಯಾಗಿಸಿದ್ದಾರೆ. ಪೋಷಕರ ಮುಖದಲ್ಲಿ ಖುಷಿ ನೋಡುವುದೇ ನಮ್ಮ ಉದ್ದೇಶವಾಗಿದೆ' ಎನ್ನುವುದು ಸತೀಶ್‌ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌