ಆ್ಯಪ್ನಗರ

ಶಂಕರ್‌ ನಾಗ್ 'ಒಂದಾನೊಂದು ಕಾಲದಲ್ಲಿ' ನಿರ್ಮಾಪಕ ಲಕ್ಷ್ಮೀಪತಿ ನಿಧನ

ಡಾ ರಾಜ್ ಕುಮಾರ್ ಅಭಿನಯಿಸಿದ್ದ 'ದೇವರ ಮಕ್ಕಳು' ಚಿತ್ರವನ್ನು ಸಹ ಈ ಲಕ್ಷ್ಮಿಪತಿ ಅವರು ನಿರ್ಮಾಣ ಮಾಡಿದ್ದರು. ಅಷ್ಟೆ ಅಲ್ಲ, ಕರಾಟೆ ಕಿಂಗ್ ಶಂಕರ್ ನಾಗ್ ಅವರು ನಾಯಕರಾಗಿ ಅಭಿನಯಿಸಿದ್ದ ಚೊಚ್ಚಲ ಚಿತ್ರ 'ಒಂದಾನೊಂದು ಕಾಲದಲ್ಲಿ' ಸಹ ಇವರೇ ನಿರ್ಮಾಣ ಮಾಡಿದ್ದರು.

Vijaya Karnataka Web 18 May 2019, 3:48 pm
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ಮಾಪಕ ಜಿಎನ್ ಲಕ್ಷ್ಮಿಪತಿ ಅವರ ವಿಧಿವಶರಾಗಿದ್ದಾರೆ. 104 ವರ್ಷದ ಲಕ್ಷ್ಮಿಪತಿ ಅವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ. ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನ ಲಕ್ಷ್ಮಿಪತಿ ಅವರು ಅಗಲಿದ್ದಾರೆ. ಈ ಹಿರಿಯರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಹಲವರು ಸಂತಾಪ ಸೂಚಿಸಿದ್ದಾರೆ.
Vijaya Karnataka Web lakshmipati1803


ಡಾ ರಾಜ್ ಕುಮಾರ್ ಅಭಿನಯಿಸಿದ್ದ 'ದೇವರ ಮಕ್ಕಳು' ಚಿತ್ರವನ್ನು ಸಹ ಈ ಲಕ್ಷ್ಮಿಪತಿ ಅವರು ನಿರ್ಮಾಣ ಮಾಡಿದ್ದರು. ಅಷ್ಟೆ ಅಲ್ಲ, ಕರಾಟೆ ಕಿಂಗ್ ಶಂಕರ್ ನಾಗ್ ಅವರು ನಾಯಕರಾಗಿ ಅಭಿನಯಿಸಿದ್ದ ಚೊಚ್ಚಲ ಚಿತ್ರ 'ಒಂದಾನೊಂದು ಕಾಲದಲ್ಲಿ' ಸಹ ಇವರೇ ನಿರ್ಮಾಣ ಮಾಡಿದ್ದರು. ಹೀಗಾಗಿ, ಶಂಕರ್ ನಾಗ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಖ್ಯಾತಿ ಜಿಎನ್ ಲಕ್ಷ್ಮಿಪತಿ ಅವರಿಗೆ ಸಲ್ಲುತ್ತದೆ. ಒಂದಾನೊಂದು ಕಾಲದಲ್ಲಿ ಸಿನಿಮಾವನ್ನು ಗಿರೀಶ್ ಕಾರ್ನಡ್ ನಿರ್ದೇಶನ ಮಾಡಿದ್ದರು.

ಜೊತೆಗೆ, ಕಾಡು, ಚಿತೆಗೂ ಚಿಂತೆ ಮತ್ತು ಉಯ್ಯಾಲೆ ಮುಂತಾದ ಸಿನಿಮಾಗಳನ್ನು ಸಹ ಲಕ್ಷೀಪತಿ ನಿರ್ಮಾಣ ಮಾಡಿದ್ದರು. ಅಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದ ಕೇಂದ್ರ ಭಾಗವೆನಿಸಿಕೊಂಡಿರುವ ಕರ್ನಾಟಕ ವಾಣಿಜ್ಯ ಮಂಡಳಿ ಕಟ್ಟಡ ಕಟ್ಟುವಲ್ಲಿ ಲಕ್ಷ್ಮಿಪತಿ ಅವರ ಶ್ರಮವೂ ಇದೆ. ವಾಣಿಜ್ಯ ಮಂಡಳಿಯಲ್ಲಿ ಮೂರು ವರ್ಷ ಉಪಾಧ್ಯಕ್ಷರಾಗಿ ಸಹ ಅವರು ಕೆಲಸ ಮಾಡಿದ್ದಾರೆ.


ಈ ಬಗ್ಗೆ ನಿರ್ಮಾಪಕ ಉಮೇಶ್ ಬಣಕಾರ್ ಸಂತಾಪ ಸೂಚಿಸಿದ್ದು, ''ಚಿತ್ರರಂಗದ ಪಿತಾಮಹ ಲಕ್ಷ್ಮೀಪತಿ ಅವರ ನಿಧನ ಸಾಕಷ್ಟು ನೋವನ್ನು ಉಂಟು ಮಾಡಿದೆ. ಹಾಗೇನೇ ಚಲನಚಿತ್ರ ವಾಣಿಜ್ಯ ಮಂಡಳಿಯ ನಿವೇಶನವನ್ನು ಚಿತ್ರರಂಗಕ್ಕೆ ದಯಪಾಲಿಸಲು ಸನ್ಮಾನ್ಯ ಎನ್ ವೀರಸ್ವಾಮಿ ಅವರೊಟ್ಟಿಗೆ ಕೈಜೋಡಿಸಿದ್ದ ಮಹಾನ್ ವ್ಯಕ್ತಿ ಇವರು. ಅವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಕೇಳಿಕೊಳ್ಳುತ್ತೇನೆ'' ಎಂದು 'ಫೇಸ್ ಬುಕ್'ನಲ್ಲಿ ಪೋಸ್ಟ್ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌