ಆ್ಯಪ್ನಗರ

ದೇವರಾಜ್ ಕೆಲಸ ಮಾಡಿದ್ದ ಸ್ಥಳದಲ್ಲಿ ಮಗ ಪ್ರಜ್ವಲ್ ಸಿನಿಮಾ ಶೂಟಿಂಗ್!

ಚೌಕ ಚಿತ್ರದ ಬಳಿಕ ನಟ ಪ್ರಜ್ವಲ್ ದೇವರಾಜ್ ಅವರ ನಟನೆಯ ಯಾವ ಸಿನಿಮಾ ಸಹ ಗೆದ್ದಿಲ್ಲ. ಆ ಸಮಯದಲ್ಲಿ ಬಹಳಷ್ಟು ಜನರು ಅವರ ಕೆರಿಯರ್ ಕಥೆ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಇತ್ತೀಚೆಗೆ ನಟ ಪ್ರಜ್ವಲ್ ದೇವರಾಜ್ ಹಲವು ಸಿನಿಮಾಗಳಿಗೆ ಮತ್ತೆ ನಾಯಕರಾಗಿ ನಟಿಸುತ್ತಿದ್ದಾರೆ.

Vijaya Karnataka Web 20 May 2019, 2:20 pm
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಭಾವುಕರಾಗಿದ್ದಾರೆ. ಅದಕ್ಕೆ ಕಾರಣ ಅವರ ಅಪ್ಪ ಡೈನಾಮಿಕ್ ಸ್ಟಾರ್ ದೇವರಾಜ್. ಹೌದು, ನಟ ದೇವರಾಜ್ ಅವರು 30 ವರ್ಷಗಳ ಕಾಲ ಕೆಲಸ ಮಾಡಿದ್ದ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಮಗ ಪ್ರಜ್ವಲ್ ದೇವರಾಜ್ ಸಿನಿಮಾ ಶೂಟಿಂಗ್ ನಡೆದಿದೆ. ಈ ಕಾರಣಕ್ಕೆ ಪ್ರಜ್ಷಲ್ ದೇವರಾಜ್ ಅವರು ತುಂಬಾ ಭಾವುಕರಾಗಿದ್ದಾರೆ ಎನ್ನಲಾಗಿದೆ.
Vijaya Karnataka Web prajwal2005


ಚೌಕ ಚಿತ್ರದ ಬಳಿಕ ನಟ ಪ್ರಜ್ವಲ್ ದೇವರಾಜ್ ಅವರ ನಟನೆಯ ಯಾವ ಸಿನಿಮಾ ಸಹ ಗೆದ್ದಿಲ್ಲ. ಆ ಸಮಯದಲ್ಲಿ ಬಹಳಷ್ಟು ಜನರು ಅವರ ಕೆರಿಯರ್ ಕಥೆ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಇತ್ತೀಚೆಗೆ ನಟ ಪ್ರಜ್ವಲ್ ದೇವರಾಜ್ ಹಲವು ಸಿನಿಮಾಗಳಿಗೆ ಮತ್ತೆ ನಾಯಕರಾಗಿ ನಟಿಸುತ್ತಿದ್ದಾರೆ. ಅದರಲ್ಲೊಂದು ಸಿನಿಮಾದ ಶೂಟಿಂಗ್ ಪ್ರಜ್ವಲ್ ಅಪ್ಪ ದೇವರಾಜ್ ಕೆಲಸ ಮಾಡಿರುವ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ನಡೆದಿದೆ. ಈ ಕಾರಣದಿಂದ ಮಗ ದೇವರಾಜ್ ಮಗ ಪ್ರಜ್ವಲ್ ಸಖತ್ ಖುಷಿಯಾಗಿದ್ದಾರೆ. ಜೊತೆಗೆ, ಭಾವುಕರೂ ಆಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟ ಪ್ರಜ್ವಲ್ ದೇವರಾಜ್ "ನನ್ನ ಅಪ್ಪ 30 ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ನನ್ನ ಸಿನಿಮಾ ಶೂಟಿಂಗ್ ನಡೆದಿದೆ. ಅಮದು ಅಪ್ಪ ಕಷ್ಟಪಟ್ಟು ಮೇಲೆ ಬಂದಿರುವ ಕಾರಣಕ್ಕೆ ಇಂದು ನನ್ನ ಜೀವನ ಚೆನ್ನಾಗಿದೆ. ಕೆಲಸ ಮಾಡುತ್ತಿದ್ದ ಆ ಸಮಯದಲ್ಲಿ ನಮ್ಮಪ್ಪ 'ಮುಂದೊಮ್ಮೆ ತಾವು ಇಷ್ಟು ದೊಡ್ಡ ಸ್ಟಾರ್ ಆಗುತ್ತೇನೆ ಎಂದಾಗಲೀ ಅಥವಾ ನನ್ನ ಮಗ ಮುಂದೆ ನಟನಾಗಿ ಇಲ್ಲಿ ಶೂಟಿಂಗ್ ನಡೆಯುತ್ತದೆ ಎಂದಾಗಲೀ' ಕನಸಿನಲ್ಲೂ ಎಣಿಸಿರಲಿಲ್ಲ. ಅದೇ ಜೀವನ! ನಮಗೆ ಏನು ಸಿಗಬೇಕೋ ಅದು ಸಿಗುತ್ತದೆ. ಆದರೆ ಅದಕ್ಕಾಗಿ ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ" ಎಂದಿದ್ದಾರೆ.

ಅಷ್ಟೇ ಅಲ್ಲ, ನಟ ಪ್ರಜ್ವಲ್ ದೇವರಾಜ್ "ನಾನು ಡೈನಾಮಿಕ್ ಸ್ಟಾರ್ ಮಗನಾಗಿರುವುದು ತುಂಬಾ ಅದೃಷ್ಟದ ಸಂಗತಿ. ಈ ಕಾರಣಕ್ಕೆ ನಾನು ಸಿನಿಮಾರಂಗಕ್ಕ ಕಾಲಿಟ್ಟು ನಟನೆಯ ಮೂಲಕ ಬಹಳಷ್ಟು ಜನರನ್ನು ರಂಜಿಸಲು ಸಾಧ್ಯವಾಗಿದೆ. ಮಕ್ಕಳಾದ ನಮ್ಮ ಇಂದಿನ ಉತ್ತಮ ಸ್ಥಿತಿಗೆ ಕಾರಣಕರ್ತರಾದ ನಮ್ಮಪ್ಪನಿಗೆ ನಿಜವಾಗಿಯೂ ಹೃದಯಪೂರ್ವಕ ಕೃತಜ್ಞತೆಗಳು" ಎಂದಿದ್ದಾರೆ. ಒಟ್ಟಿನಲ್ಲಿ ತಮ್ಮ ಅಪ್ಪನನ್ನು ನೆನೆದು ಪ್ರಜ್ವಲ್ ತುಂಬಾ ಭಾವುಕತೆಗೆ ಒಳಗಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌