ಆ್ಯಪ್ನಗರ

ಬಿಗ್ ಬಿ ಅಮಿತಾಭ್‌ ಜತೆ ಕಿಚ್ಚ ಸುದೀಪ್‌

ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಜತೆ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಕಿಚ್ಚ ಸುದೀಪ್‌. ಅಂಖೇ-2 ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರ ಮಾಡಲಿದ್ದು, ಮುಂದಿನ ವರ್ಷದಿಂದ ಶೂಟಿಂಗ್‌ ಶುರುವಾಗಲಿದೆ.

Vijaya Karnataka 19 Sep 2018, 12:08 pm
ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಜತೆ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಕಿಚ್ಚ ಸುದೀಪ್‌. ಅಂಖೇ-2 ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರ ಮಾಡಲಿದ್ದು, ಮುಂದಿನ ವರ್ಷದಿಂದ ಶೂಟಿಂಗ್‌ ಶುರುವಾಗಲಿದೆ. ರಣ್‌ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ಸುದೀಪ್‌ ಮತ್ತು ಅಮಿತಾಭ್‌ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಕಿಚ್ಚನ ಅಭಿಮಾನಿಗಳಲ್ಲಿ ಸಹಜವಾಗಿ ಸಂಭ್ರಮ ತಂದಿದೆ.
Vijaya Karnataka Web amitabh


2002ರಲ್ಲಿ ತೆರೆ ಕಂಡ ಅಂಖೇ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಚಿತ್ರಕಥೆಯ ಬಗ್ಗೆಯೂ ಮೆಚ್ಚುಗೆಯ ಮಾತು ಕೇಳಿ ಬಂದಿದ್ದು, ಮುಂದುವರೆದ ಭಾಗದಲ್ಲಿ ಯಾವ ರೀತಿಯ ಕಥೆಯ ಇರಲಿದೆ ಎಂಬ ಕುತೂಹಲ ಮೂಡಿದೆ.

ಅಂದಹಾಗೆ ಈ ಸಿನಿಮಾವನ್ನು ಅನೀಸ್‌ ಬಾಜ್ಮಿ ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ತಾರಾ ಬಳಗದ ಬಗ್ಗೆಯೂ ಮಾಹಿತಿ ನೀಡಲಿದ್ದಾರಂತೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌