ಆ್ಯಪ್ನಗರ

'ಮಟಾಶ್' ಮಾಡಲು ಹೊರಟ ಎಸ್ ಡಿ ಅರವಿಂದ್

ಸಾಕಷ್ಟು ಗ್ಯಾಪ್ ಬಳಿಕ 'ಜುಗಾರಿ' ಖ್ಯಾತಿಯ ನಿರ್ದೇಶಕ ಎಸ್ ಡಿ ಅರವಿಂದ್ ವಾಪಸ್ ಆಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ 'ಲಾಸ್ಟ್ ಬಸ್' ಬಳಿಕ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದು ಚಿತ್ರಕ್ಕೆ 'ಮಟಾಶ್' ಎಂದು ಹೆಸರಿಟ್ಟಿದ್ದಾರೆ.

Vijaya Karnataka 19 Mar 2018, 11:49 am
ಸಾಕಷ್ಟು ಗ್ಯಾಪ್ ಬಳಿಕ 'ಜುಗಾರಿ' ಖ್ಯಾತಿಯ ನಿರ್ದೇಶಕ ಎಸ್ ಡಿ ಅರವಿಂದ್ ವಾಪಸ್ ಆಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ 'ಲಾಸ್ಟ್ ಬಸ್' ಬಳಿಕ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದು ಚಿತ್ರಕ್ಕೆ 'ಮಟಾಶ್' ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ಪೋಸ್ಟರ್ ಯುಗಾದಿ ಹಬ್ಬದ ದಿನ ಬಿಡುಗಡೆಯಾಗಿದೆ.
Vijaya Karnataka Web sd arvindas latest directorial venture mataash
'ಮಟಾಶ್' ಮಾಡಲು ಹೊರಟ ಎಸ್ ಡಿ ಅರವಿಂದ್


ಈ ಸಲ ಅವರು ನೈಜಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ನೋಟು ಅಪಮೌಲ್ಯೀಕರಣವೇ ಮಟಾಶ್ ಚಿತ್ರದ ಕಥಾವಸ್ತು. ನೋಟು ಅಪಮೌಲ್ಯೀಕರಣದ ಬಳಿಕ ಏನೆಲ್ಲಾ ಬೆಳವಣಿಗೆಗಳಾಯಿತು, ಜನ ಹೇಗೆಲ್ಲ ಪ್ರತಿಕ್ರಿಯಿಸಿದರು ಎಂಬ ವಿಚಾರಗಳನ್ನು ಇಟ್ಟುಕೊಂಡು ಅವರು ಕಥೆ ಹೆಣೆದಿದ್ದಾರೆ.

'2016ರ ಅಂತಿಮ 50 ದಿನಗಳಲ್ಲಿ ನಡೆದ ಸತ್ಯ ಘಟನೆಗಳ ಆಧಾರಿತ ಕಾಲ್ಪನಿಕ' ಚಿತ್ರ ಎಂದಿದ್ದಾರೆ ಅರವಿಂದ್. ಈ ಬಾರಿಯೂ ಹೊಸ ಪ್ರತಿಭೆಗಳಿಗೆ ಮಣೆ ಹಾಕಿದ್ದಾರೆ. ಲಾಸ್ಟ್ ಬಸ್‌ನಲ್ಲಿದ್ದ ಸಮರ್ಥ್ ನರಸಿಂಹರಾಜು, ಗಣೇಶ್, ರಾಘವೇಂದ್ರ ರಾಮಕೊಪ್ಪ, ಅಮೋಘ ಸೇರಿದಂತೆ ಹಲವರು ಇಲ್ಲೂ ಅಭಿನಯಿಸಲಿದ್ದಾರೆ. ಒಟ್ಟು 40 ದಿನಗಳ ಕಾಲ ಬೆಂಗಳೂರು, ಸಕಲೇಶಪುರ, ಬಿಜಾಪುರ, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

ಈ ಚಿತ್ರಕ್ಕೆ ಸತೀಶ್ ಪಾಠಕ, ಗಿರೀಶ್ ಪಟೇಲ್, ಚಂದ್ರಶೇಖರ ಮಣೂರ ಹಾಗೂ ಎಸ್ ಡಿ ಅರವಿಂದ್ ನಿರ್ಮಾಪಕರು. 'ಮಾಡ್ತಾ ಇರ್ತೀವಿ ನೋಡ್ತಾ ಇರಿ' ಎಂಬುದು ಚಿತ್ರದ ಅಡಿಬರಹ. ಹಾರರ್, ಥ್ರಿಲ್ಲರ್ ಅಂಶಗಳಿಂದ ಲಾಸ್ಟ್ ಬಸ್‌ ಗಮನಸೆಳೆದಿತ್ತು. ಈ ಸಲ ನೋಟು ಅಪಮೌಲ್ಯೀಕರಣದಂತಹ ವಸ್ತು ಇಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಗಮನಸೆಳೆದಿದ್ದಾರೆ ಅರವಿಂದ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌