ಆ್ಯಪ್ನಗರ

ಮನ್ಮಥುಡು 2 ಸಿನಿಮಾ ಬಿಡುಗಡೆ ಬಳಿಕ ಗಾಯಕಿ ಚಿನ್ಮಯಿ 'ಕಥೆ' ಏನು?

ಯಾವತ್ತೂ ವಿವಾದಾತ್ಮಕ ವಿಷಯಗಳಿಂದಲೇ ಹೆಚ್ಚು ಗುರುತಿಸಿಕೊಂಡಿರುವ ಚಿನ್ಮಯಿಗೆ ಮುಂದೆ ತೊಂದರೆ ಎದುರಾಗುವ ಎಲ್ಲಾ ಲಕ್ಷಣಗಳು ಕಾಣಿಸತೊಡಗಿವೆ. ಚಿನ್ಮಯಿ 'ಮೀಟೂ' ವಿಷಯಕ್ಕೆ ಸಂಬಂಧಪಟ್ಟು ಸಾಕಷ್ಟು ಹಾರಾಡಿದ್ದರು. ಅದನ್ನು ನೋಡಿ ಹಲವು ಯುವಕರು ಚಿನ್ಮಯಿ ಬಗ್ಗೆ ಆಕ್ರೋಶ ಹೊಂದಿದ್ದಾರೆ. ಇದೀಗ ಆನ್ ಲೈನ್‌ನಲ್ಲಿ ಶೇರ್ ಮಾಡುತ್ತಾ ಚಿನ್ಮಯಿ ಸೇರಿದಂತೆ ರಾಹುಲ್ ರವೀಂದ್ರನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

Vijaya Karnataka Web 7 Aug 2019, 7:32 pm
ಟಾಲಿವುಡ್‌ನ ಖ್ಯಾತ ಡಬ್ಬಿಂಗ್ ಕಲಾವಿದೆ, ಗಾಯಕಿ ಚಿನ್ಮಯಿ ಶ್ರೀಪಾದ್ ಅವರು 'ಮನ್ಮಥುಡು 2' ನಿರ್ದೇಶಕ ರಾಹುಲ್ ರವೀಂದ್ರನ್ ಅವರ ಪತ್ನಿ ಎಂಬುದು ಬಹಳಷ್ಟು ಜನರಿಗೆ ಗೊತ್ತು. ಯಾವತ್ತೂ ವಿವಾದಾತ್ಮಕ ವಿಷಯಗಳಿಂದಲೇ ಹೆಚ್ಚು ಗುರುತಿಸಿಕೊಂಡಿರುವ ಚಿನ್ಮಯಿಗೆ ಮುಂದೆ ತೊಂದರೆ ಎದುರಾಗುವ ಎಲ್ಲಾ ಲಕ್ಷಣಗಳು ಕಾಣಿಸತೊಡಗಿವೆ. ಚಿನ್ಮಯಿಗೆ ಈಗಾಗಲೇ ಸೋಷಿಯಲ್ ಮೀಡಿಯಗಳಲ್ಲಿ 'ಕ್ಲಾಸ್' ಶುರುವಾಗಿದೆ.
Vijaya Karnataka Web chinmayi0708


ಏಕೆಂದರೆ, ಚಿನ್ಮಯಿ 'ಮೀಟೂ' ವಿಷಯಕ್ಕೆ ಸಂಬಂಧಪಟ್ಟು ಸಾಕಷ್ಟು ಹಾರಾಡಿದ್ದರು. ಅದನ್ನು ನೋಡಿ ಹಲವು ಯುವಕರು ಚಿನ್ಮಯಿ ಬಗ್ಗೆ ಆಕ್ರೋಶ ಹೊಂದಿದ್ದಾರೆ. ಬಹಳಷ್ಟು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಚಿನ್ಮಯಿ ವಿರುದ್ಧ ಟೀಕೆಗಳ ಸುರಿಮಳೆ ಸುರಿಸಿದ್ದರು. ಇದೀಗ 'ಮನ್ಮಥುಡು 2' ಚಿತ್ರದ ಬಿಡುಗಡೆ ವೇಳೆ ಇದೇ ಕಮೆಂಟ್ ಗಳನ್ನು ಮುಂದಿಟ್ಟುಕೊಂಡು ಯುವಕರು ಟೀಕೆ ಮಾಡಲು ಶುರು ಮಾಡಿದ್ದಾರೆ.

'ಮನ್ಮಥುಡು 2' ಟ್ರೇಲರ್ ನಲ್ಲಿ ನಾಯಕಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡ ರೀತಿ, ನಾಯಕ ನಾಗಾರ್ಜುನ್ ಅಕ್ಕಿನೇನಿ ಹೊಡೆಯುವ ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಮುಂದಿಟ್ಟುಕೊಂಡು ಟ್ರೋಲಿಗರು ಇತ್ತೀಚೆಗೆ ಚಿನ್ಮಯಿ ಪತಿ ರಾಹುಲ್ ಅವರನ್ನು ಹೇಗೆ ಬೇಕೆಂದರೆ ಹಾಗೆ ಟ್ರೋಲ್ ಮಾಡತೊಡಗಿದ್ದಾರೆ. ಅಷ್ಟೇ ಅಲ್ಲ, ಸೆನ್ಸಾರ್ ಮಂಡಳಿ ಚಿತ್ರದಲ್ಲಿ ಬಳಸಲಾದ ಅವಾಚ್ಯ ಶಬ್ದಗಳನ್ನು ಮ್ಯೂಟ್ ಮಾಡಿರುವುದು ಚಿನ್ಮಯಿ ವಿರೋಧಿಗಳಿಗೆ ಆಹಾರವಾಗಿದೆ.

ಅದೇ ಸೆನ್ಸಾರ್ ಕಾಪಿ ಇಟ್ಟುಕೊಂಡು ಇದೀಗ ಆನ್ ಲೈನ್‌ನಲ್ಲಿ ಶೇರ್ ಮಾಡುತ್ತಾ ಚಿನ್ಮಯಿ ಸೇರಿದಂತೆ ರಾಹುಲ್ ರವೀಂದ್ರನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಪತಿ ತನ್ನ ಚಿತ್ರದಲ್ಲಿ ಮಹಿಳೆಯರಿಗೆ 'ಸೂಳೆ' ಮತ್ತು 'ಬಿಚ್' ಪದಗಳನ್ನು ಬಳಸಿದರೂ ಚಿನ್ಮಯಿ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ. ಚಿತ್ರ ಬಿಡುಗಡೆಗಿಂತ ಮೊದಲೇ ಚಿನ್ಮಯಿ ಇಷ್ಟೊಂದು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಇನ್ನು ಚಿತ್ರ ಬಿಡುಗಡೆ ಬಳಿಕ ಅವರನ್ನು ಯಾವ ಪರಿ ಟ್ರೋಲ್ ಮಾಡಬಹುದು ಎಂಬುದನ್ನು ಊಹಿಸಲು ಅಸಾಧ್ಯ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌