ಆ್ಯಪ್ನಗರ

ಸೆ.27ಕ್ಕೆ 'ಕಿಸ್' ಕೊಡೋಕೆ ರೆಡಿಯಾದ ಸ್ಯಾಂಡಲ್‌ವುಡ್ ಹೀರೋಯಿನ್ ಶ್ರೀಲೀಲಾ

'ಕಿಸ್' ಅಂತ ಸಿನಿಮಾ ಹೆಸರು ಕೇಳಿದಾಕ್ಷಣ ಅದು ಕುಟುಂಬಸ್ಥರು ಕುಳಿತು ನೋಡುವ ಸಿನಿಮಾ ಅಲ್ಲ ಅಂತ ಮಾತ್ರ ತಿಳಿಯಬೇಡಿ. ಕಿಸ್ ಎನ್ನೋದು ಯುನಿವರ್ಸಲ್ ಭಾಷೆ. 'ಕಿಸ್' ಚಿತ್ರದ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಚಿತ್ರತಂಡ ಎದುರಾಗಿತ್ತು.

Vijaya Karnataka Web 16 Sep 2019, 7:34 pm
ಸಾಮಾಜಿಕ ಜಾಲತಾಣದಲ್ಲಿ ಹಲವು ಲವಸ್ಟೋರಿ ಇರುತ್ತವೆ. ಅದರಲ್ಲಿಯೇ ಒಂದು ಸ್ಟೋರಿ ಈ 'ಕಿಸ್' ಸಿನಿಮಾದ ಕಥಾಹಂದರವಾಗಿರುತ್ತದೆ. 'ಕಿಸ್' ಸಿನಿಮಾ ಟೈಟಲ್‌ಗೆ ತುಂಟ ತುಟಿಗಳ ಆಟೋಗ್ರಾಫ್ ಎಂಬ ಅಡಿಬರಹವೂ ಇದೆ. ಈ ಚಿತ್ರಕ್ಕೆ ಎ.ಪಿ.ಅರ್ಜುನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ 'ಮಿಸ್ಟರ್ ಐರಾವತ, ಅದ್ದೂರಿ, ಅಂಬಾರಿ, ರಾಟೆ' ಸಿನಿಮಾಕ್ಕೆ ನಿರ್ದೇಶನ ಮಾಡಿದ್ದರು. 'ಮಿಸ್ಟರ್ ಐರಾವತ'ದಲ್ಲಿ ದರ್ಶನ್ ಅವರನ್ನು ಬಿಟ್ಟರೆ ಉಳಿದ ಚಿತ್ರಗಳನ್ನು ಅವರು ಮಾಡಿರುವುದು ಹೊಸ ಹೀರೋಗಳ ಜೊತೆಗೇನೆ.
Vijaya Karnataka Web kiss


'ಕಿಸ್' ಚಿತ್ರದ ಹೀರೋ ಮೈಸೂರಿನ ವಿರಾಟ್. ನಾಯಕಿ ಶ್ರೀಲೀಲಾ. ವಿರಾಟ್‌ಗೆ ಇದು ಮೊದಲ ಚಿತ್ರ. ವರ್ಷಗಳ ಹಿಂದೆ ಬರುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆಶಿತಾ ಚಂದ್ರಪ್ಪ ಜೊತೆಗೆ ವಿರಾಟ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ರೀಲೀಲಾ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ವಿರಾಟ್‌ದು ಶ್ರೀಮಂತ ಹುಡುಗನ ಪಾತ್ರ. ಬಯಸಿದ್ದನ್ನು ದಕ್ಕಿಸಿಕೊಳ್ಳಬೇಕು ಎನ್ನುವ ಸ್ವಭಾವವನ್ನು ವಿರಾಟ್ ಪಾತ್ರ ಹೊಂದಿರುತ್ತದೆ. ಶ್ರೀಲೀಲಾ ಪಾತ್ರದ ಹೆಸರು ನಂದಿನಿ. 'ನಂದಿನಿ' ಹೆಸರುಳ್ಳ ಪಾತ್ರಗಳು ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿವೆ. ಹೀಗಾಗಿ 'ಕಿಸ್' ಚಿತ್ರದ ನಾಯಕಿ ನಂದಿನಿ ತಮ್ಮ ಪಾತ್ರದ ಹೆಸರು ಅಂತ ಕೇಳಿದಾಗ ತುಂಬ ಖುಷಿ ಪಟ್ಟರಂತೆ. ಜೊತೆಗೆ ಶ್ರೀಲೀಲಾರದ್ದು ಬಬ್ಲಿ ಹುಡುಗಿ ಪಾತ್ರ.
""

"ಕಿಸ್ ಸಿನಿಮಾಕ್ಕೆ ಈ ನಾಯಕಿ, ನಾಯಕ ಆಯ್ಕೆ ಮಾಡಲು ಕಾರಣವಿದೆ. ಅದು ಸಿನಿಮಾದಲ್ಲಿ ಗೊತ್ತಾಗತ್ತೆ. ನನ್ನ ತಾಯಿ ವಿರಾಟ್ ಬಗ್ಗೆ ಹೇಳಿದ್ದರು. ಅವರು ಹೇಳಿದ ಮೇಲೆ ಅವನನ್ನು ಆಡಿಷನ್ ಮಾಡಿದೆ. 220 ಜನರ ಆಡಿಷನ್‌ನಲ್ಲಿ ಕೊನೆಯಲ್ಲಿ ಆಯ್ಕೆ ಆಗಿದ್ದು ವಿರಾಟ್. ಎಲ್ಲ ಸೀನ್‌ಗಳಲ್ಲೂ ತುಂಬ ಚೆನ್ನಾಗಿ ನಟಿಸಿದ್ದ ವಿರಾಟ್. ಅವರ ಡಾನ್ಸ್ ನನಗೆ ತುಂಬ ಇಷ್ಟ. ಎರಡೂವರೆ ವರ್ಷದ ನಂತರ ನನ್ನ ಸಿನಿಮಾ ಬರುತ್ತಿದೆ. ಭುವನ್ ಗೌಡ ಬಳಿ ಇದ್ದ ಶ್ರೀಲೀಲಾ ಫೋಟೋ ನೋಡಿ ಇಷ್ಟ ಆಯ್ತು. ಅವಳು ಹೇಳಿದ ಡೈಲಾಗ್ ಸ್ವಲ್ಪ ತಪ್ಪಾಗಿದ್ದರೂ ಕೂಡ ಆ ಮುಗ್ಧ ಮಾತು ಕೇಳಿ ಖುಷಿಯಾಯಿತು. ತದನಂತರದಲ್ಲಿ ಅವಳ ಹಾವಭಾವ ನೋಡಿ ಇಂಪ್ರೆಸ್ ಆದೆ" ಅಂತ ಹೇಳಿದ್ದಾರೆ ಎ.ಪಿ.ಅರ್ಜುನ್.

" ಡಾನ್ಸ್, ಡೈಲಾಗ್ಸ್, ಲವ್, ಆ್ಯಕ್ಷನ್ ಇಷ್ಟಪಡುವವರಿಗೆ ಬೇಕಾದ ಎಲ್ಲ ಅಂಶ ಸಿನಿಮಾದಲ್ಲಿವೆ" ಎಂದಿದ್ದಾರೆ ನಾಯಕ ನಟ ವಿರಾಟ್
ಈ ಚಿತ್ರದ ಹಾಡುಗಳು ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಲೈಕ್ಸ್, ವೀಕ್ಷಣೆ ಕಂಡಿತ್ತು. ಉದಾಹರಣೆಗೆ "ಕಣ್ಣ ನೀರಿದು ಜಾರುತ ಇದೆ, ನೀನೇ ಮೊದಲು ನೀನೇ ಕೊನೆ" ಹಾಡುಗಳು. ಈ ಸಿನಿಮಾಕ್ಕೆ ಧ್ರುವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದರು. ಸೆಪ್ಟೆಂಬರ್ 27ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌