ಆ್ಯಪ್ನಗರ

ಸರ್ಜಾ ಜತೆ ಶ್ರುತಿ ಡ್ಯುಯೆಟ್‌

ಸಹಜಾಭಿನಯದ ಮೂಲಕ ಪ್ರೇಕ್ಷ ಕರನ್ನು ಸೆಳೆಯುವ ಶ್ರುತಿ ಹರಿಹರನ್‌ 'ವಿಸ್ಮಯ' ಸಿನಿಮಾದಲ್ಲಿ ಅರ್ಜುನ್‌ ಸರ್ಜಾಗೆ ನಾಯಕಿ.

Vijaya Karnataka Web 14 Jul 2016, 9:00 am

ತಮ್ಮ ಸಹಜಾಭಿನಯದ ಮೂಲಕ ಪ್ರೇಕ್ಷ ಕರನ್ನು ಸೆಳೆಯುವ ಶ್ರುತಿ ಹರಿಹರನ್‌ 'ವಿಸ್ಮಯ' ಸಿನಿಮಾದಲ್ಲಿ ಅರ್ಜುನ್‌ ಸರ್ಜಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Vijaya Karnataka Web shruthi hariharan with arjun sarja in movie
ಸರ್ಜಾ ಜತೆ ಶ್ರುತಿ ಡ್ಯುಯೆಟ್‌


ಅರುಣ್‌ ವೈದ್ಯನಾಥ್‌ ನಿರ್ದೇಶನದ ಸಿನಿಮಾ ತಮಿಳು ಭಾಷೆಯಲ್ಲಿಯೂ ತಯಾರಾಗುತ್ತಿದ್ದು, ತಮಿಳು ಅವತರಣಿಕೆಗೆ 'ನಿಪುಣನ್‌' ಎಂದು ನಾಮಕರಣ ಮಾಡಲಾಗಿದೆ.

ಅರ್ಜುನ್‌ ಸರ್ಜಾ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದು, ಅವರ ಪತ್ನಿ ಪಾತ್ರದಲ್ಲಿ ಶ್ರುತಿ ಹರಿಹರನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುಪಾಲು ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗುತ್ತಿದೆ.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದ ಯಶಸ್ಸಿನ ನಂತರ ಶ್ರುತಿ ಅವರಿಗೆ ಅವಕಾಶಗಳು ಹೆಚ್ಚಾಗಿವೆ. ಇದೀಗ ಅರ್ಜುನ್‌ ಸರ್ಜಾಗೆ ನಾಯಕಿಯಾಗಿ ನಟಿಸುತ್ತಿದ್ದು ಈ ಮೂಲಕ ತಮಿಳಿನಲ್ಲಿಯೂ ಮಿಂಚಲಿದ್ದಾರೆ.

'ವಿಸ್ಮಯ' ಚಿತ್ರದೊಂದಿಗೆ ತಮಿಳು ನಟ ಪ್ರಸನ್ನ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಸುಹಾಸಿನಿ, ಸುಧಾರಾಣಿ ಸೇರಿದಂತೆ ಹಲವಾರು ಅನುಭವಿ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌