ಆ್ಯಪ್ನಗರ

ಭರ್ಜರಿ ಕಿಸ್‌ ಮಾಡಿದ ಸುಶೀಲಾ

'ಕಿಸ್‌' ಚಿತ್ರದಲ್ಲಿ ವ್ಯಾಲೆಂಟೈನ್ಸ್‌ ಡೇಗಾಗಿಯೇ ಒಂದು ಹಾಡನ್ನು ರೆಡಿ ಮಾಡಿದ್ದಾರೆ ನಿರ್ದೇಶಕ ಎ.ಪಿ.ಅರ್ಜುನ್‌. ಈ ಹಾಡಿನಲ್ಲಿ ಯುವ ಪ್ರತಿಭೆ ವಿರಾಟ್‌ ಕಾಣಿಸಿಕೊಂಡಿದ್ದಾರೆ.

Vijaya Karnataka 11 Jan 2019, 10:03 am
ವಿಭಿನ್ನ ಫೋಟೋ ಶೂಟ್‌ನಿಂದಾಗಿಯೇ ಗಮನ ಸೆಳೆದಿರುವ ಕಿಸ್‌ ಸಿನಿಮಾದಲ್ಲಿ ಪ್ರೇಮಿಗಳಿಗಾಗಿಯೇ ವಿಶೇಷ ಹಾಡೊಂದನ್ನು ಮಾಡಿದ್ದಾರಂತೆ ನಿರ್ದೇಶಕ ಎ.ಪಿ.ಅರ್ಜುನ್‌. ಈ ಹಾಡನ್ನು ಅವರು ಪ್ರೇಮಿಗಳ ದಿನಕ್ಕಾಗಿ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. ಕ್ಯಾಚಿ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡಿಗೆ ಯುವ ಪ್ರತಿಭೆ ವಿರಾಟ್‌ ಹೆಜ್ಜೆ ಹಾಕಿದ್ದಾರೆ.
Vijaya Karnataka Web KISS


'ಶೀಲಾ ಸುಶೀಲಾ ಯು ಡೋಂಟ್‌ ವರಿ... ನಾನೇ ಫೆರಾರಿ ನೀ ಸ್ವೀಟು ಚೆರಿ...' ಎಂಬ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ ರಿಲೀಸ್‌ ಆಗಿದ್ದು, ಉತ್ತಮ ರೆಸ್ಪಾನ್ಸ್‌ ಬಂದಿದೆಯಂತೆ.

'ವ್ಯಾಲೆಂಟೈನ್ಸ್‌ ಡೇಗಾಗಿಯೇ ಮಾಡಿರುವ ಹಾಡು ಇದಾಗಿದ್ದು, ಸುಮ್ಮನೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಕ್ಷಣಾರ್ಧದಲ್ಲೇ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಕಂಡು ನನಗೇ ಅಚ್ಚರಿ ಆಯಿತು. ಐದು ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ವೀಕ್ಷಿಸಿದ್ದಾರೆ. ಪ್ರೇಮಿಗಳ ದಿನದ ಮುನ್ನವೇ ಈ ಪ್ರಮಾಣದಲ್ಲಿ ಪ್ರತಿಕ್ರಿಯೆ ಸಿಕ್ಕಿದ್ದು ಸಹಜವಾಗಿಯೇ ಖುಷಿ ಆಗಿದೆ' ಎಂದಿದ್ದಾರೆ ನಿರ್ದೇಶಕರು.

ಎ.ಪಿ.ಅರ್ಜುನ್‌ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡಿಗೆ ಚಂದನ್‌ ಶೆಟ್ಟಿ ದನಿಯಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, 'ಫಸ್ಟ್‌ ರಾರ‍ಯಂಕ್‌' ಖ್ಯಾತಿಯ ಅಪೂರ್ವ ಗೌಡ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಮ್ರಾನ್‌ ಸರ್ದಾರಿಯಾರ ಕೊರಿಯೋಗ್ರಫಿ ಹಾಡಿಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌