ಆ್ಯಪ್ನಗರ

ಸರ್ಜರಿಯನ್ನು ಮುಚ್ಚಿಡದೇ ಜಗಜ್ಜಾಹೀರು ಮಾಡಿದ ನಿಕೇಶಾ ಪಟೇಲ್!

ಆದರೆ ನಟಿ ನಿಕೇಶಾ ಅವರ ಸಿನಿಮಾ ಜರ್ನಿಯ ಮಧ್ಯೆ ಇನ್ನೊಂದು ಶಾಕಿಂಗ್ ನ್ಯೂಸ್ ಕೂಡ ಕೇಳಿ ಬಂದಿತ್ತು. ಇತ್ತೀಚೆಗೆ ನಿಕೇಶಾ ಅವರಿಗೆ ಮುಂಬೈ ಆಸ್ಪತ್ರೆಯಲ್ಲಿ ಗುಟ್ಟಾಗಿ ಆಪರೇಷನ್ ನಡೆದಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಯಾವುದೇ ರೀತಿಯ ಮಾಹಿತಿ ಬಹಿರಂಗವಾಗಿರಲಿಲ್ಲ.

Vijaya Karnataka Web 5 May 2019, 10:00 pm
ಕನ್ನಡದ 'ವರದನಾಯಕ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ನಟಿಸಿರುವ ನಿಕೇಶಾ ಪಟೇಲ್, ಆ ಬಳಿಕ ನರಸಿಂಹ, ಡಕೋಟ ಪಿಕ್ಚರ್, ನಮಸ್ತೇ ಮೇಡಂ, ಅಲೋನ್ ಎಂಬ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಕನ್ನಡ ಭಾಷೆಯ ಸಿನಿಮಾಗಳಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲೂ ನಿಕೇಶಾ ಪಟೇಲ್ ಕಾಣಿಸಿಕೊಂಡಿದ್ದಾರೆ. ತಮಿಳಿನ ತಲೈವನ್, ಕರೈಯೋರಂ, ನಾರದನ್, 7 ನಾಟ್ಕಲ್, ಭಾಸ್ಕರ್ ಒರು ರಾಸ್ಕಲ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಿಕೇಶಾ ಪಟೇಲ್, ಸದ್ಯ ಎಝಿಲ್ ನಿರ್ದೇಶನದ ಹೊಸ ಚಿತ್ರದ ಶೂಟಿಂಗ್ ಮಗಿಸಿದ್ದಾರೆ.
Vijaya Karnataka Web nikesha0505


ಆದರೆ ನಟಿ ನಿಕೇಶಾ ಅವರ ಸಿನಿಮಾ ಜರ್ನಿಯ ಮಧ್ಯೆ ಇನ್ನೊಂದು ಶಾಕಿಂಗ್ ನ್ಯೂಸ್ ಕೂಡ ಕೇಳಿ ಬಂದಿತ್ತು. ಇತ್ತೀಚೆಗೆ ನಿಕೇಶಾ ಅವರಿಗೆ ಮುಂಬೈ ಆಸ್ಪತ್ರೆಯಲ್ಲಿ ಗುಟ್ಟಾಗಿ ಆಪರೇಷನ್ ನಡೆದಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಯಾವುದೇ ರೀತಿಯ ಮಾಹಿತಿ ಬಹಿರಂಗವಾಗಿರಲಿಲ್ಲ.

ಆದರೆ ಹಾರಾಡಿದ ಸುದ್ದಿ ಬಗ್ಗೆ ಸ್ವತಃ ನಟಿ ನಿಕೇಶಾ ಪಟೇಲ್ " ಹರಿದಾಡಿದ್ದ ಸುದ್ದಿ ಅಕ್ಷರಶಃ ನಿಜ.. ನನಗೆ ಸಣ್ಣ ಆಪರೇಷನ್ ಆಗಿದ್ದು ನಿಜ. ಆದರೆ ನಾನೀಗ ಚೆನ್ನಾಗಿಯೇ ಇದ್ದೇನೆ. ಎಝಿಲ್ ಚಿತ್ರದಲ್ಲಿನ ತನ್ನ ಶೂಟಿಂಗ್ ಕಂಪ್ಲೀಟ್ ಆಗಿದೆ. ಹೊಸ ಪ್ರಾಜೆಕ್ಟ್‌ಗಾಗಿ ನಿರೀಕ್ಷಿಸುತ್ತಿದ್ದೇನೆ..' ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲಿಗೆ, ಶಾಕ್ ಆಗಿದ್ದ ನಿಕೇಶಾ ಅಭಿಮಾನಿಗಳು ಸಂತೋಷದ ನಿಟ್ಟುಸಿರು ಬಿಟ್ಟಿದ್ದಾರೆ. ನಿಕೇಶಾ ವಿಷಯದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಸಂಗತಿಯಘ ಎಲ್ಲೆಡೆ ಹರಿದಾಡತೊಡಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌