ಆ್ಯಪ್ನಗರ

ನಿರ್ಮಾಪಕನಾದ ಸ್ಟಿಲ್ ಛಾಯಾಗ್ರಾಹಕ ಸ್ಟಿಲ್ ಸೀನು

ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಥಿರ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಸ್ಟಿಲ್‌ ಸೀನು, ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ಮಾಣ ಮಾಡಿದ್ದಾರೆ. ಮೊದಲ ಸಿನಿಮಾಗಾಗಿ ಇವರು ಸೈಕಲಾಜಿಕಲ್‌ ಥ್ರಿಲ್ಲರ್‌ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Vijaya Karnataka 26 Oct 2018, 2:03 pm
ದರ್ಶನ್‌ ನಟನೆಯ ಕುರುಕ್ಷೇತ್ರ ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಥಿರ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು ಸ್ಟಿಲ್‌ ಸೀನು. ಮೊದಲ ಬಾರಿಗೆ ಇವರು ಸಿನಿಮಾವೊಂದನ್ನು ನಿರ್ಮಾಣ ಮಾಡಿದ್ದಾರೆ. ಗಹನ ಹೆಸರಿನಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಸೈಕಲಾಜಿಕಲ್‌ ಥ್ರಿಲ್ಲರ್‌ ಕಥೆಯಿದೆ. ಮಲೆನಾಡಿನ ವಿವಿಧ ಭಾಗಗಳಲ್ಲಿ ಈ ಸಿನಿಮಾವನ್ನು ಶೂಟಿಂಗ್‌ ಮಾಡಲಾಗಿದೆ.
Vijaya Karnataka Web sharanya-gowda


ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಪ್ರೀತ್‌ ಹಾಸನ್‌. ಮಾನಸಿಕವಾಗಿ ಸದೃಢ ಇರುವಂಥ ಹುಡುಗಿಯೊಬ್ಬಳು ಟ್ರಕ್ಕಿಂಗ್‌ಗೆ ಹೋದಾಗ ಸಿಜೋಫ್ರಿನಿಕ್‌ ಖಾಯಿಲೆಗೆ ತುತ್ತಾಗುತ್ತಾಳೆ. ಆಗ ಅವಳ ಬುದ್ಧಿ ಸೀಮಿತ ಕಳೆದುಕೊಳ್ಳುತ್ತದೆ. ಇದ್ದದ್ದು ಇಲ್ಲದಂತೆ, ಇರದೇ ಇರುವುದು ಇದ್ದಂತೆ ಭಾಸವಾಗುತ್ತದೆ. ಇದೇ ಸಮಯದಲ್ಲೇ ಚಿಕ್ಕ ಹುಡುಗಿಯೊಬ್ಬಳ ಪ್ರವೇಶದಿಂದಾಗಿ ಸಿನಿಮಾ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತದೆಯಂತೆ.

'ನಾಸ್ತಿಕ ಮತ್ತು ಆಸ್ತಿಕರ ನಡುವಿನ ತಿಕ್ಕಾಟ ಕೂಡ ಸಿನಿಮಾದಲ್ಲಿದೆ. ಟ್ರಕ್ಕಿಂಗ್‌ ಹೋದ ಸಂದರ್ಭದಲ್ಲಿ ನಡೆಯುವ ಅನೇಕ ಘಟನೆಗಳನ್ನು ಚಿತ್ರ ಕಥೆಯಲ್ಲಿ ಬಳಸಿಕೊಂಡಿದ್ದೇನೆ. ಬಯಲು ಸೀಮೆ ಮತ್ತು ಮಲೆನಾಡು ಎರಡನ್ನೂ ಬೆರೆಸಿಕೊಂಡು ಸಿನಿಮಾ ಮಾಡಿದ್ದೇನೆ' ಅಂತಾರೆ ನಿರ್ದೇಶಕರು.

ಈ ಚಿತ್ರಕ್ಕೆ ಆದಿತ್ಯ ಶೆಟ್ಟಿ ಮತ್ತು ಶಿವ ನಾಯಕರು. ಶರಣ್ಯ ಗೌಡ ಮತ್ತು ರಂಜನಿ ಶಂಖರ್‌ ನಾಯಕಿಯರು. ಎರಡು ಶೇಡ್‌ ಇರುವಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ ಶರಣ್ಯ ಗೌಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌