ಆ್ಯಪ್ನಗರ

ಸೀತಾರಾಮ ಕಲ್ಯಾಣದಲ್ಲಿವೆ ಹಲವು ವಿಶೇಷತೆಗಳು

ಸೀತಾರಾಮ ಕಲ್ಯಾಣದಲ್ಲಿ ಬಹುತಾರಾಬಳಗವೇ ಮೇಳೈಸಿದೆ. ಸೌತ್ ಇಂಡಿಯಾದ ಘಟಾನುಘಟಿ ತಾರೆಗಳಾದ ರವಿಶಂಕರ್, ಶರತ್ ಕುಮಾರ್, ಮಧು ಹಾಗೂ ಬಾಲಿವುಡ್‌ನ ಭಾಗ್ಯಶ್ರೀ, ಸಂಜಯ್ ಕಪೂರ್, ಆದಿತ್ಯಾ ಮೆನನ್ ನಟಿಸಿದ್ದಾರೆ. ಕನ್ನಡದ ಗಿರಿಜಾ ಲೋಕೇಶ್, ಚಿಕ್ಕಣ್ಣ ಮುಂತಾದವರಿದ್ದಾರೆ.

Vijaya Karnataka Web 24 Jan 2019, 3:23 pm
ನಾಳೆ, ಜನವರಿ 25ರಂದು ಸೀತಾರಾಮ ಕಲ್ಯಾಣ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಬಹಳಷ್ಟು ವಿಶೇಷತೆಗಳಿವೆ. ದೊಡ್ಡ ಬಜೆಟ್ ಬಹು ತಾರಾಬಳಗದ ಈ ಚಿತ್ರವು ಕರ್ನಾಟಕವನ್ನೂ ಸೇರಿ 400ಕ್ಕಿಂತಲೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಈ ಚಿತ್ರಕ್ಕೆ ನಾಯಕರು. ನಾಯಕಿ ಸ್ಯಾಂಡಲ್‌ವುಡ್ ಲಕ್ಕೀ ಹಿರೋಯಿನ್ ರಚಿತಾ ರಾಮ್.
Vijaya Karnataka Web seetharam-kalyana2


ನಿಖಿಲ್ ಕುಮಾರಸ್ವಾಮಿ ಸೀತಾರಾಮ ಕಲ್ಯಾಣದಲ್ಲಿ ನಾಯಕರಾಗುವುದಕ್ಕೂ ಮೊದಲು ಜಾಗ್ವಾರ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅವರ ಚೊಚ್ಚಲು ಸಿನಿಮಾ ಜಾಗ್ವಾರ್ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಸಾಕಷ್ಟು ಸದ್ದು ಸುದ್ದಿ ಮಾಡಿದ್ದ ಜಾಗ್ವಾರ್ ನಂತರ ನಿಖಿಲ್ ಮುನಿರತ್ನ ನಿರ್ಮಾಣದ ಬಹುಕೋಟಿ ಬಜೆಟ್ ಹಾಗೂ ದೊಡ್ಡ ತಾರಾಬಳಗದ 'ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಅಭಿನಯಿಸಿರುವ ನಿಖಿಲ್ ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಯಿಟ್ಟಿದ್ದಾರೆ. ಕಾರಣ, ಈ ಚಿತ್ರ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಹಾಗೂ ಸಾಹಸ ದೃಶ್ಯಗಳ ಸಂಗಮವಾಗಿದೆ.

ಸೌತ್ ಇಂಡಿಯಾದ ಖ್ಯಾತ ಫೈಟ್ ಮಾಸ್ಟರ್ಸ್ ರಾಮ್ ಲಕ್ಷ್ಮಣ್ ಸೀತಾರಾಮ ಕಲ್ಯಾಣದ ಸಾಹಸ ನಿರ್ದೇಶಕರು. ಇದು ಸ್ಯಾಂಡಲ್‌ವುಡ್ ಫೈಟ್ ಪ್ರಿಯರ ನಿರೀಕ್ಷೆಯನ್ನು ಹೆಚ್ಚಿಸಿರುವ ಅಂಶ. ಜೊತೆಗೆ, ಬಾಲಿವುಡ್ ಚಿತ್ರ ಪದ್ಮಾವತ್ ಟೀಮ್ ಸೀತಾರಾಮ ಕಲ್ಯಾಣ ಚಿತ್ರದ ಕಲರಿಸ್ಟ್‌ ಆಗಿರುವುದು ಸಿನಿಮಾ ಕಲರ್‌ಫುಲ್ ಕ್ವಾಲಿಟಿಗೆ ಪೂರಕವಾಗಿದೆ. ಜೊತೆಗೆ, ಸ್ವಾಮಿ ಜೆ ಕ್ಯಾಮರಾ ಕೈಚಳಕ ಕೂಡ ಚಿತ್ರದ ನಿರೀಕ್ಷೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗಣೇಶ್ ಸಂಕಲನದಲ್ಲಿ ಅರಳಿರುವ ಸೀತಾಕಲ್ಯಾಣ ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಿದೆ ಎಂಬುದು ಚಿತ್ರತಂಡದ ಮಾತು.

ಈ ಎಲ್ಲ ಅಂಶಗಳ ಜೊತೆಗೆ, ಸೀತಾರಾಮ ಕಲ್ಯಾಣದಲ್ಲಿ ಬಹುತಾರಾಬಳಗವೇ ಮೇಳೈಸಿದೆ. ಸೌತ್ ಇಂಡಿಯಾದ ಘಟಾನುಘಟಿ ತಾರೆಗಳಾದ ರವಿಶಂಕರ್, ಶರತ್ ಕುಮಾರ್, ಮಧು ಹಾಗೂ ಬಾಲಿವುಡ್‌ನ ಭಾಗ್ಯಶ್ರೀ, ಸಂಜಯ್ ಕಪೂರ್, ಆದಿತ್ಯಾ ಮೆನನ್ ನಟಿಸಿದ್ದಾರೆ. ಜೊತೆಗೆ, ಕನ್ನಡದ ಗಿರಿಜಾ ಲೋಕೇಶ್, ಚಿಕ್ಕಣ್ಣ ಮುಂತಾದವರಿದ್ದಾರೆ. ಬೆಂಗಳೂರು, ಮೈಸೂರು, ಊಟಿ, ಬಳ್ಳಾರಿ ಹಾಗೂ ಇತರ ಕಡೆಗಳಲ್ಲಿ ಶೂಟಿಂಗ್ ನಡೆದಿರುವ ಈ ಚಿತ್ರಕ್ಕೆ ಸುಮಾರು 150 ಟೆಕ್ನಿಷಿಯನ್ಸ್ ಹಾಗೂ 200ಕ್ಕೂ ಹೆಚ್ಚು ಸಹಕಲಾವಿದರು ಪಾಲ್ಗೊಂಡಿದ್ದಾರೆ. ಬರೋಬ್ಬರಿ 130 ದಿನಗಳ ಕಾಲ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಶೂಟಿಂಗ್ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌