ಶ್ರದ್ಧಾ ಶ್ರೀನಾಥ್ ಈಗ ಪರಭಾಷಾ ಚಿತ್ರಗಳಲ್ಲೇ ಬಿಝಿ. ಬಾಲಿವುಡ್ಗೂ ಹಾರಿರುವ ಶ್ರದ್ಧಾ ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಟಾಲಿವುಡ್ನ ಸ್ಟಾರ್ ನಟ ನಾನಿ ಜತೆ ಜರ್ಸಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡೊಂದರ ವಿಡಿಯೋ ರಿಲೀಸ್ ಆಗಿದ್ದು, ಇದರಲ್ಲಿ ಶ್ರದ್ಧಾ ಲಿಪ್ ಲಾಕ್ ಮಾಡಿರುವುದಕ್ಕೆ ಕನ್ನಡ ಸಿನಿ ಪ್ರಿಯರು ಹುಬ್ಬೇರಿಸಿದ್ದಾರೆ. ಕನ್ನಡ ಚಿತ್ರಗಳಲ್ಲಿ ಮಡಿವಂತಿಕೆ ತೋರುವ ನಟಿಯರು ಪರಭಾಷೆಯಲ್ಲಿ ಇದನ್ನು ಹೇಗೆ ಒಪ್ಪುತ್ತಾರೆ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎದ್ದ ಇಂಥ ಪ್ರಶ್ನೆಗಳಿಗೆ ಶ್ರದ್ಧಾ ಉತ್ತರ ನೀಡಿದ್ದಾರೆ.
ಕತೆಗೆ ಅಗತ್ಯವಿದ್ದಿದ್ದರಿಂದಲೇ ಈ ದೃಶ್ಯಕ್ಕೆ ಒಪ್ಪಿಗೆ ನೀಡಿದೆ ಎಂದಿದ್ದಾರೆ ಅವರು. 'ಇದೊಂದು ಪಾತ್ರವನ್ನಾಗಿ ನೋಡಿ. ಕತೆಗೆ ಅಗತ್ಯವಿದ್ದರೆ, ಇತಿಮಿತಿಯೊಳಗೆ ನಟಿಸುವೆ' ಎಂದಿದ್ದಾರೆ. ಸಿನಿ ಪ್ರಿಯರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ, ಶ್ರದ್ಧಾ ಮೊದಲ ಕನ್ನಡ ಚಿತ್ರ ಯು ಟರ್ನ್ನಲ್ಲಿ ಇಂಥದ್ದೊಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯದ ಮೇಕಿಂಗ್ ವಿಡಿಯೋ ವೈರಲ್ ಆಗಿತ್ತು.
ರಶ್ಮಿಕಾ ಮಂದಣ್ಣ ಕೂಡಾ ತೆಲುಗಿನ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಹೀರೊ ವಿಜಯ್ ದೇವರಕೊಂಡ ಜತೆ ಲಿಪ್ ಲಾಕ್ ಸೀನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ಇದನ್ನು ಟ್ರೋಲ್ ಮಾಡಿದ್ದು ಅವರಿಗೆ ಅಸಮಾಧಾನವನ್ನುಂಟು ಮಾಡಿದೆ.