ಆ್ಯಪ್ನಗರ

ಶಿವರಾಜ್ ಕುಮಾರ್ ಹೊಸ ಚಿತ್ರ 'ಮೈ ನೇಮ್ ಈಸ್ ಅಂಜಿ'

ಭಜರಂಗಿ, ವಜ್ರಕಾಯ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಈಗ ಮುಂದಿನ ಚಿತ್ರವೂ ಕುತೂಹಲ ಮೂಡಿಸಿದೆ. ಹನುಮಂತನ ಭಕ್ತನಾಗಿರುವ ಹರ್ಷ ಆಂಜನೇಯನ ವಿವಿಧ ನಾಮಧೇಯಗಳನ್ನೇ ತಮ್ಮ ಸಿನಿಮಾಗೆ ಶೀರ್ಷಿಕೆಯಾಗಿ ಬಳಸುತ್ತಾ ಬಂದಿದ್ದಾರೆ.

Vijaya Karnataka Web 5 Mar 2019, 2:36 pm
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಈ ಬಾರಿ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವವರು ಎ ಹರ್ಷ. ಈ ಹಿಂದೆ ಶಿವಣ್ಣನ ಜತೆಗೆ ಭಜರಂಗಿ, ವಜ್ರಕಾಯ ಸಿನಿಮಾಗಳನ್ನು ಮಾಡಿರುವ ಹರ್ಷ ಈ ಸಲ 'ಮೈ ನೇಮ್ ಈಸ್ ಅಂಜಿ' ಚಿತ್ರದ ಮೂಲಕ ಬರುತ್ತಿದ್ದಾರೆ.
Vijaya Karnataka Web shivarajkumar


ಸಾಮಾನ್ಯವಾಗಿ ಶಿವರಾಜ್ ಕುಮಾರ್ ಮತ್ತು ಹರ್ಷ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ನಿರೀಕ್ಷೆಗಳಿರುತ್ತವೆ. ಭಜರಂಗಿ, ವಜ್ರಕಾಯ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಈಗ ಮುಂದಿನ ಚಿತ್ರವೂ ಕುತೂಹಲ ಮೂಡಿಸಿದೆ. ಹನುಮಂತನ ಭಕ್ತನಾಗಿರುವ ಹರ್ಷ ಆಂಜನೇಯನ ವಿವಿಧ ನಾಮಧೇಯಗಳನ್ನೇ ತಮ್ಮ ಸಿನಿಮಾಗೆ ಶೀರ್ಷಿಕೆಯಾಗಿ ಬಳಸುತ್ತಾ ಬಂದಿದ್ದಾರೆ.

ಈ ಸಲವೂ ಆಂಜನೇಯನ ಹೆಸರೇ ಇಟ್ಟಿರುವುದು ವಿಶೇಷ. 2016ರಲ್ಲೇ ಈ ಶೀರ್ಷಿಕೆಯನ್ನು ನೋಂದಾಯಿಸಿದ್ದರಂತೆ ಹರ್ಷ. ಈ ಸಿನಿಮಾವನ್ನು ಜಯಣ್ಣ ಮತ್ತು ಭೋಗೇಂದ್ರ ಅವರು ಜಯಣ್ಣ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.

ಹರ್ಷ ಅವರಿಗೆ ಶಿವಣ್ಣ ಜತೆಗಿನ ಮೂರನೇ ಸಿನಿಮಾ ಇದಾದರೆ, ನಿರ್ಮಾಪರಿಗೆ ನಾಲ್ಕನೇ ಸಿನಿಮಾ. ಈ ಹಿಂದೆ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ನರ್ತನ್ ನಿರ್ದೇಶನದ ಮಫ್ತಿ, ರವಿ ವರ್ಮಾ ಅವರ ರುಸ್ತುಂ ನಿರ್ಮಿಸಿದ್ದಾರೆ. ರುಸ್ತುಂ ಸಿನಿಮಾ ನಿರ್ಮಾಣ ನಂತರದ ಕೆಲಸಗಳಲ್ಲಿ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್‌ನಲ್ಲಿ ಮೈ ನೇಮ್ ಈಸ್ ಅಂಜಿ ಸೆಟ್ಟೇರಲಿದೆ.

ಸದ್ಯಕ್ಕೆ ಪಿ ವಾಸು ನಿರ್ದೇಶನದ ಆನಂದ್ ಸಿನಿಮಾದಲ್ಲಿ ಶಿವಣ್ಣ ತೊಡಗಿಕೊಂಡಿದ್ದಾರೆ. ಇಷ್ಟು ವರ್ಷ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದೀವಿ ಎಂದರೆ ಆ ಎನರ್ಜಿ ನನಗೆ ಬಂದಿರುವುದು ಅಭಿಮಾನಿಗಳಿಂದ ಎನ್ನುತ್ತಾರೆ ಶಿವಣ್ಣ.

ನನ್ನ ದೇಹ ಎಷ್ಟರ ಮಟ್ಟಿಗೆ ಸಹಕರಿಸುತ್ತದೋ ಅಷ್ಟು ಮಾಡುತ್ತೇನೆ. ಅತಿಯಾಗಿ ಮಾಡಕ್ಕೆ ಹೋಗಲ್ಲ. 30 ವರ್ಷದವರ ರೀತಿ ನಾನು ಮಾಡಲಿಕ್ಕೆ ಆಗಲ್ಲ. ಆರೋಗ್ಯಕರ ಸ್ಪರ್ಧೆಯಲ್ಲಿ ನನಗೆ ನಂಬಿಕೆ ಇದೆ ಎನ್ನುವ ಶಿವಣ್ಣ ಇದೀಗ 125ನೇ ಸಿನಿಮಾಗೆ ಅಣಿಯಾಗುತ್ತಿದ್ದಾರೆ. ಆ ಸಿನಿಮಾ ಹೆಸರು ಭೈರತಿ ರಣಗಲ್.

ಈ ಸಿನಿಮಾ ಮೂಲಕ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗಿ ಬದಲಾಗುತ್ತಿದ್ದಾರೆ. ತಮ್ಮದೇ ಸ್ವಂತ ಲಾಂಛನ ಶ್ರೀಮುತ್ತು ಪ್ರೊಡಕ್ಷನ್ಸ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಈಗಾಗಲೆ ನನ್ನ ಮಗಳು ನಿವೇದಿತಾ ಟಿವಿ ಧಾರಾವಾಹಿ ಮತ್ತು ವೆಬ್ ಸೀರೀಸ್ ಮೂಲಕ ನಿರ್ಮಾಪಕಿಯಾಗಿದ್ದಾರೆ. ಈಗ ಗೀತಾ ನಿರ್ಮಾಪಕಿಯಾಗುತ್ತಿರುವುದು ನನ್ನ ಪಾಲಿನ ವಿಶೇಷ. ನನಗೆ ಅಷ್ಟೆಲ್ಲಾ ಅನುಭವ ಇದ್ದರೂ ಅವರ ಮುಂದೆ ನಾನಿನ್ನೂ ಹೊಸಬನ ತರಹ ಎನ್ನುತ್ತಾರೆ ಶಿವಣ್ಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌