ಆ್ಯಪ್ನಗರ

ಮೋಡಿ ಮಾಡಲಿದೆ ಶಿವರಾಜ್‌ಕುಮಾರ್-ಶ್ರದ್ಧಾ ಶ್ರೀನಾಥ್ 'ರುಸ್ತುಂ' ಹಾಡು!

ಶಿವರಾಜ್‌ಕುಮಾರ್ ನಟನೆಯ 'ರುಸ್ತುಂ' ಚಿತ್ರವು ಸದ್ಯವೇ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಬಹಳಷ್ಟು ನಿರೀಕ್ಷೆ ಕ್ರಿಯೇಟ್ ಆಗಿದ್ದು, ಕನ್ನಡ ಸಿನಿ ಪ್ರೇಕ್ಷಕರು ಈ ಚಿತ್ರ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಇದೀಗ, ಚಿತ್ರದ ಪ್ರಮೋಶನ್ ಪ್ರಾರಂಭವಾಗಿದ್ದು, ಚಿತ್ರದ ಮೊದಲ ಹಾಡು ಇದೀ ತಿಂಗಳು ಮೇ 14, 2019ರಂದು ಬಿಡುಗಡೆಯಾಗಲಿದೆ.

Vijaya Karnataka Web 13 May 2019, 4:44 pm
ಧನುಷ್-ಸಾಯಿ ಪಲ್ಲವಿ ಜೋಡಿಯ ತಮಿಳು ಚಿತ್ರ 'ರೌಡಿ ಬೇಬಿ' ಈ ವರ್ಷದ ಸೂಪರ್ ಹಿಟ್ ಹಾಡು. ರೌಡಿ ಬೇಬಿ ಹಾಡು 'ಯೂಟ್ಯೂಬ್'ನಲ್ಲಿ ಬರೋಬ್ಬರು 458 ಮಿಲಿಯನ್ ಹಿಟ್ಸ್ ಪಡೆದಿದೆ. ಇದನ್ನು ತುಂಬಾ ದೊಡ್ಡ ಮಟ್ಟದ ಸಕ್ಸಸ್ ಎನ್ನಲೇಬೇಕು. ಈ ಹಾಡಿನಲ್ಲಿ ನಟ ಧನುಷ್ ಹಾಗು ನಟಿ ಸಾಯಿ ಪಲ್ಲವಿ ಇಬ್ಬರೂ ಅದೆಷ್ಟು ಚೆನ್ನಾಗಿ ಡಾನ್ಸ್ ಮಾಡಿದ್ದಾರೆ ಎಂದರೆ, ಅವರಿಬ್ಬರೂ ಪರಸ್ಪರ ಕಾಂಪಿಟೀಶನ್‌ನಲ್ಲಿ ಸ್ಟೆಪ್ ಹಾಕಿದ್ದಾರೆ ಎನ್ನಬಹುದು.
Vijaya Karnataka Web rustum1305


ಇದೀಗ, ರೌಡಿ ಬೇಬಿ..' ಹಾಡಿನ ಮಾದರಿಯಲ್ಲೇ ಕನ್ನಡದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ನಟಿ ಶ್ರದ್ಧಾ ಶ್ರೀನಾಥ್ ಜೋಡಿಯ 'ಪೊಲೀಸ್ ಬೇಬಿ..' ಎಂಬ ಹಾಡು ಬರುತ್ತಿದೆ. ಈ ಹಾಡು ಶಿವರಾಜ್ ಕುಮಾರ್ ನಟನೆಯ 'ರುಸ್ತುಂ' ಸಿನಿಮಾದ್ದಾಗಿದೆ. 'ಪೊಲೀಸ್ ಬೇಬಿ..' ಹಾಡು ಮೇ 14 ರಂದು ಬಿಡುಗಡೆಯಾಗಲಿದೆ. ಸದ್ಯಕ್ಕೆ, ಈ ಹಾಡಿನ ಸಣ್ಣ ಬೀಟ್ ಹೊರಬಂದಿದೆ. ಅದರ ಟ್ಯೂನ್ ಕೇಳಿದರೆ 'ರೌಡಿ ಬೇಬಿ' ಹಾಡು ನೆನಪಾಗುತ್ತದೆ. 'ಪೊಲೀಸ್ ಬೇಬಿ..' ಹಾಡು ರೌಡಿ ಬೇಬಿ ಶೈಲಿಯಲ್ಲಿಯೇ ಇರಲಿದೆ ಎನ್ನಲಾಗಿದೆ. ಈ ಹಾಡಿಗೆ ಅನೂಪ್ ಸೀಳೀನ್ ಸಂಗೀತ ನೀಡಿದ್ದಾರೆ.

ಅಂದಹಾಗೆ, ಶಿವರಾಜ್‌ಕುಮಾರ್ ನಟನೆಯ 'ರುಸ್ತುಂ' ಚಿತ್ರವು ಸದ್ಯವೇ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಬಹಳಷ್ಟು ನಿರೀಕ್ಷೆ ಕ್ರಿಯೇಟ್ ಆಗಿದ್ದು, ಕನ್ನಡ ಸಿನಿ ಪ್ರೇಕ್ಷಕರು ಈ ಚಿತ್ರ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಇದೀಗ, ಚಿತ್ರದ ಪ್ರಮೋಶನ್ ಪ್ರಾರಂಭವಾಗಿದ್ದು, ಚಿತ್ರದ ಮೊದಲ ಹಾಡು ಇದೀ ತಿಂಗಳು ಮೇ 14, 2019ರಂದು ಬಿಡುಗಡೆಯಾಗಲಿದೆ. ಈ 'ರುಸ್ತುಂ' ಚಿತ್ರದ ಮೂಲಕ ಸಾಹಸ ನಿರ್ದೇಶಕ ರವಿವರ್ಮ ಅವರು ಮೊದಲ ಬಾರಿಗೆ 'ಸಿನಿಮಾ' ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಜಯಣ್ಣ ಬಂಡವಾಳ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌