ಆ್ಯಪ್ನಗರ

ಕೇಂದ್ರ ಸಚಿವರಿಂದ ಸಾವಿತ್ರಿಬಾಯಿ ಪುಲೆ ಟ್ರೇಲರ್‌ ಬಿಡುಗಡೆ

ತಾರಾ ಮುಖ್ಯ ಭೂಮಿಕೆಯಲ್ಲಿರುವ ಸಾವಿತ್ರಿಬಾಯಿ ಫುಲೆ ಚಿತ್ರದ ಟ್ರೇಲರ್‌ನ್ನು ಇತ್ತಿಚೆಗೆ ಕೇಂದ್ರ ಸಚಿವ ಅನಂತ್‌ಕುಮಾರ್‌ ಬಿಡುಗಡೆ ಮಾಡಿದ್ದಾರೆ.

Vijaya Karnataka 3 Aug 2018, 12:23 pm


ಭಾರತದ ಮೊಟ್ಟಮೊದಲ ಶಿಕ್ಷಕಿ , ದಮನಿತರ ಮೊದಲ ಧ್ವನಿ ಎಂದೇ ಖ್ಯಾತರಾಗಿದ್ದ ಸಾವಿತ್ರಿಬಾಯಿಫುಲೆ ಅವರ ಜೀವನವನ್ನು ಆಧರಿಸಿ ಕನ್ನಡದಲ್ಲಿ ಸಿನಿಮಾ ಬರುತ್ತಿದ್ದು, ಅದರ ಟ್ರೇಲರ್‌ನ್ನು ಕೇಂದ್ರ ಸಚಿವ ಅನಂತ್‌ಕುಮಾರ್‌ ಬಿಡುಗಡೆ ಮಾಡಿದರು.
Vijaya Karnataka Web 1


ನಟಿ ತಾರಾ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾವನ್ನು ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ವಿಶಾಲ್‌ ರಾಜ್‌ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪೊಸ್ಟರ್‌ಗಳಿಂಗ ಗಮನ ಸೆಳೆಯುತ್ತಿರುವ ಈ ಚಿತ್ರದಲ್ಲಿ ಸುಚೇಂದ್ರಪ್ರಸಾದ್‌ ಸೇರಿದಂತೆ ಬಹು ತಾರಾಗಣವೇ ಇದೆ. ಸರಜೂ ಕಾಟ್ಕರ್‌ ಅವರು ಬರೆದಿರುವ ಕಾದಂಬರಿಯನ್ನು ಆಧರಿಸಿ ಸಾವಿತ್ರಿಬಾಯಿ ಫುಲೆ ಚಿತ್ರವನ್ನು ಮಾಡಲಾಗಿದೆ. ತಾರಾ ನಟನೆಯ ಹೆಬ್ಬೆಟ್‌ ರಾಮಕ್ಕೆ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ, ಜನರ ಮೆಚ್ಚುಗೆ ಪಡೆದಿತ್ತು. ಈಗ ಸಾವಿತ್ರಿಬಾಯಿ ಫುಲೆಯಾಗಿ ಅವರು ತೆರೆ ಮೇಲೆ ಬರುತ್ತಿದ್ದಾರೆ. ಟ್ರೇಲರ್‌ ಬಿಡುಗಡೆ ಮಾಡಿದ, ಕೇಂದ್ರ ಸಚಿವ ಅನಂತ್‌ಕುಮಾರ್‌ , ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೇನೆ, ತಂಡಕ್ಕೆ ಯಶಸ್ಸು ಸಿಗಲಿ ಎಂದರು.

ಇದೇ ಸಮಯದಲ್ಲಿ ಸಂಸದರಾದ ಸುರೇಶ್‌ ಅಂಗಡಿ, ಪ್ರಹ್ಲಾದ್‌ ಜೋಷಿ ನಿರ್ಮಾಪಕ ಬಸವರಾಜ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌