ಬಾಡಿ ಶೇಮಿಂಗ್ (ದೇಹದ ಆಕೃತಿ ಬಗ್ಗೆ ಅವಹೇಳನ ಮಾಡುವುದು) ವಿಚಾರದಲ್ಲಿ ಸಾಕಷ್ಟು ಅವಮಾನ ಎದುರಿಸುತ್ತಿರುವ ಅನೇಕ ನಟಿಮಣಿಯರಿದ್ದಾರೆ. ಅವರಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಸಹ ಒಬ್ಬರು. ತಾನು ದಪ್ಪ ಇರುವ ಕಾರಣ ನನ್ನ ದೇಹದ ಬಗ್ಗೆ ನಾನೇ ಅಸಹ್ಯ ಪಟ್ಟುಕೊಂಡಿದ್ದೆ ಎಂದು ಅನೇಕ ಸಲ ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ.
ಇದೀಗ ಇಂತಹ ಅವಮಾನಗಳನ್ನು ಎದುರಿಸುವವರಿಗೆ ಸಹಾಯ ಮಾಡಲು, ಇತರರಲ್ಲಿ ಸ್ಫೂರ್ತಿ ತುಂಬಲು ವಿದ್ಯಾ ಬಾಲನ್ ಖಾಸಗಿ ರೇಡಿಯೋ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ನಿರ್ವಹಿಸಲಿದ್ದಾರೆ.
ಈ ಕಾರ್ಯಕ್ರಮದ ಹೆಸರು 'ಧುನ್ ಬದಲ್ ಕೆ ತೋ ದೇಖೋ'. ಈ ಹಿನ್ನೆಲೆಯಲ್ಲಿ ಖಾಸಗಿ ಎಫ್ಎಂ ರೇಡಿಯೋ ಒಂದು ವೀಡಿಯೊವನ್ನು ರೂಪಿಸಿದೆ. ಆ ವೀಡಿಯೊದಲ್ಲಿ ಇತರರ ದೇಹದ ಆಕೃತಿ, ರೂಪವನ್ನು ನೋಡಿ ಹಂಗಿಸಬೇಡಿ ಎಂದು ಹಾಡು ಹಾಡುತ್ತಾ ವಿದ್ಯಾ ಬಾಲನ್ ಕಣ್ಣೀರಾಗಿದ್ದಾರೆ. ಸದ್ಯಕ್ಕೆ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಜೀವನದಲ್ಲಿ ಬಾಡಿ ಶೇಮಿಂಗ್ ಘಟನೆಗಳನ್ನು ಎದುರಿಸುತ್ತಿರುವ ಯುವತಿಯರು ಈ ಕಾರ್ಯಕ್ರಮದ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಅವಕಾಶ ಇದೆ.
ಇತ್ತೀಚೆಗೆ ಸಂದರ್ಶನ ಒಂದರಲ್ಲಿ ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದ್ದಾರೆ. ಜಗತ್ತನ್ನು ಪಕ್ಕಕ್ಕಿಟ್ಟು ನಮ್ಮನ್ನು ನಾನು ಗೌರವಿಸಿಕೊಳ್ಳಬೇಕು ಎಂದಿದ್ದಾರೆ. "ನನ್ನ ತೂಕದ ಜತೆಗೆ ನಾನು ಹೋರಾಡಿದ ದಿನಗಳಿವೆ. ತುಂಬಾ ಕೋಪ ಬರುತ್ತಿತ್ತು. ದ್ವೇಷಿಸುತ್ತಿದ್ದೆ. ಬದಲಾಗಬೇಕು ಎಂದುಕೊಳ್ಳುತ್ತಿದ್ದೆ. ನನ್ನ ದೇಹದ ಆಕೃತಿ ಬದಲಾದರೆ ನಾನು ತಂತೋಷವಾಗಿ ಸ್ವೀಕರಿಸಲು ಸಾಧ್ಯ. ಆಗಷ್ಟೇ ಪ್ರತಿಯೊಬ್ಬರೂ ನನ್ನನ್ನು ನಟಿಯಾಗಿ ಇಷ್ಟಪಡುತ್ತಾರೆ" ಎಂದುಕೊಳ್ಳುತ್ತಿದ್ದೆ.