ಆ್ಯಪ್ನಗರ

ವಿಕ ಕಿರು ಚಿತ್ರೋತ್ಸವಕ್ಕೆ ಕ್ಷಣಗಣನೆ

ವಿಜಯ ಕರ್ನಾಟಕ-ಲವಲವಿಕೆ 'ಕಿರು ಚಿತ್ರೋತ್ಸವ'ಕ್ಕೆ ಕ್ಷಣಗಣನೆ ಶುರುವಾಗಿದೆ. ಜು.30ರಂದು ವರ್ಣರಂಜಿತ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈಗ ಪ್ರಶಸ್ತಿಗಳ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದೆ.

Vijaya Karnataka 26 Jul 2018, 5:00 am
ದಿನ ಪತ್ರಿಕೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ವಿಜಯ ಕರ್ನಾಟಕ- ಲವಲವಿಕೆ ಏರ್ಪಡಿಸಿರುವ ಕನ್ನಡ ಕಿರು ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜುಲೈ 30ರಂದು ಬೆಂಗಳೂರಿನ ರಾಜ್ಯ ಚಲನ ಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಿನಿಮಾ, ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ.
Vijaya Karnataka Web hemanth rao


ಸ್ಪರ್ಧೆಯಲ್ಲಿ ಕರ್ನಾಟಕದ ತರುಣ ನಿರ್ದೇಶಕರು ಉತ್ಸಾಹದಿಂದ ಪಾಲ್ಗೊಂಡಿದ್ದು, ವೈವಿಧ್ಯಮಯ ಕಿರುಚಿತ್ರಗಳು ಬಂದಿವೆ. ಪ್ರಶಸ್ತಿ ಹಂತದ ಮೊದಲ ಹಂತದ ಆಯ್ಕೆಯ ಪ್ರಕ್ರಿಯೆಯಲ್ಲಿ ಚೂರಿಕಟ್ಟೆ ಸಿನಿಮಾ ಖ್ಯಾತಿಯ ನಿರ್ದೇಶಕ ರಾಘು ಶಿವಮೊಗ್ಗ ಮತ್ತು ಟಗರು ಚಿತ್ರದ ಸಂಭಾಷಣೆಕಾರ ಮಾಸ್ತಿ ಮಾಡಿದ್ದಾರೆ. ಎರಡನೆ ಹಂತದ ಆಯ್ಕೆಯ ಪ್ರಕ್ರಿಯೆಯಲ್ಲಿ ಕಿರಿಕ್‌ಪಾರ್ಟಿ ಚಿತ್ರದ ಖ್ಯಾತಿಯ ರಿಷಭ್‌ ಶೆಟ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶಕ ಹೇಮಂತ್‌ ಕುಮಾರ್‌ ಮತ್ತು ನಟಿ ಹಾಗೂ ಸೆನ್ಸಾರ್‌ ಮಂಡಳಿ ಸದಸ್ಯೆ ಜಯಲಕ್ಷ್ಮಿ ಪಾಟೀಲ್‌ ಪಾಲ್ಗೊಂಡಿದ್ದಾರೆ.ಯಾರ ಮಡಿಲಿಗೆ ಪ್ರಶಸ್ತಿ ಎಂಬುದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಯೇ ಬಹಿರಂಗವಾಗಲಿದೆ.

'ಯುವ ನಿರ್ದೇಶಕರು ಕಿರು ಚಿತ್ರಗಳ ಮೂಲಕ ತಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳುತ್ತಿದ್ದಾರೆ. ಇಂಥವರಿಗೆ ವಿಜಯ ಕರ್ನಾಟಕ ಪತ್ರಿಕೆಯ ಸೂಕ್ತ ವೇದಿಕೆ ಕಲ್ಪಿಸಿದೆ. ಒಳ್ಳೊಳ್ಳೆ ಚಿತ್ರಗಳು ಬಂದಿದ್ದರೂ, ಹೊಸ ಹೊಸ ವಿಚಾರಗಳತ್ತ ನಿರ್ದೇಶಕರು ಯೋಚಿಸಬೇಕಿತ್ತು. ಮುಂದಿನ ದಿನಗಳಲ್ಲಿ ಅದನ್ನು ಮಾಡುತ್ತಾರೆಂಬ ನಂಬಿಕೆ ನನ್ನದು' ಎಂಬುದು ಮೊದಲ ಹಂತದ ಆಯ್ಕೆದಾರರ ತಂಡದಲ್ಲಿದ್ದ ನಿರ್ದೇಶಕ ರಾಘು ಶಿವಮೊಗ್ಗ ಅವರ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌