ಆ್ಯಪ್ನಗರ

ಪದ್ಮಿನಿ ನಟನನ್ನು ದರ್ಶನ್‌ಗೆ ಹೋಲಿಸಿದ ಶ್ರುತಿ ನಾಯ್ಡು

ಧಾರಾವಾಹಿಯ ಮೂಲಕ ಈಗಾಗಲೇ ಪರಿಚಯ ಆಗಿರುವ ಪ್ರಮೋದ್‌, ಸದ್ಯ ಪ್ರಿಮಿಯರ್‌ ಪದ್ಮಿನಿ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರು ಥೇಟ್‌ ದರ್ಶನ್‌ ರೀತಿಯಲ್ಲೇ ಕಾಣುವುದರಿಂದ ಅವರನ್ನು ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು, ದರ್ಶನ್‌ಗೆ ಹೋಲಿಸಿದ್ದಾರೆ.

Vijaya Karnataka 25 Jan 2019, 8:41 am
ಪ್ರಿಮಿಯರ್‌ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್‌ ಜತೆಗೆ ಪ್ರಮೋದ್‌ ಎಂಬ ಯುವ ಕಲಾವಿದ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು, ಆ ಹುಡುಗನನ್ನು ಜ್ಯೂ.ದರ್ಶನ್‌ ಎಂದೇ ಕರೆಯುತ್ತಾರೆ.
Vijaya Karnataka Web Pramod


ಧಾರಾವಾಹಿಯ ಮೂಲಕ ಈಗಾಗಲೇ ಪರಿಚಯ ಆಗಿರುವ ಪ್ರಮೋದ್‌, ಸದ್ಯ ಪ್ರಿಮಿಯರ್‌ ಪದ್ಮಿನಿ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರು ಥೇಟ್‌ ದರ್ಶನ್‌ ರೀತಿಯಲ್ಲೇ ಕಾಣುವುದರಿಂದ ಅವರನ್ನು ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು, ದರ್ಶನ್‌ಗೆ ಹೋಲಿಸಿದ್ದಾರೆ.

'ಸಡನ್ನಾಗಿ ಪ್ರಮೋದ್‌ ಅವರನ್ನು ನೋಡಿದರೆ ದರ್ಶನ್‌ ರೀತಿಯಲ್ಲಿ ಕಾಣುತ್ತಾರೆ. ಹಾಗಾಗಿ ಅವರನ್ನು ಒಂದು ಬಾರಿ ದರ್ಶನ್‌ ಅವರಿಗೂ ಭೇಟಿ ಮಾಡಿಸಿದ್ದೇವೆ. ಜ್ಯೂ.ದರ್ಶನ್‌ ಆಗಿ ಅವರು ಬೆಳೆಯುತ್ತಾರೆ ಎಂಬ ನಂಬಿಕೆ ನನ್ನದು' ಅಂತಾರೆ ಶ್ರುತಿ ನಾಯ್ಡು.

ನಾನಾ ಕಾರಣಗಳಿಂದಾಗಿ ಪ್ರಿಮಿಯರ್‌ ಪದ್ಮಿನಿ ಸಿನಿಮಾ ನಿರೀಕ್ಷೆ ಮೂಡಿಸಿದೆ. ಜಗ್ಗೇಶ್‌ ಮೊದಲ ಬಾರಿಗೆ ಹೊಸ ಬಗೆಯ ಪಾತ್ರ ಪೋಷಿಸಿದ್ದಾರೆ. ಬದುಕಿನ ಮೌಲ್ಯಗಳನ್ನು ಹೇಳುವಂತ ಸಿನಿಮಾ ಇದಾಗಿದ್ದು, ಡಿವೋರ್ಸ್‌ನಿಂದಾಗಿ ಆಗುವ ಪರಿಣಾಮಗಳನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು.

ಕಿರುತೆರೆಯಲ್ಲಿ ಅನೇಕ ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ರಮೇಶ್‌ ಇಂದಿರಾ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅನುಭವಿ ಕಲಾವಿದರ ಜತೆ ಈ ಬಾರಿ ಅವರು ಪ್ರಿಮಿಯರ್‌ ಪದ್ಮಿನಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಮೊನ್ನೆಯಷ್ಟೇ ಈ ಸಿನಿಮಾದ ಸ್ಪೆಷಲ್‌ ಹಾಡೊಂದನ್ನು ಶೂಟ್‌ ಆಗಿದ್ದು, ಈ ಗೀತೆಯನ್ನು ಯೋಗರಾಜ್‌ ಭಟ್‌ ಬರೆದಿದ್ದಾರೆ. ಈ ಹಾಡಿಗಾಗಿಯೇ ಕೆಜಿಎಫ್‌ ಚಿತ್ರಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್‌ ವಿಶೇಷ ಸೆಟ್‌ ಹಾಕಿದ್ದರು. ಇಮ್ರಾನ್‌ ಸರ್ದಾರಿಯಾ ಕೊರಿಯೋಗ್ರಫಿಯಲ್ಲಿ ಹಾಡು ಮೂಡಿ ಬಂದಿದ್ದು, ಅದ್ವೈತ ಗುರುಮೂರ್ತಿ ಸಿನಿಮಾಟೋಗ್ರಫಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌