ಆ್ಯಪ್ನಗರ

ಸೀರಿಯಲ್‌ ಕತೆಗಳ ಜೋಶ್‌ನಲ್ಲಿ 'ಜೇಕಬ್‌'

'ಜೇಕಬ್‌' ಅಂದಾಕ್ಷಣ ಏನಿದರ ಅರ್ಥ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದು ಈ ಸಿನಿಮಾದಲ್ಲಿರುವ ಐದು ಪಾತ್ರಗಳ ಹೆಸರಿನ ಮೊದಲ ಅಕ್ಷರಗಳ ಸಂಯೋಜನೆ. ಸಿನಿಮಾ ನೋಡಿದ ನಂತರ 'ಜೇಕಬ್‌' ಎಂಬುದರ ಸಂಪೂರ್ಣ ಅರ್ಥ ಮನವರಿಕೆ ಆಗುತ್ತದೆ ಎನ್ನುತ್ತಾರೆ ನಿರ್ದೇಶಕ.

Vijaya Karnataka 8 Feb 2019, 7:48 am
ಇದು ಉತ್ತರ, ನಿರುತ್ತರಗಳ ನಡುವಿನ ಜುಗಲ್‌ಬಂದಿ. ಒಂದೊಂದು ಪ್ರಶ್ನೆಯಲ್ಲಿಯೇ ಒಂದೊಂದು ಉತ್ತರ ಹಾಗೂ ಆ ಉತ್ತರದ ಕೊನೆಯಂಚಿನಲ್ಲಿ ಮತ್ತೊಂದು ಪ್ರಶ್ನೆಯ ಮೊಳಕೆ... ಹೀಗೆ ಪ್ರಶ್ನೆ ಉತ್ತರಗಳ ಜತೆ ಆಟವಾಡುತ್ತ 'ಜೇಕಬ್‌' ಹೆಸರಿನ ಸಿನಿಮಾವನ್ನು ನಿರ್ದೇಶಿಸಲು ಹೊರಟಿದ್ದಾರೆ ಹನುಮಂತ ಜಿ.ಎನ್‌.
Vijaya Karnataka Web Jacob


'ಜೇಕಬ್‌' ಅಂದಾಕ್ಷಣ ಏನಿದರ ಅರ್ಥ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದು ಈ ಸಿನಿಮಾದಲ್ಲಿರುವ ಐದು ಪಾತ್ರಗಳ ಹೆಸರಿನ ಮೊದಲ ಅಕ್ಷರಗಳ ಸಂಯೋಜನೆ. ಸಿನಿಮಾ ನೋಡಿದ ನಂತರ 'ಜೇಕಬ್‌' ಎಂಬುದರ ಸಂಪೂರ್ಣ ಅರ್ಥ ಮನವರಿಕೆ ಆಗುತ್ತದೆ ಎನ್ನುತ್ತಾರೆ ನಿರ್ದೇಶಕ.

''ಇದು ಹೀರೊ ಕೇಂದ್ರಿತ ಕತೆಯಲ್ಲ. ಕತೆಯೇ ಇಲ್ಲಿ ಹೀರೊ. ಪ್ರತಿ ಪಾತ್ರಗಳೂ ಪ್ರಮುಖ. ಒಂದೊಂದು ಕ್ಯಾರೆಕ್ಟರ್‌ ಒಂದೊಂದು ಕತೆಯನ್ನು ಹೇಳುತ್ತದೆ. ಕ್ರೈಮ್‌ ಮತ್ತು ಸಸ್ಪೆನ್ಸ್‌ ಎಳೆಯಿರುವ ಕತೆ ಇಲ್ಲಿದೆ. ಸೀರಿಯಲ್‌ ಕಿಲ್ಲರ್‌ನ ಸುತ್ತಮುತ್ತ ಸುಳಿಯುವ ಸ್ಟೋರಿ. ಒಂದೊಂದು ಕೊಲೆಯಾದಾಗ ಒಂದೊಂದು ಕತೆ ತೆರೆದುಕೊಳ್ಳುತ್ತದೆ. ಹೀಗಾಗಿ ಇದು ಸೀರಿಯಲ್‌ ಕಿಲ್ಲರ್‌ ಸ್ಟೋರಿ ಅನ್ನುವುದಕ್ಕಿಂತ ಸೀರಿಯಲ್‌ ಕತೆಗಳ ಸಿನಿಮಾ ಅಂದರೆ ಹೆಚ್ಚು ಸಮಂಜಸ'' ಎಂಬ ವಿವರ ಡೈರೆಕ್ಟರ್‌ ಅವರದ್ದು.

ಇನ್ನು ಮುಖ್ಯ ಪಾತ್ರಗಳಲ್ಲಿ ದಿನೇಶ ಶೆಟ್ಟಿ, ಅಶ್ವಿನಿ, ಸೂರಜ್‌ ಪವಾರ್‌, ನಾಗರಾಜ್‌ ಬೈಂದೂರ, ರಾಜೇಶ್ವರಿ, ರಾಮಚಂದ್ರ ಹೆಗಡೆ ಅಭಿನಯಿಸಿದ್ದಾರೆ. ಸಿನಿಮಾಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ಹನುಮಂತ ಅವರೇ ಬರೆದಿದ್ದಾರೆ. ಇವರು ಗದಗ ಜಿಲ್ಲೆಯ ಮುಂಡರಗಿಯವರು. ಹೀಗಾಗಿ ಮತ್ತೊಂದು ಉತ್ತರ ಕರ್ನಾಟಕದ ಪ್ರತಿಭೆ ನಿರ್ದೇಶನಕ್ಕೆ ಅಡಿಯಿಟ್ಟಂತಾಗಿದೆ.

ಗೆಳೆಯರ ಬಳಗವೆಲ್ಲ ಸೇರಿಕೊಂಡು ಶ್ರೀ ದುರ್ಗಾ ಪ್ರೊಡಕ್ಷನ್‌ ಹೆಸರಿನಡಿ ಸಿನಿಮಾ ನಿರ್ಮಿಸುತ್ತಿದ್ದಾರೆ. ನಂದು ಜಬೇಜ್‌ ಸಂಗೀತ ನಿರ್ದೇಶನ ಮಾಡಿದ್ದು, ಮಂಜುನಾಥ ಹೆಗಡೆ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಅಂದಹಾಗೆ, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಈ ಚಿತ್ರದ ಮುಹೂರ್ತ ಆಗಿದ್ದು ಐವತ್ತು ದಿನಗಳ ಕಾಲ ಶೂಟಿಂಗ್‌ ಶೆಡ್ಯೂಲ್‌ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌