ಆ್ಯಪ್ನಗರ

ಶಿವರಾಜ್ ಕುಮಾರ್ 'ಮುತ್ತಣ್ಣ' ರೀ-ರಿಲೀಸ್

ಕೆಲವು ಸಿನಿಮಾಗಳೇ ಹಾಗೆ ಕಾಲಸರಿದರೂ ಪ್ರೇಕ್ಷಕರು ಮಾತ್ರ ಇನ್ನೂ ಸ್ಮರಿಸುತ್ತಲೇ ಇರುತ್ತಾರೆ. ಆ ರೀತಿಯದ್ದೇ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮುತ್ತಣ್ಣ'. ತೊಂಬತ್ತರ ದಶಕದಲ್ಲಿ ತೆರೆಕಂಡ ಈ ಸಿನಿಮಾ ಇದೀಗ ಹೊಸ ತಂತ್ರಜ್ಞಾನದಲ್ಲಿ ರೀ-ರಿಲೀಸ್ ಆಗುತ್ತಿದೆ.

ಏಜೆನ್ಸೀಸ್ 3 Jul 2017, 7:22 pm
ಕೆಲವು ಸಿನಿಮಾಗಳೇ ಹಾಗೆ ಕಾಲಸರಿದರೂ ಪ್ರೇಕ್ಷಕರು ಮಾತ್ರ ಇನ್ನೂ ಸ್ಮರಿಸುತ್ತಲೇ ಇರುತ್ತಾರೆ. ಆ ರೀತಿಯದ್ದೇ ಸಿನಿಮಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮುತ್ತಣ್ಣ'. ತೊಂಬತ್ತರ ದಶಕದಲ್ಲಿ ತೆರೆಕಂಡ ಈ ಸಿನಿಮಾ ಇದೀಗ ಹೊಸ ತಂತ್ರಜ್ಞಾನದಲ್ಲಿ ರೀ-ರಿಲೀಸ್ ಆಗುತ್ತಿದೆ.
Vijaya Karnataka Web shivarjkumars mutthanna movie re release
ಶಿವರಾಜ್ ಕುಮಾರ್ 'ಮುತ್ತಣ್ಣ' ರೀ-ರಿಲೀಸ್


1994ರಲ್ಲಿ ಬಿಡುಗಡೆಯಾದ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಶ್ರೀ ಕಾವೇರಿ ಅಮ್ಮ ಫಿಲಂಸ್ ಲಾಂಛನದಡಿಯಲ್ಲಿ ಎಲ್.ಸೋಮಣ್ಣಗೌಡ ನಿರ್ಮಾಣದ ಚಿತ್ರವನ್ನು ಎಂ.ಎಸ್.ರಾಜಶೇಖರ್ ನಿರ್ದೇಶಿಸಿದ್ದಾರೆ. ಶಿವರಾಜ್‍ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ಬಹು ತಾರಾಗಣವನ್ನೆ ಹೊಂದಿದೆ.

ಇದೀಗ ಚಿತ್ರವನ್ನು 7.1 Dolby, Digital Sound, 4K U.H.D ತಂತ್ರಜ್ಞಾನವನ್ನು ಅಳವಡಿಸಿ ಮತ್ತೆ ತೆರೆಗೆ ತರುತ್ತಿದ್ದಾರೆ. ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಂತಹ (ಮುತ್ತಣ್ಣ ಪೀಪೀ ಊದುವ, ನೂರು ನೂರು ಕೊಹಿನೂರು ಕೂಗಿಕೊಟ್ಟರು) ಗೀತೆಗಳು ಇಂದಿಗೂ ಭಾರೀ ಜನಪ್ರಿಯತೆಯಾಗಿವೆ.

ಚಿತ್ರದಲ್ಲಿ ಶಿವರಾಜ್‍ಕುಮಾರ್ ಜೋಡಿಯಾಗಿ ಸುಪ್ರಿಯಾ,ಸ್ನೇಹಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶಶಿಕುಮಾರ್, ದೊಡ್ಡಣ್ಣ, ಮಾ. ಚಿರಾಗ್, ಸತ್ಯಜಿತ್, ಭವ್ಯಶ್ರೀ ರೈ ಮುಂತಾದವರು ಅಭಿನಯಿಸಿದ್ದರು. ಚಿತ್ರವು ಆಗಸ್ಟ್ ಅಂತ್ಯದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕ ಸೋಮಣ್ಣಗೌಡ ತಿಳಿಸಿದ್ದಾರೆ.

ಈ ಸಿನಿಮಾದಲ್ಲಿ ಶಿವರಾಜ್ ಕುಮಾರ ಅವರ ಹಿರಿಯ ಪುತ್ರಿ ನಿರುಪಮಾ ಅವರು ಬಾಲ ಕಲಾವಿದೆಯಾಗಿ ಅಭಿನಯಿಸಿದ್ದಾರೆ. ಅಂದಹಾಗೆ ಇದು ಹಿಂದಿಯ 'ಸಚ್ಚಾ ಜೂಟಾ' ಚಿತ್ರದ ರೀಮೇಕ್. ರಾಜೇಶ್ ಖನ್ನಾ, ಮುಮ್ತಾಜ್ ಮುಖ್ಯಭೂಮಿಕೆಯಲ್ಲಿದ್ದ ಸಿನಿಮಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌