ಆ್ಯಪ್ನಗರ

"ಮೊದಲು ನಾವು ಭಾರತೀಯರು, ಆಮೇಲೆ ಮಾತೃಭಾಷೆ" ; ಸೈರಾ ಸಿನಿಮಾ ಇವೆಂಟ್‌ನಲ್ಲಿ ನಟ ಶಿವಣ್ಣ ಹೇಳಿಕೆ

'ಸೈರಾ ನರಸಿಂಹ ರೆಡ್ಡಿ' ತೆಲುಗು ಚಿತ್ರವಾದರೂ ಕೂಡ ಕನ್ನಡದವರ ಪಾಲಿಗೆ ಇದು ವಿಶೇಷ. ಏಕೆಂದರೆ ಮೆಗಾಸ್ಟಾರ್ ಜೊತೆಗೆ ಕಿಚ್ಚ ಸುದೀಪ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶಿವಣ್ಣ ಈ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಕೇಳಿ

Vijaya Karnataka Web 30 Sep 2019, 10:32 am
'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ನಟ ಶಿವರಾಜ್‌ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಈ ಸಮಯದಲ್ಲಿ ಅವರು ಚಿರಂಜೀವಿ ಕುಟುಂಬ ಮತ್ತು ಸೈರಾ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
Vijaya Karnataka Web shivanna syra event


"ಬಹಳ ಖುಷಿಯಾಯ್ತು. ಚಿರಂಜೀವಿ ಕುಟುಂಬದ ಕಡೆಯಿಂದ ರಾಮ್‌ಚರಣ್ ಕಾಲ್ ಮಾಡ್ತಾರೆ ನಿಮಗೆ ಎಂದರು. ಇದು ನನ್ನ ಕುಟುಂಬದ ಪಂಕ್ಷನ್. ಯಾರೂ ಕರೆಯೋದು ಬೇಡ, ನಾನು ಬರ್ತೀನಿ ಎಂದೆ. ಅಪ್ಪಾಜಿ ಜೊತೆ ಚಿರಂಜೀವಿ ಅವರು ಯಾವಾಗಲೂ ಇದ್ದರು, ನಮ್ಮ ಮನೆಯ ಎಲ್ಲ ಸಮಾರಂಭಕ್ಕೂ ಬರ್ತಾರೆ. ಅಪ್ಪಾಜಿ ಅವರು ಚಿರಂಜೀವಿ ನನ್ನ ಇನ್ನೊಬ್ಬ ಮಗ ಅಂತ ಹೇಳ್ತಿದ್ದರು. ಹೀಗಾಗಿ ಅವರು ನನ್ನ ದೊಡ್ಡಣ್ಣ. ಇಲ್ಲಿ ಬಂದಮೇಲೆ 'ಸೈರಾ ನರಸಿಂಹ ರೆಡ್ಡಿ' ಜೋಶ್ ಏನು ಎನ್ನೋದು ಗೊತ್ತಾಯ್ತು. ನಾನು ಅಕ್ಟೋಬರ್ 2ಕ್ಕೆ ಒರಾಯನ್ ಮಾಲ್‌ನಲ್ಲಿ ಸಿನಿಮಾ ನೋಡ್ತೀನಿ. ರಾಮ್‌ಚರಣ್ ತೇಜ ತುಂಬಾನೇ ಹ್ಯಾಂಡ್‌ಸಮ್ ಹೀರೋ, ಅವರ ಫ್ಯಾಮಿಲಿಯವರೆಲ್ಲರೂ ತುಂಬಾ ಹ್ಯಾಂಡ್‌ಸಮ್ ಆಗಿದ್ದಾರೆ. ಪವನ್ ಕಲ್ಯಾಣ್ ದೊಡ್ಡ ಅಭಿಮಾನಿ ನಾನು. ಏಕೆಂದರೆ ನನಗೆ ಅಷ್ಟು ಇಷ್ಟ ಅವರ ಕಂಡರೆ. ಈಗಂತೂ ಅವರ ಕುಟುಂಬದಲ್ಲಿ ಎಲ್ಲರೂ ಇಷ್ಟ ಆಗ್ತಾರೆ. ಇದನ್ನು ಸಮಾರಂಭವೊಂದರಲ್ಲಿ ಚಿರಂಜೀವಿ ಅವರಿಗೆ ಹೇಳಿದ್ದೆ" ಎಂದು ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಟಿಕೆಟ್ ರೇಟ್ ; ಹಾಗಾದ್ರೆ ಎಷ್ಟು ರೂಪಾಯಿ?

"ತಮನ್ನಾ ಕೇವಲ ಸುಂದರವಾಗಿಲ್ಲ, ಅವರೊಬ್ಬ ಅಧ್ಬುತ ನಟಿ, ಅವರ ಹಾವಭಾವ ತುಂಬ ಚೆನ್ನಾಗಿರತ್ತೆ. ನಯನತಾರಾ, ಕಿಚ್ಚ ಸುದೀಪ್ ಕೂಡ ಚೆನ್ನಾಗಿ ಮಾತನಾಡುತ್ತಾರೆ. ವಿಜಯ್ ಸೇತುಪತಿ ಫ್ಯಾನ್ ನಾನು. 'ಸೈರಾ ನರಸಿಂಹ ರೆಡ್ಡಿ' ನೋಡೋದಿಕ್ಕೆ ಕಾಯ್ತಾ ಇರ್ತೀನಿ. ಈ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗ್ತಿದೆ, ಕನ್ನಡದಲ್ಲೂ ನೋಡಬಹುದು. ಕನ್ನಡ ಬೇರೆ ಅಲ್ಲ, ತೆಲುಗು, ತಮಿಳು ಬೇರೆ ಅಲ್ಲ, ನಾವೆಲ್ಲರೂ ಒಂದೇ. ಮೊದಲು ನಾವು ಭಾರತೀಯರು, ಆಮೇಲೆ ಮಾತೃಭಾಷೆ" ಎಂದಿದ್ದಾರೆ ಶಿವರಾಜ್‌ಕುಮಾರ್

ಇಂದು ಶಿವಣ್ಣ, ಚಿರಂಜೀವಿ ಮುಖಾಮುಖಿ; ಕಾರಣವೇನು?

"ಚಿರಂಜೀವಿ ಅವರಿಗೆ 60 ವರ್ಷ ಆಗಿದೆ ಅಂತ ಯಾರು ಹೇಳ್ತಾರೆ! ಕಲಾವಿದರಿಗೆ ವಯಸ್ಸು ಅನ್ನೋದೇ ಇರಲ್ಲ, ಅವರು ಇನ್ನಷ್ಟು ಇನ್ನಷ್ಟು ಸಿನಿಮಾ ಮಾಡುವಂತಾಗಬೇಕು, ದೇವರು ಅವರಿಗೆ ಒಳ್ಳೆಯ ಆರೋಗ್ಯ, ಆಯಸ್ಸು ನೀಡಿ, ನಿಜವಾಗಲೂ ಆಯುಷ್ಮಾನ್ ಭವ ಆಗಿರಲಿ" ಎಂದು ಶಿವಣ್ಣ ಚಿರಂಜೀವಿ ಅವರಿಗೆ ಹಾರೈಸಿದ್ದಾರೆ.

"ನಿನ್ನ ಈ ಗೆಲುವನ್ನು ಕಣ್ಣಾರೆ ನೋಡಬೇಕು ಅಂತ ಬಂದೆ..ಸೈರಾ ನರಸಿಂಹ ರೆಡ್ಡಿ" ಎಂದು ಸುದೀಪ್ ಈ ಚಿತ್ರದ ಟ್ರೇಲರ್‌ನಲ್ಲಿ ಹೇಳಿರುವ ಡೈಲಾಗ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿರಂಜೀವಿ ಬ್ರಿಟಿಷರಿಗೆ ಎಚ್ಚರಿಕೆ ನೀಡುವುದರೊಂದಿಗೆ ಟ್ರೇಲರ್ ಮುಕ್ತಾಯವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆಯ ಕಥೆ ಇದು. ಅವುಕು ಪ್ರಾಂತ್ಯದ ರಾಜನಾಗಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಈ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಇತ್ತೀಚೆಗೆ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಮ್‌ ಚರಣ್ತೇಜ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌